
ಬೋಯಗೆರೆ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, (09)ರಂದು ನಗರದ ಪೂರ್ವ ವಲಯದಲ್ಲಿ ಸ. ಹಿ. ಮಾ. ಶಾಲೆ 13 ನೇ ವಾರ್ಡ್ ಬೋಯಗೆರೆ ಶಾಲೆಯಲ್ಲಿ “ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು.
ವಿಶೇಷ ಶಿಕ್ಷಕರಾದ ವೀರಬಸಪ್ಪ ರವರು ಮಾತನಾಡುತ್ತಾ,ವಿಕಲಚೇತನ ಮಕ್ಕಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು, ಹಾಗೂ ಅವುಗಳನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು. ಈ ಮಕ್ಕಳು ಸಹ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕ್ರೀಡಾಕೂಟದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಖಿನ್ನತೆಗೆ ಒಳಗಾಗಬಾರದು, ಸಾಧನೆ ಎಂಬುವುದು ಯಾರ ಅಪ್ಪನ ಸತ್ತು ಅಲ್ಲ, ಪ್ರತಿಯೊಬ್ಬರ ಅವರವರ ದೃಢ ನಿರ್ಧಾರ ಹಾಗೂ ಪ್ರಯತ್ನದ ಮೇಲೆ ಅವಲಂಬಿಸಿದೆ. ಮಕ್ಕಳಿಗೆ ವಿಕಲಚೇತನ ಎಂದು ಅನುಕಂಪ ಬೇಡ ಅವಕಾಶ ಕೊಡಿ ಎಂದು ಸ್ವ ವಿವರವಾಗಿ ಹೇಳಿ ವಿಕಲಚೇತನ ಮಕ್ಕಳಿಗೆ ಆತ್ಮಸ್ಥೈರ್ಯ ಅವರ ಮನದಲ್ಲಿ ಹುಟ್ಟುವಂತೆ ಮಾತನಾಡಿದರು. ತರುವಾಯ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳಿಗೆ ಕಿರು ಬಹುಮಾನಗಳನ್ನು ಆಗಮಿಸಿದ ಅತಿಥಿಗಳು ವಿತರಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರು physioterapy ಯ ಮಹತ್ವ ಹಾಗೂ ಅದರ ಪ್ರಯೋಜನ ಪಡೆಯಲು ತಿಳಿಸಿದರು. ವಿಕಲಚೇತನ ಮಕ್ಕಳ ಪೋಷಕರು ಅನಿಸಿಕೆಗಳನ್ನು ಬಹಳ ಸಂತಸದಿಂದ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ನಿರೂಪಕರಾಗಿ ವಿಶೇಷ ಶಿಕ್ಷಕರಾದ ಸೂರ್ಯನಾರಾಯಣ ಇವರು ನಡೆಯಿಸಿಕೊಟ್ಟರು. ವಂದನಾರ್ಪಣೆಯನ್ನು ಮಾಡುವ ಮೂಲಕ ಅರ್ಥಪೂರ್ಣವಾದ ವಿಶ್ವ ವಿಕಲಚೇತನರ ದಿನಾಚರಣೆ ಯಶಸ್ವಿಯಾಗಿ ನಡೆಯಿತು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳು, ಅವರ ಪೋಷಕರು, physioterapy ವೈದ್ಯರು, ಬಿ ಐ ಈ ಆರ್ ಟಿ ಗಳು, ಶಾಲೆಯ ಮುಖ್ಯ್ಯೊಪಾಧ್ಯಯರು, ಹಾಗೂ ಶಿಕ್ಷಕರ ಸಿಬ್ಬಂದಿಯವರು ವಿದ್ಯಾರ್ಥಿಗಳು ಮುಖಂಡರು ಆಯಾ ಇತರರು ಭಾಗವಹಿಸಿದ್ದರು.