
ಬ್ರ್ಯಾಂಡ್ ಕೊಪ್ಪಳ ಯೋಜನೆ : ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಸಲ್ಲಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ಬ್ರ್ಯಾಂಡ್ ಕೊಪ್ಪಳ ಯೋಜನೆಯಡಿ ಕೊಪ್ಪಳ ಜಿಲ್ಲೆಯ ವಿವಿಧ ಐತಿಹಾಸಿಕ ತಾಣಗಳ ಹಾಗೂ ಸ್ಮಾರಕಗಳು ಸೇರಿದಂತೆ ಪ್ರವಾಸೋದ್ಯಮಗಳ ಮಾಹಿತಿ ಸಲ್ಲಿಸುವಂತೆ ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬ್ರ್ಯಾಂಡ್ ಕೊಪ್ಪಳ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿಪಡಿಸಲು ಬ್ರ್ಯಾಂಡ್ ಕೊಪ್ಪಳ ಲೋಗೋವನ್ನು 2024ರ ಕನಕಗಿರಿ ಉತ್ಸವದಲ್ಲಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿರುತ್ತಾರೆ. ಈ ಯೋಜನೆಯಡಿ ಕೊಪ್ಪಳ ಜಿಲ್ಲೆಯ ವಿವಿಧ ಐತಿಹಾಸಿಕ ತಾಣಗಳ ಹಾಗೂ ಸ್ಮಾರಕಗಳ ಕುರಿತು ಸಾರ್ವಜನಿಕರಿಗೆ ಪ್ರಚಾರ ಪಡಿಸಲು ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ, ಪ್ರವಾಸಿ ತಾಣಗಳ ಪರಂಪರೆ ಉಳಿವಿಗಾಗಿ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಮಾಹಿತಿಯುಳ್ಳ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಸಕ್ತಿಯುಳ್ಳ ಸಾರ್ವಜನಿಕರು ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಾದ ಶ್ರೀ ಗವಿಮಠ, ಕೊಪ್ಪಳ ಕೋಟೆ, ಹುಲಿಕೆರೆ, ಶ್ರೀ ಮಳೆಮಲ್ಲೇಶ್ವರ ದೇವಸ್ಥಾನ, ಭಾಗ್ಯನಗರ ಸೀರೆ ಮತ್ತು ಕೈಮಗ್ಗ, ಬಹದ್ದೂರಬಂಡೆ ಕೋಟೆ, ಕಿನ್ನಾಳ ಕಲೆ, ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ, ಪಂಪಾವನ ಮುನಿರಬಾದ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ, ವಾಲಿ-ಕಿಲ್ಲಾ ಕೋಟೆ, ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನ, ನವವೃಂದಾವನ, ಪಂಪಾ ಸರೋವರ, ಚಿಂತಾಮಣಿಮಠ (ಚಿಂತಾಮಣಿ ಆಶ್ರಮ), ಗಗನ್ ಮಹಲ್, ಬಾಳೆ ನಾರಿನ ಕರಕುಶಲ ಹಾಗೂ ಕೈಮಗ್ಗ ಆನೆಗುಂದಿ, ಗವಿವರ್ಣ ಚಿತ್ರಗಳು, ಆನೆಗುಂದಿ ಭಾಗ, ಸಾಣಾಪುರ ಕೆರೆ, ಶ್ರೀ ಕನಕಾಚಲಪತಿ ದೇವಸ್ಥಾನ, ವೆಂಕಟ್ಟಪ್ಪನ ಬಾವಿ ಕನಕಗಿರಿ, ಶ್ರೀ ಮಹಾದೇವ ದೇವಸ್ಥಾನ, ಇಟಗಿ, ಶ್ರೀ ಮಹಾಮಾಯಾ ದೇವಸ್ಥಾನ ಕುಕನೂರ, ಕುಮಾರರಾಮ ಕೋಟೆ ಜಬ್ಬಲಗುಡ್ಡ, ಹಿರೇಬೆಣಕಲ್ ಮೋರೆರ್ ಮನೆಗಳು, ಶ್ರೀ ಸೋಮೇಶ್ವರ ದೇವಸ್ಥಾನ ಪುರ, ಕಪಿಲತೀರ್ಥ ಜಲಪಾತ ಕಬ್ಬರಗಿ, ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ ವೆಂಕಟಗಿರಿ, ಶ್ರೀ ಚಂದಾಲಿಂಗೇಶ್ವರ ದೇವಸ್ಥಾನ, ಹನುಮಸಾಗರ ಹಾಗೂ ಕೊಪ್ಪಳ ಜಿಲ್ಲೆಯ ಮುಂತಾದ ಪ್ರವಾಸಿ ತಾಣಗಳು ಹಾಗೂ ಸ್ಮಾರಕಗಳ ಸ್ಪಷ್ಟ ಛಾಯಾಚಿತ್ರಗಳೊಂದಿಗೆ ನಿಖರವಾದ ಮಾಹಿತಿ ಸಂಗ್ರಹಿಸಿ, ಸಂಗ್ರಹಿಸಿದ ಈ ಮಾಹಿತಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟ ರಸ್ತೆ, ಕೊಪ್ಪಳ ಇಲ್ಲಿಗೆ ಅಥವಾ ಇ-ಮೆಲ್ koppaltourism@gmail.com ಮೂಲಕ ಜುಲೈ 31ರ ಸಾಯಂಕಾಲ 05 ಗಂಟೆಯೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಕಟಣೆ ತಿಳಿಸಿದೆ.