1 (1)

ಭಾಗ್ಯನಗರದಲ್ಲಿ ಪುಟ್ಟರಾಜ ಕಲಾ ಮಹೋತ್ಸವ

ಸಂಗೀತಕ್ಕೆ ಒಲಿಯದ ಮನಸ್ಸುಗಳಿಲ್ಲ

ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಸಜ್ಜನ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೩೧-  ಎಲ್ಲರಿಗೂ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ಮನಸ್ಕರಿಗೂ ಅರ್ಥವಾಗುವ ಏಕೈಕ ಭಾಷೆ ಎಂದರೆ ಅದು ಸಂಗೀತ ಸಂಗೀತಕ್ಕೆ ಒಲಿಯದ ಮನಸ್ಸುಗಳೇ ಇಲ್ಲ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಸಜ್ಜನ ಹೇಳಿದರು.

ಅವರು ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ದೆಹಲಿ ಇವರ ಸಹಯೋಗದಲ್ಲಿ ಡಿಸೆಂಬರ  ಶನಿವಾರ ಸಂಜೆ ಭಾಗ್ಯನಗರದ ಪಟ್ಟಣ ಪಂಚಾಯತಿ ಹಿಂಭಾಗ ಬಯಲು ವೇದಿಕೆಯಲ್ಲಿ ಸಂಸ್ಥೆಯ ವತಿಯಿಂದ ಈ ನಾಡು ಕಂಡ ಸಂಗೀತ ದಿಗ್ಗಜರಾದ ದಿ. ಪಂ  ಗೋವಿಂದರಾಜ ಬೊಮ್ಮಲಾಪುರ ಹಾಗೂ ದಿ. ಪಂ  ಅಂಬಣ್ಣ ಕೊಪ್ಪರದರವರ ೩ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಗುರು ಪುಟ್ಟರಾಜ ಕಲಾ ಮಹೋತ್ಸವ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಸಹಾಯಕ ನಿರ್ದೇಶಕರಾದ ಕೊಟ್ರಪ್ಪ ಚೋರನೂರರವರು ಮಾತನಾಡಿ ಒಬ್ಬ ಒಳ್ಳೆಯ ಶಿಷ್ಯನಿಗೆ ಒಳ್ಳೆ ಗುರು ಸಿಗುವುದು ಎಷ್ಟು ಕಷ್ಟವೊ, ಹಾಗೆಯೇ ಒಬ್ಬ ಒಳ್ಳೆಯ ಗುರುವಿಗೆ ಒಳ್ಳೆಯ ಶಿಷ್ಯ ಸಿಗುವುದು ಅಷ್ಟೇ ಕಷ್ಟ ಆ ನಿಟ್ಟಿನಲ್ಲಿ ಉಭಯ ಗುರುಗಳ ನೆನಪಿನಲ್ಲಿ ಸ್ಮರಣೋತ್ಸವ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನಿಯ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಈ ಸಂಸ್ಥೆಯಿಂದ ಮುಡಿ ಬರಲೆಂದು ಹಾರೈಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಪ್ಪ ಶ್ಯಾವಿಯವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಪಂಚಾಕ್ಷರಕುಮಾರ ಬೊಮ್ಮಲಾಪುರ, ಹೇಮಾವತಿ ಅಂಬಣ್ಣ, ಶಿವರಾಮ್ ಮ್ಯಾಗಲಮಾಣಿ, ಶರಣಪ್ಪ ನಾಯಕ, ಶಂಕ್ರಪ್ಪ ಬೇನಾಳ ಇನ್ನೂ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯವತಿಯಿಂದ ಪತ್ರಕರ್ತರಾದ ದತ್ತು ಕಮ್ಮಾರ ಹಾಗೂ ಶ್ರೀಕಾಂತ ಅಕ್ಕಿಯವರಿಗೆ ಸ್ವರ ಸೌರಭ ಮಾಧ್ಯಮ ಸಿರಿ ಪ್ರಶಸ್ತಿಯನ್ನು ಹಾಗೂ ವಿಜಯಕುಮಾರ ಬದಿಯವರಿಗೆ ಸ್ವರ ಸೌರಭ ಸಿರಿ ಪ್ರಶಸ್ತಿಯನ್ನು ಹಾಗೂ ಮಾರುತಿ ಮೇಘರಾಜರವರಿಗೆ ವಿಶೇಷ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಕೇಶವ್ ಹೊಸಪೇಟೆಯವರಿಂದ ಬಾಂಸುರಿ ವಾದನ, ಮಾರುತಿ ದೊಡ್ಡಮನಿಯವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ರಾಮಚಂದ್ರಪ್ಪ ಉಪ್ಪಾರವರಿಂದ ಹಾರ್ಮೋನಿಯಂ ಸೋಲೋ, ರಾಘವೇಂದ್ರ ಗಂಗಾವತಿಯವರಿAದ ತಬಲಾ ಸೋಲೋ, ಯಲ್ಲನಗೌಡ ಶಂಕರಬಂಡೆಯವರಿಂದ ಸುಗಮ ಸಂಗೀತ, ವಿಜಯಲಷ್ಮಿ ಹಂಚಿನಾಳರಿAದ ಭಾವಗೀತೆಗಳು, ಮೀರಾ ಕೇಶವರಾಜರಿಂದ ಭಕ್ತಿ ಸಂಗೀತ, ಜದೇಶ ಎಮ್ಮಿಗನೂರುರವರಿಂದ ಜಾನಪದ ಸಂಗೀತ, ಅಲ್ಲಭಕ್ಷಿ ವಾಲಿಕಾರರಿಂದ ತತ್ವಪದಗಳು, ಕೀರ್ತಿ ಮೇಟಿ ಹಾಗೂ ಆರತಿ ಮೇಟಿಯವರಿಂದ ವಚನ ಸಂಗೀತ, ಮಹೇಶ ಮೋರಗೇರಿ, ಶಿವರಾಜಕುಮಾರ ಗೊಂಡಬಾಳ.

ಅಭಿಷೇಕ ಚಿತ್ರಗಾರ, ಪುಟ್ಟರಾಜ ಬಣ್ಣದ, ಸಂದೀಪ ದಿವಾಕರರಿಂದ ಪಂಚ ಕೊಳಲು ವಾದನ, ಹಾಗೂ ದೀಕ್ಷಾ ನಾಟ್ಯ ಕಲಾ ಸಂಸ್ಥೆಯವರ ಭಾರತನಾಟ್ಯ ಕಾರ್ಯಕ್ರಮಗಳು ಬಹು ಸೊಗಸಾಗಿ ಮೂಡಿ ಬಂದವು. ವಾದ್ಯ ವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ಬಿನ್ನಾಳ, ರಾಘವೇಂದ್ರ ಗಂಗಾವತಿ, ಡೋಲಕನಲ್ಲಿ ಮುನ್ನ ಚಿತ್ರದುರ್ಗ, ರಿಧಮ್ ಪ್ಯಾಡ್ನಲ್ಲಿ ನಂದೀಶ ಹಿರೇಮಠ ತಾಳವಾದ್ಯದಲ್ಲಿ ಕೃಷ್ಣ ಸೊರಟೂರು ಮೆರುಗು ತುಂಬಿದರು.

 

Leave a Reply

Your email address will not be published. Required fields are marked *

error: Content is protected !!