6394c379-acf7-4d9d-a267-4703f753874e

   ಭಾರತೀಯ ವೈದ್ಯಕೀಯ ಸಂಘದಿಂದ 

ಡಾ ಎಂ ಬಿ ರಾಂಪುರ ಇವರಿಗೆ ನುಡಿನಮನ 

ಕೊಪ್ಪಳ ಸಂಜೀವಿನಿ ಶಾಖೆಯ ವತಿಯಿಂದ ಶ್ರದ್ಧಾಂಜಲಿ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೩-  ಭಾರತೀಯ ವೈದ್ಯಕೀಯ ಸಂಘ ಕೊಪ್ಪಳ ಶಾಖೆಯವರು ಇತ್ತೀಚೆಗೆ ದೈವಾಧೀನರಾದ ಡಾ.ಎಂ.ಬಿ. ರಾಂಪುರ, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಖ್ಯಾತನಾಮಾರಾದ ಇವರ ನೆನಪಿನಲ್ಲಿ ಸಂತಾಪ ಸೂಚನಾ ಕಾರ್ಯಕ್ರಮವನ್ನು ಡಾ ಮಹೇಶ ಗೋವನಕೊಪ್ಪರವರ ಆಸ್ಪತ್ರೆಯ ಆವರಣದಲ್ಲಿ ಜರುಗಿತು.

ಕೊಪ್ಪಳದ ಹಿರಿಯ ವೈದ್ಯ   ಡಾ ಎಂ ಬಿ ರಾಂಪುರವರ ಭಾವಚಿತ್ರಕ್ಕೆ ಪುಷ್ಪ ಗಳನ್ನು ಸಮರ್ಪಿಸಿ, ಎರಡು ನಿಮುಷ ಮೌನಚರಣೆ ಮಾಡಿದರು.
ಈ ಸಂಧರ್ಭದಲ್ಲಿ ನಗರದ ಹಿರಿಯ ವೈದ್ಯರಾದ ಡಾ ಕೆ ಜಿ ಕುಲಕರ್ಣಿ ಅವರು ಮಾತನಾಡಿ ಡಾ ರಾಂಪುರವರ ವ್ಯಕ್ತಿತ್ವ ಗಟ್ಟಿತನ ವೈದ್ಯಕೀಯ ಕ್ಷೇತ್ರದಲ್ಲಿ ಅವರು ನೀಡಿದ ಸೇವೆಗಳು ಎಂದೆದಿಗೂ ಮರೆಯಲಾರದ್ದು ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಡಾ ಮಹೇಂದ್ರ ಕಿಂದ್ರೆ ಅವರು ಮಾತನಾಡುತ್ತ ಡಾ ರಾಂಪುರರವರು ಕೊಪ್ಪಳದ ಜಿಲ್ಲಾ ಆರೋಗ್ಯ ಅಧಿಕಾರಿಗಳಾಗಿ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕಾರಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನೆಸಿಕೊಂಡರು, ಐ ಎಂ ಎ ಮಹಿಳಾ ವಿಂಗನ ಅಧ್ಯಕ್ಷೆ ಡಾ ಚಂದ್ರಕಲಾ ಅವರು ಮಾತನಾಡಿ ತಮಗೆ ಡಾ ರಾಂಪುರವರು ಗುರುಗಳಂತಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಬೆಳೆಯಲು ದಾರಿದೀಪವಾಗಿದ್ದವರು ಎಂದು ನೆನೆಸಿಕೊಂಡರು.

ಡಾ ಕಂಬ್ಳಿಯಾಳ, ಡಾ ಮಾದಿನೂರ, ಕಿಮ್ಸ್ ನ ವೈದ್ಯಕೀಯ ಅಧೀಕ್ಷಕರಾದ ಡಾ ವೇಣುಗೋಪಾಲ, ರೋಗ ನಿದಾನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಅನಿರುದ್ಧ ವಸಂತ ಕುಷ್ಟಗಿ, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ಗಿರೀಶ ನೌಲಿ ಹಿರೇಮಠ, ಡಾ ರವಿ, ಡಾ ಶಿವಪ್ರಸಾದ ಕುಂಬಾರ ಅವರು ಡಾ ರಾಂಪುರವರಿಗೆ ನುಡಿನಮನ ಸಲ್ಲಿಸಿದರು, ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ ಮಹೇಶ ಗೋವನ ಕೊಪ್ಪ ಮಾತನಾಡಿ ನುಡಿನಮನ ಸಲ್ಲಿಸಿದರು, ಕೊಪ್ಪಳ ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾ ಗೋಪಾಲ ಗೋಟುರರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಈ ಸಂಧರ್ಭದಲ್ಲಿ ಡಾ ವಿಜಯ ಮಹಾಂತೇಶ ಸುಂಕದ, ಡಾ ಪ್ರಸಾದ ಪೊಲೀಸ ಪಾಟೀಲ, ಶ್ರೀನಿವಾಸ ಜುಟೂರ, ಡಾ ಶ್ರೀನಿವಾಸ ರಾಠೋಡ, ಡಾ ವಿಜಯಕುಮಾರ ಅಡವಿ, ಡಾ ಮಹೇಶ ಭಗವತಿ ಡಾ ಕೃಷ್ಣಾ ಹೊಟ್ಟಲಿ, ಡಾ ಜಗನ್ನಾಥ ದೇಸಾಯಿ ಹಾಗೂ ಅನೇಕ ವೈದ್ಯರು ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿ ಅಗಲಿದ ಚೇತನಕ್ಕೆ ಸದ್ಗತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.

 

Leave a Reply

Your email address will not be published. Required fields are marked *

error: Content is protected !!