
ಬಿಸಿಲಿನ ತಾಪ ಪ್ರಾಣಿ ಪಕ್ಷಿಗಳ ನೀರಿನ ದಾಹ ನೀಗಿಸಲು ನೀರಿನ ತೊಟ್ಟಿಗೆ ನೀರು ಪೂರೈಕೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 10- ನಗರದ 150 ಎ ರಾಷ್ಟ್ರೀಯ ಹೆದ್ದಾರಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಕಳೆದ ಆರು ವರ್ಷಗಳಿಂದ ಬೇಸಿಗೆಯ ಬಿಸಿಲಿನ ತಾಪ ಹೆಚ್ಚು ಆಗುತ್ತಿರುವುದರಿಂದ ಶುದ್ಧ ಕುಡಿಯುವ ನೀರು ಅಗತ್ಯವಾಗಿದೆ ಎಂದರು.
ಸಾರ್ವಜನಿಕವಾಗಿ ಪಶು ಪಕ್ಷಿ ಜಾನುವಾರು ವಿವಿಧ ಪ್ರಾಣಿಗಳ ನೀರಿನ ದಾಹ ನೀಗಿಸಲು ನೀರಿನ ತೊಟ್ಟಿಗೆ ಪೂರೈಸಿದ ಬಿಜೆಪಿ ಚೌದ್ರಿ ಹಾರೂನ್ ಸಾಬ್ ಅವರು ಸೇವೆಯನ್ನು ನೀಡುತ್ತಿರುವುದು ಎಲ್ಲಾ ಜೀವಿ ಪಶು ಪಕ್ಷಿ ಜಾನುವಾರು ಗಳಿಗೆ ಉತ್ತಮ ಅನುಕೂಲ ವಾಗಲಿದೆ ಎಂದು ನಗರಸಭಾ ಮಾಜಿ ಸದಸ್ಯ ಹಾಜಿ ಚೌದ್ರಿ ಖಾಜಾ ಸಾಬ್ ಹಾಗೂ ಸಮಾಜ ಸುಧಾರಕ ಹಾಜಿ ಅಬ್ದುಲ್ ನಬಿ ಅವರು ಮಾತನಾಡಿ ವಿವಿಧ ಪ್ರಾಣಿ, ಪಕ್ಷಿಗಳ ಪಶುಗಳ ಕುಡಿಯುವ ನೀರಿನ ದಾಹ ನೀಗಿಸಲು ನೀರು ಉಣಿಸುವ ಸಾಧನೆಯನ್ನು ಅಳವಡಿ ಸಿರುವುದಕ್ಕೆ ಪಶು ಪಕ್ಷಿಗಳ ಪ್ರೇಮಿ ಚೌದ್ರಿ ಹಾರೂನ್ ಅವರ ಸೇವೆ ಅಮೋಘ ವಾದದ್ದು ಎಂದರು.
ಮೈಸೂರ್ ಹುಲಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಇಬ್ರಾಂಪುರ್ ಹಮೀದ್ ಸಾಬ್ ಎನ್ಎಸ್ ಸಲೀಂ ಸಾಬ್ ಅಲಿ ವಿಜಯ್ ಬಸಪ್ಪ ಉಮೇಶ್ ನಿಜಾಂ ಡಿ ಹಮೀದ್ ಮತ್ತಿತರ ಗಣ್ಯರು ಇದ್ದರು