
300ಕ್ಕೊ ಹೆಚ್ಚು ಸಮುದಾಯದ ನಾಗರಿಕರು
ವೈದ್ಯಕೀಯ ತಪಾಸಣೆ – ಶಾರದಾ ಆರ್. ಪಾನಘಂಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೫- ಮಾತನಾಡಿ ಸುಮಾರು 300ಕ್ಕೊ ಹೆಚ್ಚು ಸಮುದಾಯದ ನಾಗರಿಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಒಳ್ಳೆ ಸ್ಪಂದಿಸಿದ್ದಾರೆ ಎಂದು ಶ್ರೀಮತಿ ಶಾರದಾ ಆರ್. ಪಾನಘಂಟಿ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಇನ್ನರ್ ವೀಲ್ ಕ್ಲಬ್. ಭಾಗ್ಯನಗರ. ಎಸ್.ಡಿ.ಮ್.ನಾರಾಯಣ ಹಾರ್ಟ್ ಕೇರ್ ಸೆಂಟರ್, ಹಾಗೂ ದೇವದಾಸಿ ಪುನರ್ವಸತಿ ಯೋಜನೆ, ಸಖಿ ಒನ್ ಸ್ಟಾಪ್ ಸೆಂಟರ್ ಘಟಕ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ” ಲಿಂಗತ್ವ ಅಲ್ಪಸಂಖ್ಯಾತರಿಗೆ ವೈದ್ಯಕೀಯ ತಪಾಸಣೆ ಮತ್ತು ಲಿಂಗತ್ವಧಾರಿತ ದೌರ್ಜನ್ಯ ತಡೆ ರಾಷ್ಟ್ರೀಯ ಅಭಿಯಾನ, ನಾರಿ ಚೇತನ ಮಹಿಳಾ ಸಮನ್ವಯತೆ “ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿ ಸಂವಿಧಾನವು ಪ್ರತಿಯೊಬ್ಬರಿಗೂ ಗೌರವ. ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದೆ.ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವಿಸಬೇಕಲ್ಲದೆ ಬೆಂಬಲಿಸಬೇಕು ಎಂದು ಕೋರಿದರು.
ಸಖಿ ಒನ್ ಸ್ಟಾಪ್ ಸೆಂಟರಿನ ಆಡಳಿತ ಅಧಿಕಾರಿ ಯಮುನಾ ಬೆಸ್ತರ್ ಮಾತನಾಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಮುಖಗಳು ಹಲವಾರು. ಅದರಲ್ಲಿ ಮಕ್ಕಳ ಮೇಲೆ ಹೆಚ್ಚು ಶಕ್ತಿಯುಳ್ಳ ವ್ಯಕ್ತಿ ಒಬ್ಬ ಬಲತ್ಕಾರವಾಗಿ ತನ್ನ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ದೌರ್ಜನ್ಯ ಎಸಗಿದರೆ ಇದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವಾಗುತ್ತದೆ. ಆದರೆ ಇಂದು ಹಿಂಸೆ ಅಥವಾ ದೌರ್ಜನ್ಯ ಎಂಬುವುದು ಒಂದೇ ಸ್ವರೂಪವನ್ನು ಪಡೆದಿರುವುದಿಲ್ಲ. ಅಂದರೆ ಒಬ್ಬ ವ್ಯಕ್ತಿಯ ಮೇಲೆ ಸಂಪೂರ್ಣವಾಗಿ ಇಟ್ಟಿರುವ ನಂಬಿಕೆಯು ದ್ರೋಹವಾದಾಗ ಅದು ಮಾನಸಿಕವಾಗಿ, ಶಾಶ್ವತವಾದ ದುಷ್ಪರಿಣಾಮವನ್ನುಂಟು ಮಾಡಿ, ಅದು ಆಘಾತದ ಅವಘಡಗಳಾಗಿ ಸಂಭವಿಸುತ್ತದೆ. ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆಗೆ post traumatic Stress disorder (PTSD) ಒಳಗಾಗುತ್ತಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಎಂದಿಗೂ ಮಕ್ಕಳಿಂದಾದ ತಪ್ಪುಗಳಲ್ಲ, ಜಿಜಿ ಆಕ್ಟ್ 2015ರ ಕಾಯ್ದೆ ಮತ್ತು ಪೋಸ್ಕೋ ಕಾಯ್ದೆಯು ಮಕ್ಕಳ ಕುರಿತು ಸ್ವ-ವಿಸ್ತಾರವಾಗಿ ತಿಳಿಸುತ್ತದೆ. ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದುರುಪಯೋಗ ಸಮಸ್ಯೆಗಳಾದ ಗರ್ಭಪಾತ ದಂತಹ ಸಮಸ್ಯೆಗಳು, ದುಡಿತಕ್ಕೆ ಹೋದಲ್ಲಿ ಹಿಂಸೆಗಳು, ಸಂಘಟಿತ ಮತ್ತು ಅಸಂಘಟಿತ ಲೈಂಗಿಕ ಕಿರುಕುಳಗಳು. ಆತ್ಯಾಚಾರಗಳು, ಮಹಿಳೆಯರ ಮೇಲಿನ ದೈಹಿಕ ಹಿಂಸೆ, ಕುಟುಂಬದಲ್ಲಿನ ಲಿಂಗ ತಾರತಮ್ಯ ಸಮಸ್ಯೆಗಳು ಮತ್ತು ಮತ್ತು ಹೆಣ್ಣು ಮಕ್ಕಳ ಮಕ್ಕಳ ಸಾಗಾಣಿಕೆ, ಹೆಣ್ಣು ಭ್ರೂಣ ಭ್ರೂಣ ಹತ್ಯೆಯಂತಹ ಹಿಂಸೆಗಳು ಹೀಗೆ ಲೆಕ್ಕ ಅಂಕೆ ಕೆ ಇಲ್ಲದಷ್ಟು ಸಮಸ್ಯೆಗಳ ಸರಪಳಿಯೇ ಕಾಣಬಹುದಾಗಿದೆ. ಇದಕ್ಕೆ ಮೂಲವಾಗಿರುವಂತಹದ್ದು ಅನ್ಯಥಾ ಭಾವಿಸದೇ ಯೋಚಿಸಿದಾಗ – ಪಿತೃ ಪ್ರಧಾನ ಸಮಾಜ ಅಂದರೆ ಪುರುಷ ಪ್ರಧಾನವಾದ ಸ್ಥಾನ-ಮಾನಗಳು, ಹೆಗ್ಗಳಿಕೆಗಳು – ಹೆಣ್ಣಿಗೆ ಇನ್ನು ಸ್ತ್ರೀ ಪ್ರಧಾನ್ಯತೆ ಸಿಗುತ್ತಿಲ್ಲ, ಅಂದರೆ ಲಿಂಗ ಅಸಮಾನತೆಯನ್ನು ಬದಲಾವಣೆ ಒಪ್ಪಿಕೊಳ್ಳದ ರೀತಿಯಲ್ಲಿ ಸಾಮಾನ್ಯ ವಿಷಯವಾಗಿ ಪರಿಗಣಿಸಿದೆ.
