238f1711-e47b-4a9e-94be-1c1771d9c4d1

ಬಿಸಿಯೂಟದ ಗೌರಮ್ಮ ಸಾವು

ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 21-   ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಆಕಸ್ಮಿಕವಾಗಿ ಅಡುಗೆ ಪಾತ್ರೆ ಮೈ ಮೇಲೆ ಬಿದ್ದು ಕನಕಪುರ ಪ್ರೌಢ ಶಾಲೆಯ ಬಿಸಿಯೂಟ ತಯಾರಕರಾದ ಮೃತಪಟ್ಟಿ ಗೌರಮ್ಮ ಇವರ ಕುಟುಂಬಕ್ಕೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್‌ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮನವಿಯಲ್ಲಿ   ಕರ್ನಾಟಕ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತೀರುವ ಬಿಸಿಯೂಟ ತಾಯಂದಿರ ಶೋಚನೀಯ ಸ್ಥಿತಿಯು ಹೇಳಲು ಆಸಾಧ್ಯ ಅನ್ನುವ ಘಟ್ಟಕ್ಕೆ ತಲುಪಿದೆ. ನೀವು ಇವರ ಗೋಳಿನ ಕತೆ ಗೊತ್ತಿದ್ದು ಅವರಿಗೊಂದು ನೆಮ್ಮದಿಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಆಲೋಚಿಸದಿರುವುದು ಬೇಸರದ ಸಂಗತಿ.   ಚುನಾವಣೆಯ ಸಂಧರ್ಭದಲ್ಲಿ ನಾವು ಮತ್ತು ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಕಾರ್ಯಕರ್ತರು ನೇರವಾಗಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿ ಯಾವ ಫಲಾಪೇಕ್ಷೆಯು ಇಲ್ಲದೆ ದುಡಿದಿದ್ದೇವೆ. ಒಂದಿಷ್ಟೂ ಸಹಾಯವಾಗಬಹುದೆಂದುಕೊಂಡಿದ್ದ ತಾಯಂದಿರುಗಳಿಗೆ ಮುಖ್ಯಮಂತ್ರಿ ಸಿದ್ರಾಮಯ್ಯ ಮತ್ತು ನಿಮ್ಮ ನೇತೃತ್ವದ ಸರಕಾರ ನಡೆಯು ನೋವುಂಟು ಮಾಡಿದೆ. ಕಡಿಮೆ ಕೂಲಿ ವಿಪರೀತ ಕೆಲಸ, ಸಾಲದೆಂಬಂತೆ ಕಿರಿಕಿರಿ, ಅಪಘಾತಕ್ಕೀಡಾಗಿ ಅದೇಷ್ಟೋ ಸಾವು ಸಂಭವಿಸಿವೆ.

ಮಹಿಳೆಯರ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಮಂತ್ರಿಗಳಿಗೆ ಕರುಣೆ ಎನ್ನುವುದೆ ಇಲ್ಲವಾಗಿದೆ. ನಿತ್ಯ ಬೆಂಕಿಯೊಂದಿಗೆ ಹೋರಾಡಿ, ತನ್ನ ಬದುಕನ್ನು ಸುಟ್ಟುಕೊಂಡು ರಾಜ್ಯದ ಎಲ್ಲಾ ಮಕ್ಕಳಿಗೂ ಪ್ರೀತಿಯಿಂದ ಉಣಬಡಿಸುವ ತಾಯಂದಿರುಗಳು ಕಣ್ಣೀರು ಹಾಕುತ್ತಿದ್ದಾರೆ. ಇದು ನಿಮ್ಮ ಸರಕಾರಕ್ಕೆ ಶಾಪವಾದಿತು.ಸಮಾಜವಾದಿ ಹಿನ್ನಲೆಯಲ್ಲಿ ಬೆಳೆದುಬಂದಿರುವ ಸಿ.ಎಂ. ಮತ್ತು ನೀವು ನೊಂದ ತಾಯಂದಿರ ಕಣ್ಣೀರೊರೆಸುವ ಯೋಜನೆಗಳನ್ನು ರೂಪಿಸಬೇಕಿದೆ. ಅವರ ಗೌರವಧನವನ್ನು ಹೆಚ್ಚಿಸುವುದರ ಜೊತೆಗೆ ಕೆಲಸ ನಿರ್ವಹಿಸು ವೇಳೆ, ಅಪಘಾತ / ಅನಾಹುತಕ್ಕೀಡಾಗಿ ಅವರು ಮೃತಪಟ್ಟಲ್ಲಿ ಆ ಕುಟುಂಬಗಳಿಗೆ ಹಾಗೂ ಗಾಯಗೊಂಡ ಮಹಿಳೆಯರಿಗೆ ಸರಕಾರ ಪರಿಹಾರವನ್ನು ನೀಡಿ ಅವರ ಬೆನ್ನಿಗೆ ನಿಲ್ಲಬೇಕಿದೆ.

