
ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ
ಸರೋಜಾ ಬಾಕಳೆ ಅಭಿಪ್ರಾಯ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 27- ಎಲ್ಲರಿಗೂ ಸಂವಿಧಾನ ವರದಾನವಾಗಿದೆ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಎಂದು ಮಕ್ಕಳ ಕಲ್ಯಾಣ ಸಮಿತಿಯ ಮುಖ್ಯಸ್ಥೆ ಸರೋಜಾ ಬಾಕಳೆ ಹೇಳಿದರು.
ಅವರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೆಡದ ಸಮಾನ ಮನಸ್ಕರ. ಮತ್ತು ವಿಸ್ತಾರಭಾಂಧವಿ. ಅವರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಹಮ್ಮಿಕೊಂಡಿದ್ದ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರು ಬರದ ಭಾರತದ ಸಂವಿಧಾನವು ದಾರಿದೀಪವಾಗಿದೆ.
ರಾಷ್ಟ್ರಕವಿ ಕುವೆಂಪು ಹೇಳಿದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವಂತಹ ಸಮಾಜ ನಿರ್ಮಾಣವಾಗಬೇಕೆಂದು ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ ಅವರು ಕನಸು ಕಂಡಿದ್ದರು.ಅವರ ಮಾರ್ಗದಶ೯ನದಲ್ಲಿ ಸಾಗಬೇಕು ಎಂದು ಹೇಳಿದರು.
ನಂತರ ವಿಸ್ತಾರ ಸಂಸ್ಥೆಯ ಸಹಾಯಕ ನಿರ್ದೇಶಕ ಆಯುಷ್ಯಬಿ.ಮತ್ತು ಜೋತಿ ಹಿಟ್ನಾಳ.ಇವರು ಕಾರ್ಯಕ್ರಮ ಕುರಿತು ಮಾತನಾಡಿದರು. ಸ. ಪ. ಪೊ. ಕಾ. ಪ್ರಾಚಾರ್ಯ. ಶರಣಪ್ಪ ಬೇಲೇರಿ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಅತ್ತಾರಸಾಬ ಖಾಜಿ. ಬಸವರಾಜ ಅಂಗಡಿ. ಎಎಸ್ಐ ಗುಲಾಂಅಹ್ಮದ್. ಪ. ಪಂ.ಸದಸ್ಯ ಹನುಮಂತ ಬಜಂತ್ರಿ ರಿಯಾಜ ಖಾಜಿ.ಶಿವಮೂತಿ೯ ಇಟಗಿ. ಭೀಮಣ್ಣ ಹವಳಿ.ಸಂಸ್ಥೆಯ ಧಮ೯ರಾಜ ಗೋನಾಳ. ಬಸವರಾಜ ರಮೇಶ. ಸುಂಕಪ್ಪಕರಿಯಪ್ಪ.ದೇವಪ್ಪ ಜಾಸ್ಮೀನಬೇಗಂ. ನಶ್ರೀನ. ಅನುಸೂಯಾ.ಶೋಭಾ.ಮತ್ತು ಇತರರು ಭಾಗವಹಿಸಿದ್ದರು