2c136fae-be38-4577-97e1-318669006cc9

ಭಾಗ್ಯನಗರ ಪ.ಪಂ : ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,30- ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಆಸ್ತಿ ಮಾಲೀಕರು 2024-25 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಹೆಯೊಳಗೆ ಪಾವತಿಸಿದರೆ ಶೇ. 5 ರಷ್ಟು ವಿನಾಯಿತಿ ನೀಡಲಾಗುವುದು.

ಮೇ ಹಾಗೂ ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದಲ್ಲಿ, ಯಾವುದೇ ರಿಯಾಯಿತಿ ಹಾಗೂ ದಂಡ ಇರುವುದಿಲ್ಲ. ಜುಲೈ ತಿಂಗಳಿನಿಂದ ಶೇ. 2 ರಷ್ಟು ದಂಡದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಏಪ್ರಿಲ್ ಮಾಹೆಯೊಳಗೆ ತೆರಿಗೆ ಪಾವತಿಸಿ, ರಿಯಾಯಿತಿ ಲಾಭವನ್ನು ಪಡೆದುಕೊಳ್ಳಬೇಕೆಂದು ಭಾಗ್ಯನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!