
ಮಂಗಳೂರ ಗ್ರಾ.ಪಂನಿಂದ ಅಂಗನವಾಡಿ ಕೇಂದ್ರಕ್ಕೆ ಸೊಳ್ಳೆ ಹಾಗೂ ದುರ್ವಾಸನೆ ಗಿಫ್ಟ್
ಕರುನಾಡ ಬೆಳಗು ಸುದ್ದಿ
ಸುಭಾಶ ಮದಕಟ್ಟಿ
ಕುಕನೂರ, 10- ತಾಲೂಕಿನ ಮಂಗಳೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಂಗನವಾಡಿ ಕೇಂದ್ರಕ್ಕೆ ಸೊಳ್ಳೆ ಹಾಗೂ ದುರ್ವಾಸನೆ ಗಿಫ್ಟ್ ನೀಡಿದೆ .
ಹೌದು ಇದು ಕುಕನೂರ ತಾಲೂಕ ಮಂಗಳೂರಿನ 2 ನೇ ವಾರ್ಡನಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಅಧಿಕವಾಗಿದೆ.
ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಇದ್ದರು ಮಕ್ಕಳು ದುರ್ವಾಸನೆಯಲ್ಲಿ ಪಾಠ ಕೇಳುವಂತಾಗಿದೆ ಸ್ವಚ್ಛತೆಗೆ ಗಮನ ಕೊಡದ ಗ್ರಾಮ ಪಂಚಾಯತ್ ಸಿಬ್ಬಂದಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
ವಾರ್ಡನಲ್ಲಿ ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಪರಸ್ಥಿತಿ ನಿರ್ಮಾಣವಾಗಿದೆ.ಹಲವು ಭಾರಿ ಸ್ವಚ್ಚತೆಗೆ ಮನವಿ ಮಾಡಿದರು ಪ್ರಯೋಜನವಗಿಲಗಲಾ ಜನ ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ.
ಪ್ರಮುಖವಾಗಿ ಬರುವ ಅಂಗನವಾಡಿ ವಿಧ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಪಿಡಿಒ ಅವರಿಗೆ ಆಗ್ರಹಿಸಿದ್ದಾರೆ.