
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ
ರಾಘವೇಂದ್ರ ಅಲಗೂರು ನೇಮಕಕ್ಕೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, -ರಾಜ್ಯ ಸರ್ಕಾರ ಕೂಡಲೇ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ, ಉತ್ತರ ಕರ್ನಾಟಕದ ಪ್ರಭಾವಿ ನಾಯಕರು ಆದಂತ ವಿಜಯಪುರದ ರಾಘವೇಂದ್ರ ಅಲಗೂರ ಅವರನ್ನು ಕೂಡಲೇ ನೇಮಕ ಮಾಡಬೇಕೆಂದು ಪರಶುರಾಮ ಬ್ರಾಹ್ಮಣ ಸೇವಾ ಟ್ರಸ್ಟ್, ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ಬಳ್ಳಾರಿ ಜಿಲ್ಲಾ, ಅಧ್ಯಕ್ಷರಾದಂತಹ ಗೋಪಿಕೃಷ್ಣ ಪ್ಯಾಟಿ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಸಂದರ್ಭ ವಾಗಿ ಗೋಪಿಕೃಷ್ಣ ಪ್ಯಾಟೆ ಅವರು ಮಾತನಾಡುತ್ತಾ ರಾಘವೇಂದ್ರ ಅಲಗೂರವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರು ಹಾಗೂ ಆರ್ಥಿಕ ತಜ್ಞರು, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದಾರೆ, ಅದರ ಜೊತೆಗೆ ಜಾತ್ಯಾತೀತ ಮನೋಭಾವನೆ ಹೊಂದಿರುವ ಇವರನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ನೇಮಕ ಮಾಡಿದರೆ, ಸಮುದಾಯದ ಅಭಿವೃದ್ಧಿ ಆಗುತ್ತದೆ ಎಂದು ಆಶಾಭಾವ ವ್ಯಕ್ತ ಮಾಡಿದರು. ಅಧ್ಯಕ್ಷ ಸ್ಥಾನಕ್ಕೆ ಇಲ್ಲಿಯವರೆಗೂ ಕೇವಲ ಬೆಂಗಳೂರು ಭಾಗದವರೆ ಮಾತ್ರ ಸೀಮಿತವಾಗಿದ್ದ ರಿಂದ ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಈ ಸಂದರ್ಭ ವಾಗಿ ಅವರು ಸರ್ಕಾರವನ್ನು ಪತ್ರಿಕಾ ಹೇಳಿಕೆಯ ಮುಖಾಂತರ, ತಿಳಿಸಿದ್ದಾರೆ.