
ಭಾಗ್ಯನಗರ ಪಯೋನಿಯರ್ ಸ್ಕೂಲ್ ಉತ್ತಮ ಫಲಿತಾಂಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ಇಲ್ಲಿಯ ಭ್ಯಾಗನಗರ ಪಯೋನಿಯರ್ ಪಬ್ಲಿಕ್ ಸ್ಕೊಲ್ನ , SSLC ಫಲಿತಾಂಶ ಉತ್ತಮವಾಗಿ ಬಂದಿದೆ.
ಶಾಲೆಯ ಮೊದಲ SSLC ಬ್ಯಾಚಿನ ಫಲಿತಾಂಶ ಶೇ 94.11 ಆಗಿದ್ದು 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಉತ್ತೀರ್ಣರಾಗಿದ್ದು 8 ವಿದ್ಯಾರ್ಥಿಗಳು ಪ್ರಥಮ ಶೇಣಿಯನ್ನು ಪಾಸಾಗಿದ್ದಾರೆ.
ದ್ವೀತಿಯ ಶ್ರೇಣಿಯನ್ನು ಇಬ್ಬರು ಪಾಸಾಗಿದ್ದಾರೆ. ಕುಮಾರಿ ಅನನ್ಯ 625ಕ್ಕೆ 591 ಅಂಕ (94.56%) ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ ಅದಕ್ಕಾಗಿ ಶಾಲೆಯ ಆಡಳಿತ ಮಂಡಳಿ ಸರ್ವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ..
ಇತ್ತೀಚೆಗೆ ಗದಗನಲ್ಲಿ ಹತ್ಯೆಗೀಡಾದ ಕುಮಾರಿ ಅಕಾಂಕ್ಷ ಕೂಡಾ 369 ಅಂಕಗಳಿಸಿ ಪಾಸಾಗಿದ್ದರೆ ಎಂದು ಶಾಲಾ ಮುಖ್ಯೋಪಾಧ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.