IMG-20240512-WA0052

ಬ್ರಾಹ್ಮಣರ ಸಮುದಾಯದಿಂದ ಶಂಕರಚಾರ್ಯರ ಜಯಂತಿ ಆಚರಣೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 12- ಶ್ರೀ ಶಾರದಾ ಶಂಕರ ಸೇವಾ ಸಮಿತಿ ಹಾಗೂ ತಾಲೂಕು ಬ್ರಾಹ್ಮಣ ಸಂಘ ಇವರುಗಳ ಸಹಯೋಗದಲ್ಲಿ ನಗರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಜಗದ್ಗುರು ಆದಿಗುರು ಶ್ರೀ ಶಂಕರ ಭಗವದ್ಪದಾಚಾರ್ಯರ ಜಯಂತಿಯನ್ನು ಭಾನುವಾರ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ಜಯಂತಿ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ರುದ್ರಭಿಷೇಕ, ಹೋಮ, ಪೂರ್ಣಾಹುತಿ ಹಾಗೂ ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ, ಅರ್ಚನೆ, ಶಂಕರ ಸ್ತೋತ್ರಗಳ ಪಾರಾಯಣ ಮತ್ತು ಭಜನಾ ಕಾರ್ಯಕ್ರಮಗಳು ಸಂಪನ್ನಗೊಂಡವು.

ಕಾರ್ಯಕ್ರಮದಲ್ಲಿ ನಗರದ ಅನೇಕ ತ್ರಿಮತಸ್ಥ ಬ್ರಾಹ್ಮಣ ಸಮಾಜದವರು ಪಾಲ್ಗೊಂಡಿದ್ದರು. ಆಗಮಿಸಿದ್ದವರು ಭಾವಚಿತ್ರಗಳಿಗೆ ಮತ್ತು ಹೋಮಕುಂಡಕ್ಕೆ ಭಕ್ತಿ ನಮನಗಳನ್ನು ಸಲ್ಲಿಸಿದರು ನಂತರ ತೀರ್ಥ ಪ್ರಸಾದಗಳ ಸೇವಾ ಕಾರ್ಯ ಜರಗಿತು.

Leave a Reply

Your email address will not be published. Required fields are marked *

error: Content is protected !!