ಇಲ್ಲಿನ ಆರ್ಥಿಕ ವ್ಯವಹಾರಗಳು, ಆಸ್ತಿ ಪಾಸ್ತಿಗಳು ಮದುವೆಗಿಂತ ಮೊದಲು ಹೆಣ್ಣಿನ ಹೆಸರಿಗೆ ಆರ್ಥಿಕ ಸುರಕ್ಷತೆಯ ಭದ್ರತೆ ಮುಖ್ಯವೆಂದು ಅವರ ಹೆಸರಿಗೆ ಮಾಡುವಂತಹ ಬದಲಾವಣೆ ಬರುವುದು ಅಸಾಧ್ಯವೆನ್ನುವಂತಿದೆ. ನೀವು ಕೂಡ ಒಪ್ಪುತ್ತಿರಲ್ವಾ? ಹಾಗಾಗಿ ಹೆಣ್ಣು ಸಮಾಜಮುಖಿಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಆಗದೇ ಇರುವ ಮಟ್ಟಿಗೆ ಶೋಷಿತಗೊಳಗಾಗುತ್ತಳೆ. ಇಂತಹ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಘಟಕದಲ್ಲಿ ಆಪ್ತ ಸಮಾಲೋಚನೆ. ಮನೋಸ್ಥೆರ್ಯ. ಕಾನೂನು ನೆರವು, ಪೋಲಿಸ್ ಸೇವೆ ನೆರವು ಹಾಗೂ ತಾತ್ಕಾಲಿಕ ವಸತಿ ಸೌಕರ್ಯ ಮತ್ತು ಕುಟುಂಬದೊಂದಿಗೆ ಸಮಾಲೋಚನೆ ಮಾಡುವುದರೊಂದಿಗೆ ಪುನರ್ವಸತಿಯನ್ನು ಕಲ್ಪಿಸುವಂತಹ ಅವಕಾಶಕ್ಕೆ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ಕಲ್ಪಿಸಲಾಗುತ್ತದೆಂದು ಮಾಹಿತಿ ನೀಡಿದರು.
ಲಿಂಗತ್ವ ಅಲ್ಪಸಂಖ್ಯಾತರಾದ ರಮ್ಯಳು ಮಾತನಾಡಿ ಬೀದಿಗೆ ಬಂದು ಭಿಕ್ಷೆ ಬೇಡಲು ಲಿಂಗತ್ವ ಅಲ್ಪಸಂಖ್ಯಾತರಾದ ನನಗೂ ಇಚ್ಚೆ ಇರುವುದಿಲ್ಲ, ಸ್ವಾಭಿಮಾನ ಜೀವನ ನಡೆಸಲು ನಮಗೆ ಆಸೆ ಇದ್ದರೂ, ಉದ್ಯೋಗವಿಲ್ಲ, ಅಷ್ಟೇ ಯಾಕೆ ನಾನು B.A. B.Ed. – TET PASS ಆದ ನನಗೆ ಒಂದು ಖಾಸಗಿ ಶಾಲೆಯಲ್ಲಿ ಕೆಲಸಕ್ಕೆ ಅವಕಾಶ ನೀಡುತ್ತಿಲ್ಲ. ಯಾರೂ ಉದ್ಯೋಗ ನೀಡದ ಕಾರಣ ಹೊಟ್ಟೆ ಹೊರೆಯಲು ಭಿಕ್ಷೆ ಬೇಡುವುದು ಅನಿವಾರ್ಯವಾಗಿದೆ.ನಾವು ಹೆಣ್ಣಾಗಿಯೇ ಇರಲು ಇಚ್ಚಿಸುತ್ತೇವೆ.ನಮಗೂ ಶೋಷಣೆಗಳಾಗುತ್ತವೆ. ಕುಟುಂಬದವರು ನಮ್ಮನ್ನು ನಮ್ಮಂತೆ ಇರಲು ಬಿಡದೇ. ಹೊರ ದೂಡುತ್ತಾರೆ. ನಮಗೆ ಇಷ್ಟ ಇಲ್ಲವೆಂದರೂ ನಮ್ಮ ಮೇಲೆ ಲೈಂಗಿಕ ಶೋಷಣೆಗಳಾಗುತ್ತವೆ. ನಮ್ಮನ್ನು ಕೆಟ್ಟದಾಗಿ ಕಾಣುವುದರ ಜೊತೆಗೆ ಹಿಂಸೆ ನೀಡುತ್ತಾರೆ. ಹಾಗೂ ಮಹಿಳಾ ಸಹಾಯವಾಣಿ 181 ಸಂಖ್ಯೆಯ ಕರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಘಟಕವು ನಮ್ಮ ನೆರೆವಿಗಿದೆ.
