
ಭಾರತದ ಸೇವಕನಿಗೆ ಒಲಿದ ಭಾರತ ರತ್ನ
ಕರುನಾಡ ಬೆಳಗು ಸುದ್ದಿ
ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಹಿರಿಯ ಮುತ್ಸದ್ಧಿ ನಾಯಕ,ದಣಿವರಿಯದ ಧೀಮಂತ, ಅವಿಶ್ರಾಂತ ಹೋರಾಟಗಾರ ಭಾರತದ ಮಾಜಿ ಉಪಪ್ರಧಾನಿ ಶ್ರೀ ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ಪುರಸ್ಕಾರ ದೊರೆತಿರುವುದು ನಿಜಕ್ಕೂ ಅತ್ಯಂತ ಸಂತಸದ ವಿಚಾರ.
ಭಾರತ ರತ್ನ ಶ್ರೀ ಎಲ್.ಕೆ.ಅಡ್ವಾಣಿಯವರಿಗೆ ಹಾರ್ದಿಕ ಅಭಿನಂದನೆಗಳು,ಅಡ್ವಾಣಿಯವರ ಚಿಂತನೆಗಳು ಹಾಗೂ ರಾಷ್ಟ್ರ ನಿರ್ಮಾಣದ ಸಂಕಲ್ಪ ಹಾಗೂ ಸಂಸದೀಯ ನಡುವಳಿಕೆಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿವೆ ಎಂದು ಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀ ಕೆ.ಶ್ಯಾಮ್ ಸುಂದರ್ ಅವರು ತಿಳಿಸಿ ಕಛೇರಿಯಲ್ಲಿ ಸಿಹಿ ತಿಂಡಿಗಳು ಹಚ್ಚಿಕೊಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರು ಎನ್ ಎರ್ರಿ ಸ್ವಾಮಿ ಬೆಲ್ಲದ ಮಹೇಶ್ ಆಟೋ ಘಟಕ ಮಂಜು ಗೌರವಾಧ್ಯಕ್ಷರು ಮುರಳಿ ಕಾಕಲ್ ತೋಟ ವೆಂಕಟೇಶ್ ಹೊನ್ನೂರ್ ಸ್ವಾಮಿ ದುರ್ಗೇಶ್ ತಿಪ್ಪೇಶ್ ಪದ್ಮಾಕರ್ ಪ್ರವೀಣ್ ವೀರೇಶ್ ಉಪಸ್ಥಿತರಿದ್ದರು.