
ಭಾರತದ ಮೊದಲ ಕವಿ ಮಹರ್ಷಿ ವಾಲ್ಮೀಕಿ
ಪಿಡಿಓ ಪರಶುರಾಮ ನಾಯಕ
ಕರುನಾಡ ಬೆಳಗು ಸುದ್ದಿ
ಕುಕನೂರ 28- ಮಹರ್ಷಿ ವಾಲ್ಮೀಕಿ ಎಂದು ಕರೆಯಲು ಪಡುವ ವಾಲ್ಮೀಕಿಯನ್ನು ಭಾರತದ ಮೊದಲ ಕವಿ ಅಥವಾ ಸಂಸ್ಕೃತಿಕ ಸಾಹಿತ್ಯದ ಆದಿ ಕವಿ ಎಂದು ಪರಿಗಣಿಸಲಾಗಿದೆ ಎಂದು ಮಂಡಲಗೇರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪರಶುರಾಮ ನಾಯಕ ಅವರು ಹೇಳಿದರು.
ತಾಲೂಕಿನ ಮಂಡಲ ಗೇರಿ ಗ್ರಾಮದಲ್ಲಿ ಮಂಡಲಗೇರಿ ಗ್ರಾಮ ಪಂಚಾಯಿತಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಹೂವಿನಿಂದ ಪುಷ್ಪಾರ್ಚನೆ ಮಾಡಿ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆಯನ್ನು ಶನಿವಾರ ಆಚರಣೆ ಮಾಡಿ , ಮಂಡಲಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಶುರಾಮ ನಾಯಕ ಮಾತನಾಡಿ, ವಾಲ್ಮೀಕಿ ಮಹಾನ್ ಋಷಿ ಮತ್ತು ವಿಶ್ವಖ್ಯಾತ ಮಹಾಕಾವ್ಯ ರಾಮಾಯಣದ ಸೃಷ್ಟಿಕರ್ತ, ರಾಮಾಯಣವು 24000 ಶ್ಲೋಕಗಳು ಮತ್ತು 7 ಕ್ಯಾಂಟೋಗಳು ಅಥವಾ ಕಾಂಡಗಳನ್ನು ಒಳಗೊಂಡಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಕ್ಕ ಈಳಗೇರ, ವೀರಣ್ಣ ಅಳವಂಡಿ, ಸಂಜೀವಕುಮಾರ ಗೊಲ್ಲಾರ, ದೇವೇಂದ್ರಪ್ಪ ದಳವಾಯಿ, ಬಸಯ್ಯ ಶಶಿ ಮಠ, ವೆಂಕಟೇಶ್ ಈಳ ಗೇರ, ಗ್ರಾಮದ ಗುರು ಹಿರಿಯರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇತರರಿದ್ದರು.