
ಭಾಗ್ಯನಗರಕ್ಕೆ ಆಗಮಿಸಿದ
ರಾಮ ಮಂದಿರದ ಅಕ್ಷತೆ ಮತ್ತು ಆಮಂತ್ರಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೯- ಜನವರಿ ೨೨ರಂದು ನಡೆಯುವ ಅಯೋಧ್ಯ ರಾಮಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಅಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನ ಅಯೋಧ್ಯೆಯಿಂದ ಬಂದಿದ್ದು ಅದನ್ನ ವಿಕ್ರಮಣೆಯಿಂದ ಮೆರವಣಿಗೆ ಮುಖಾಂತರ ಶ್ರೀರಾಮದೇವರ ದೇವಸ್ಥಾನಕ್ಕೆ ಪಾದಯಾತ್ರೆ ಮುಖಾಂತರ ತಲುಪಿಸಿದರು. ಜನವರಿ ಒಂದರಿಂದ ಮನೆ ಮನೆಗೆ ಮಂತ್ರಾಕ್ಷತೆ ಮತ್ತು ಆಮಂತ್ರಣವನ್ನ ಕೊಡುವ ಕಾರ್ಯಕ್ರಮವನ್ನು ಮಾಡಲಾಗುವುದು ಮೆರವಣಿಗೆಯ ಮುಖಂಡತ್ವವನ್ನು ಡಾ.ಕೊಟ್ರೇಶ್ ಶೆಡಿ,್ಮ ಯಮುನಪ್ಪ ನರಗುಂದ, ಏಕನಾಥ ಬಾವಿಕಟ್ಟಿ, ವಿಜಯ್ ಪಾಟೀಲ್, ರಾಘು ನಿರಂಜನ್, ವಾಸುದೇವ ಮೇಘರಾಜ್, ಪರಶುರಾಮ್ ಪವಾರ್, ನೀಲಕಂಠಪ್ಪ ಮೈಲಿ, ಪದ್ಮಾವತಿ ಪಾನಗಂಟಿ, ಪವನ್ ಪಾನಘಂಟಿ, ಅರುಣ್ ಶೆಟ್ಟರ್, ಸೀತಾರಾಮ್ ಇಂಗಳೇಶ್ವರ, ಸಾಯಿನಾಥ, ನಾಗರಾಜ್, ಪರಶುರಾಮ್ ನಾಯಕ್, ರೋಷನ ಅಲಿ ಮಂಗಳೂರು, ಮದನ್ ಪಟೇಲ್ ಹೆಚ್ಚಿನ ಸಂಖ್ಯೆಯಲ್ಲಿ ಹನುಮ ಭಕ್ತರು ರಾಮ ಭಕ್ತರು ಪಾಲ್ಗೊಂಡಿದ್ದರು.