ನಮ್ಮ ದೈಹಿಕ ಮತ್ತು ಮಾನಸಿಕ ಹಿಂಸೆಯ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆಂದು ಸಖಿ ಆಡಳಿತ ಅಧಿಕಾರಿ ಯಮುನಾ ಬೆಸ್ತರ್ ಮಾಹಿತಿ ನೀಡುತ್ತಿದ್ದಾರೆ. ಅವರಿಗೆ ಧನ್ಯವಾದಗಳೆಂದು ಧನ್ಯತಾಭಾವ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಶ್ರೀಮತಿ ಪೂರ್ಣಿಮಾ ಏಳಬಾವಿ ಮಾತನಾಡಿಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್ಸ್ ನೀತಿ 2017 ಜಾರಿ ತರಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕೆಂದು ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಧ್ವನಿಗೊಟ್ಟು, ಅವರ ಹಕ್ಕುಗಳಿಗೆ ಹೋರಾಟ ಅಗತ್ಯವಿದೆ ಎಂದು ಹೇಳಿದರು.ಇನ್ನರ್ ವಿಲ್ ಕ್ಲಬ್ಬಿನ ಕಾರ್ಯದರ್ಶಿ ಶ್ರಿಮತಿ ಸುವರ್ಣ ಘಂಟಿ ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತರು ಬದುಕಲು ಬೇಕಾದ ಘನತೆ, ಗೌರವ, ಸ್ವಾಭಿಮಾನದ ಬದುಕು ಕಟ್ಟಿ ಕೊಳ್ಳುವಂತೆ ಆಗಬೇಕೆಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೈಕಾಲಜಿಸ್ಟ್ ಶ್ರೀಮತಿ ಶಾಂತಮ್ಮ ಕಟ್ಟಿಮನಿ ಮಾತನಾಡಿ ತಂಬಾಕು ಸೇವನೆಯಿಂದ 2500 ಭಾರತೀಯರು ಪ್ರತಿ ದಿನ ಸಾಯುತ್ತಿದ್ದಾರೆ ವಿಶ್ವದ 10 ರಲ್ಲಿ ಒಂದು ಸಾವು ತಂಬಾಕಿನಿಂದ ಉಂಟಾಗುತ್ತದೆ ಅಲ್ಲದೆ ಇತ್ತೀಚಿನ ದಿನದಲ್ಲಿ ಕ್ಯಾನ್ಸರ್ ಹೃದಯ ಸಂಬಂಧಿಸಿದೆ ಕಾಯಿಲೆಗಳು ಶ್ವಾಸಕೋಶದ ಕಾಯಿಲೆ ಮತ್ತು ಇತರೆ ಕಾಯಿಲೆಗಳು ತಂಬಾಕು ಸೇವನೆಯಿಂದ ಬರಬಹುದಾಗಿದೆ ಪ್ರತಿ ಸಿಗರೇಟ್.ಬೀಡಿ ಸೇವನೆ ಏಳು ನಿಮಿಷ ಆಯಸ್ಸು ಕಡಿಮೆ ಯಾಗುತ್ತದೆ. ಪ್ರತಿ ಆರು ಸೆಕೆಂಡ್ ಗಳಿಗೊಮ್ಮೆ ಒಬ್ಬ ವ್ಯಕ್ತಿ ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಒಟ್ಟಾರೆಯಾಗಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶಾರದಾ ಪಾನಘಂಟಿ ವಹಿಸಿದ್ದರು. ನಿರ್ಮಲಾ ಪಾಟೀಲ್. ಶ್ವೇತಾ ಗುಗ್ರಿ. ಸಂಗೀತ ಕಬಾಡಿ. ಎಸ್.ಡಿ.ಎಮ್. ನಾರಾಯಣ ಹಾರ್ಟ್ ಕೇರ್ ಸೆಂಟರಿನ ವೈದ್ಯಾಧಿಕಾರಿಗಳು ಹಾಗೂ ತಂಡದವರು ಭಾಗವಹಿಸಿದ್ದರು. ಸ್ವಾಗತ ಶಾಂತಾ ಗೌರಿ ಮಠ ಮಾಡಿದರು. ನಿರೂಪಣೆಯನ್ನು ಸುಮಾ ಮಹೇಶ್.ಕೊನೆಯಲ್ಲಿ ಪದ್ಮಾವತಿ ಕಂಬಳಿ ವಂದಿಸಿದರು