ಇತ್ತೀಚಿಗೆ ಮಾರ್ಚ 15ರಂದು ರಾಮನಗರ ಜಿಲ್ಲೆ ಕನಕಪುರ ಟೌನ್,ಕರಿಯಪ್ಪ ಸ್ಮಾರಕ ಪ್ರೌಢಶಾಲೆಯಲ್ಲಿ ಅಂದು ಬೆಳಿಗ್ಗೆ ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಬಿಸಿಯೂಟ ತಯಾರಕರಾದ ಗೌರಮ್ಮ 56 ವರ್ಷ ಅವರು ಆಕಸ್ಮಿಕವಾಗಿ ಅಡುಗೆ ತಯಾರಿಸುವ ಪಾತ್ರೆ ಮೈಮೇಲೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.
ಇದರ ಜೊತೆ ಇನ್ನಿಬ್ಬರು ಅಡುಗೆಯವರಾದ ಕೆಂಪಮ್ಮ ಮತ್ತು ಇನ್ನೊಬ್ಬ ಅಡಿಗೆಯವರಾದ ಗೌರಮ್ಮ ಇವರುಗಳಿಗೆ ಕಾಲುಗಳ ಮೇಲೆ ಅಡುಗೆ ತಯಾರಾದ ಪದಾರ್ಥ ಬಿದ್ದು ಅವರು ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಕೊಪ್ಪಳ ತಾಲೂಕಿನ ಬೋಚನಳ್ಳಿ ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಕೆಲಸವನ್ನು ನಿರ್ವಸುತ್ತಿದ್ದ ದೇವಮ್ಮ ಅವರು ಅಪಘಾತಕ್ಕಿಡಾಗಿ ಮೃತಪಟ್ಟಿದ್ದಾರೆ. ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರೂ ಈ ಕುಟುಂಬಕ್ಕೆ ಒಂದು ಪೈಸೆಯಷ್ಟು ಪರಿಹಾರದ ಹಣ ಸಿಗಲಿಲ್ಲ. ಹೀಗೆ ಬಹಳಷ್ಟು ಮಂದಿ ಮೃತಪಟ್ಟಿದ್ದಾರೆ. ಇವರ ಸಾವಿಗೆ ಬೆಲೆಯೆ ಇಲ್ಲದಂತಾಗಿದೆ. ಹೀಗಿಯೇ ಮುಂದುವರಿದರೆ ಶೋಷಿತ ಈ ಸಮುದಾಯ ಆತ್ಮಹತ್ಯೆಯ ಹಾದಿ ಹಿಡಿದರೂ ಆಶ್ಚರ್ಯವಿಲ್ಲ ಎಂದು ಬೆಸರ ವ್ಯಕ್ತ ಪಡಿಸಿದ್ದಾರೆ.

ಇದಕ್ಕೆಲ್ಲ ಪರಿಹಾರವೆಂದರೆ ತಾವು ಇವರತ್ತ ಕಣ್ತೇರೆದು ನೋಡಬೇಕಾಗಿದೆ 5 ಗ್ಯಾರಂಟಿಗಳನ್ನು ಮತ್ತು ಜನಪರ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾದ ತಮಗೆ ಈ ಬಿಸಿಯೂಟ ತಾಯಂದಿರ ಕಷ್ಟಗಳಿಗೆ ಪರಿಹಾರ ಹುಡುಕುವುದು ದೊಡ್ಡ ಕೆಲಸವೇನಲ್ಲ ತಾವು ಮನಸ್ಸು ಮಾಡಬೇಕಿದೆ. ಮುಂಬರುವ ಚುನಾವಣೆ ವೇಳೆ ಕೋಮುವಾದಿಗಳ ಸೋಲಿಸಲು ಪಣತೊಟ್ಟಿರುವ ನಾವು ನಿಮ್ಮೊಂದಿಗೆ ಇರುತ್ತೇವೆ. ನಾವು ನಮ್ಮ ನಮ್ಮ ಬದುಕಿಗಿಂತ ಹೆಚ್ಚಾಗಿ ದೇಶವನ್ನು ಹೆಚ್ಚು ಪ್ರೀತಿಸುತ್ತೇವೆ. ಇಷ್ಟೊತ್ತಿಗೆ ತಾಯಂದಿರಿಗೆ ತಾವು ಸಹಾಯ ಮಾಡಬೇಕಿತ್ತು. ಕನಕಪುರ ಶಾಲೆಯ ಮೃತ ಮಹಿಳೆಗೆ ತಮ್ಮ ಕೈಯಾರೆ 25 ಲಕ್ಷ ರೂಪಾಯಿಯ ಪರಿಹಾರದ ಚೆಕ್ ಹಾಗೂ ಆ ಕುಟುಂಬಕ್ಕೊಂದು ನೌಕರಿ ನೀಡುವ ಮೂಲಕ ಸಹಕರಿಸುವಂತೆ ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಶೀಲವಂತರ್, ಗಾಳೆಪ್ಪ ಮುಂಗೋಲಿ, ಸಿದ್ಲಿಂಗಪ್ಪ ಹಡಪದ, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ರೇಣಮ್ಮ ಮಜ್ಜಗಿ ಇದರ ನೇತೃತ್ವವನ್ನು ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!