PRESS MEET (2)

 ಸಾರ್ವತ್ರಿಕ ಲೋಕಸಭಾ ಚುನಾವಣೆ:

ಕೊಪ್ಪಳ ಕ್ಷೇತ್ರಕ್ಕೆ ಮೇ ೭ರಂದು ಮತದಾನ
 ೮-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ೧೮,೬೬,೩೯೭ ಮತದಾರರು
 ೨೦೪೫ ಮತಗಟ್ಟೆಗಳು, ೪೯೯೦ ಬಿಯು, ೨೬೫೭ ಸಿಯು, ೨೭೫೫ ವಿವಿಪ್ಯಾಟ್ ವ್ಯವಸ್ಥೆ
ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 04-  ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮೇ ೭ರಂದು ಮತದಾನ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಲೋಕಸಭಾ ಚುನಾವಣೆ-೨೦೨೪ರ ಹಿನ್ನೆಲೆಯಲ್ಲಿ ಮತದಾನ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ ೭ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಮತದಾನ ಜರುಗಲಿದ್ದು, ಮೇ ೬ರಂದು ಮಸ್ಟರಿಂಗ್ ಕಾರ್ಯ ಮತ್ತು ಜೂನ್ ೪ರಂದು ಮತ ಎಣಿಕೆ ನಡೆಯಲಿದೆ. ೮-ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೬೦-ಕುಷ್ಟಗಿ, ೬೧-ಕನಕಗಿರಿ, ೬೨-ಗಂಗಾವತಿ, ೬೩-ಯಲಬುರ್ಗಾ ಹಾಗೂ ೬೪-ಕೊಪ್ಪಳ, ೫೮-ಸಿಂಧನೂರು, ೫೯-ಮಸ್ಕಿ ಹಾಗೂ ೯೨-ಸಿರಗುಪ್ಪ, ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡAತೆ ೨೦೪೫ ಮತಗಟ್ಟೆಗಳಿದ್ದು, ಅಂತಿಮ ಮತದಾರರ ಪಟ್ಟಿಯಂತೆ ೯,೧೯,೪೯೯ ಪುರುಷ ಮತದಾರರು, ೯,೪೬,೭೬೩ ಮಹಿಳಾ ಮತದಾರರು ಹಾಗೂ ೧೩೫ ಇತರೆ ಮತದಾರರು ಸೇರಿದಂತೆ ಒಟ್ಟು ೧೮,೬೬,೩೯೭ ಮತದಾರರಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗಲು ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಕಲಚೇತನರಿಗೆ ರೇಲಿಂಗ್ ಸಹಿತ ರಾಂಪ್ ವ್ಯವಸ್ಥೆ, ನೆರಳಿನ ವ್ಯವಸ್ಥೆಯನ್ನು, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಸ್ಟರಿAಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳ ವಿವರ: ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ೬೧-ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರೌಢ ಶಾಲೆ ಮತ್ತು ಕಾಲೇಜು ವಿಭಾಗ, ೬೨- ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಗಂಗಾವತಿಯ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಲಯನ್ಸ್ ಕ್ಲಬ್ ಕ್ಯಾಂಪಸ್, ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಬಿ.ಎಡ್. ಕಾಲೇಜು, ೫೮-ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು, ೫೯- ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಕಿಯ ದೇವನಾಮ ಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ೯೨-ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಸಿರಗುಪ್ಪದ ಶ್ರೀ ವಿವೇಕಾನಂದ ಪಬ್ಲಿಕ್ ಸ್ಕೂಲ್‌ಗಳನ್ನು ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಮತದಾನ ಸಿಬ್ಬಂದಿಗಳು ಮತ್ತು ಮೈಕ್ರೋ ಅಬ್ಸರ್ವರ್‌ಗಳ ನೇಮಕಾತಿ: ೮-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೦೪೫ ಮತಗಟ್ಟೆಗಳಿದ್ದು, ಚುನಾವಣಾ ಕರ್ತವ್ಯಕ್ಕಾಗಿ ೨೪೩೫ ಪಿಆರ್‌ಒ, ೨೪೩೫ ಎಪಿಆರ್‌ಒ, ೪೮೬೯ ಪಿಒ ಹಾಗೂ ೨೪೮ ಎಮ್‌ಒ ಗಳನ್ನು ನೇಮಕ ಮಾಡಲಾಗಿದೆ. ಮೇ ೦೬ ರಂದು ಮತದಾನ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಗಳಿAದ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಮತದಾನ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಹೆಲ್ತ್ ಶೆಲ್ಟರ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗಳಿಗೆ ಹೆಲ್ತ್ ಕಿಟ್‌ಗಳನ್ನು ಸರಬರಾಜು ಮಾಡಲಾಗಿದೆ. ಮಸ್ಟರಿಂಗ್ ಕೇಂದ್ರಗಳಲ್ಲಿ ಮತ್ತು ಮತದಾನದ ದಿನದಂದು ಮತದಾನ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಊಟ-ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಚುನಾವಣೆ ಸಂಬಂಧ ೪೯೯೦ ಬ್ಯಾಲೆಟ್ ಯುನಿಟ್‌ಗಳು, ೨೬೫೭ ಕಂಟ್ರೋಲ್ ಯುನಿಟ್‌ಗಳು ಹಾಗೂ ೨೭೫೫ ವಿವಿಪ್ಯಾಟ್‌ಗಳು ಸೇರಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಮತದಾನ ಕರ್ತವ್ಯಕ್ಕಾಗಿ ೨೭೧ ಕೆ.ಎಸ್.ಆರ್.ಟಿ.ಸಿ ಬಸ್‌ಗಳು, ೧೧೫ ಕ್ರೂಸರ್‌ಗಳು ಹಾಗೂ ೮೬ ಮಿನಿ ಬಸ್ ಹಾಗೂ ಇತರೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು ೨೦೪೫ ಮತಗಟ್ಟೆಗಳಿದ್ದು, ಅದರ ಪೈಕಿ ೭೬ ಮತಗಟ್ಟೆ ಸ್ಥಳಗಳಲ್ಲಿ ಕೇಂದ್ರ ಸಶಸ್ತç ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ೨೪೮ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. ೧೦೨೪ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
 ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗೆ ಪರ್ಯಾಯ ದಾಖಲೆಗಳು: ಮತದಾರರ ಪಟ್ಟಿಯಲ್ಲಿ ನೋಂದಾಯಿತ ಮತದಾರರು ಮತದಾರರ ಭಾವಚಿತ್ರವಿರುವ ಗುರುತಿನಚೀಟಿ ಹೊರತುಪಡಿಸಿ, ಆಧಾರ್‌ಕಾರ್ಡ್, ನರೇಗಾ ಜಾಬ್‌ಕಾರ್ಡ್, ಬ್ಯಾಂಕ್/ಅAಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್‌ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಚಾಲನಾ ಪರವಾನಗಿ (ಡ್ರೆöÊವಿಂಗ್ ಲೈಸೆನ್ಸ್), ವಿಶೇಷ ಚೇತನರ ಗುರುತಿನ ಚೀಟಿ, ಪ್ಯಾನ್‌ಕಾರ್ಡ್, ಎಂ.ಪಿ.ಆರ್ ನ ಅಡಿಯಲ್ಲಿ ಆರ್.ಜಿ.ಐ ನೀಡಿರುವ ಸ್ಮಾರ್ಟ್ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಪಿ.ಎಸ್.ಯು ಗಳ ಸೇವಾ ಗುರುತಿನ ಚೀಟಿ, ಎಂ.ಪಿ/ಎA.ಎಲ್.ಎ/ಎA.ಎಲ್.ಸಿ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಯಂತಹ ಪರ್ಯಾಯ ದಾಖಲೆಗಳನ್ನು ಮತಗಟ್ಟೆಗಳಲ್ಲಿ ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಮತದಾನದ ನಿಮಿತ್ಯ ಶುಷ್ಕ ದಿನ ಮತ್ತು ಸೆಕ್ಷನ್ ೧೪೪ ಜಾರಿ: ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನದ ಉದ್ದೇಶದಿಂದ ಮೇ ೦೫ ರ ಸಂಜೆ ೦೬ ಗಂಟೆಯಿAದ ಮೇ ೦೭ ರ ರಾತ್ರಿ ೧೨ ಗಂಟೆಯವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಶುಷ್ಕ ದಿನಗಳೆಂದು ಘೋಷಣೆ ಮಾಡಲಾಗಿದೆ. ಅದರೊಂದಿಗೆ ಮೇ ೦೫ ರ ಸಾಯಂಕಾಲ ೦೬ ಗಂಟೆಯಿAದ ಮೇ ೦೮ ರ ಬೆಳಿಗ್ಗೆ ೦೬ ಗಂಟೆಯವರೆಗೆ ಭಾರತ ದಂಡ ಪ್ರಕ್ರಿಯೆ ಸಂಹಿತೆ ಕಲಂ ೧೪೪ರ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿರುತ್ತದೆ ಹಾಗೂ ಈ ಅವಧಿಯಲ್ಲಿ ಐouಜ Sಠಿeಚಿಞeಡಿ ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಹಿರಂಗ ಪ್ರಚಾರ ಅವಧಿ ಮುಕ್ತಾಯ:ಮತದಾನದ ೪೮ ಗಂಟೆ ಪೂರ್ವದಲ್ಲಿ ಅಂದರೆ ಮೇ ೦೫ ರ ಸಂಜೆ ೦೬ ಗಂಟೆಗೆ ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಳ್ಳಲಿದೆ. ಈ ಸಮಯದಲ್ಲಿ ಅಭ್ಯರ್ಥಿಗಳು ಗರಿಷ್ಠ ೦೫ ಜನ ಮೀರದಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದೆ. ಪ್ರಜಾ ಪ್ರಾತಿನಿಧ್ಯಕಾಯ್ದೆ ೧೯೫೧ ಕಲಂ ೧೨೬ರನ್ವಯ ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ಹೆಚ್ಚಿಸಲು ಹೊರಗಿನಿಂದ ಕರೆತಂದಿರುವ ಈ ಕ್ಷೇತ್ರದ ಮತದಾರರಲ್ಲದೇ ಇರುವ ಬೆಂಬಲಿಗರು/ರಾಜಕೀಯ ಕಾರ್ಯಕರ್ತರು/ಪಕ್ಷದ ಕಾರ್ಯಕರ್ತರು/ಮೆರವಣಿಗೆ ಪದಾಧಿಕಾರಿಗಳು/ಪ್ರಚಾರ ಕಾರ್ಯಕರ್ತರು ಇತ್ಯಾದಿಯವರು ಈ ಕ್ಷೇತ್ರದಲ್ಲಿ ಉಪಸ್ಥಿತರಿರುವಂತಿಲ್ಲ.
ಈ ಬಗ್ಗೆ ನಿಗಾವಹಿಸಲು ಮಾದರಿ ನೀತಿ ಸಂಹಿತೆ ತಂಡಗಳಿAದ ಕ್ಷೇತ್ರದಲ್ಲಿನ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ವಸತಿ ಗೃಹಗಳು, ಅತಿಥಿ ಗೃಹಗಳು ಹಾಗೂ ಲಾಡ್ಜ್ಗಳ ಪರಿಶೀಲನೆಯನ್ನು ಕೈಗೊಳ್ಳಲಾಗುವುದು. ಕ್ಷೇತ್ರದ ಗಡಿಗಳಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳನ್ನು ಪರಿಶೀಲಿಸಿ ಅವರು ಈ ಕ್ಷೇತ್ರದ ಮತದಾರರೇ ಎಂಬ ಬಗ್ಗೆ ಕಂಡು ಹಿಡಿಯಲು ಅವರ ಗುರುತಿನ ದಾಖಲಾತಿಗಳನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಅನುಮತಿ ಕಡ್ಡಾಯ;ಮತದಾನದ ಪೂರ್ವ ದಿನ ಮತ್ತು ಮತದಾನದ ದಿನದಂದು ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಯಾವುದೇ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮಗಳಲ್ಲಿ, ಎಲೆಕ್ಟಾçನಿಕ್ ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ರಾಜಕೀಯ ಜಾಹೀರಾತು ಮುದ್ರಣಕ್ಕೆ ಹಾಗೂ ಪ್ರಕಟಣೆಗೆ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಅವರು ತಿಳಿಸಿದರು.
ಅಂಚೆ ಮತಪತ್ರ ಮತ್ತು ಚುನಾವಣಾ ಕರ್ತವ್ಯ ಪ್ರಮಾಣ ಪತ್ರ:ಭಾರತ ಚುನಾವಣಾ ಆಯೋಗವು ವಿಕಲಚೇತನ ಮತದಾರರಿಗೆ, ೮೫+ ವಯೋಮಾನದ ಮತದಾರರಿಗೆ ಮತ್ತು ಕೋವಿಡ್ ಶಂಕಿತ/ಬಾಧಿತ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮನೆಯಿಂದ ಮತದಾನ ಸೌಲಭ್ಯವನ್ನು ಒದಗಿಸಿದೆ. ಅಗತ್ಯ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೬ ಇಲಾಖೆಯ ಸಿಬ್ಬಂಧಿಗಳಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ ಮೂಲಕ ಮತ ಚಲಾಯಿಸಲು ಅವಕಾಶವನ್ನು ಕಲ್ಪಿಸಿದೆ. ೮-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ೮೫+ ವಯೋಮಾನದ ೧,೩೬೧ ಮತದಾರರಲ್ಲಿ ೧,೩೦೪ ಮತದಾರರು ಮತ ಚಲಾಯಿಸಿರುತ್ತಾರೆ. ೫೭೬ ವಿಕಲಚೇತನ ಮತದಾರರಲ್ಲಿ ೫೬೩ ಮತದಾರರು ಮನೆಯಿಂದ ಮತ ಚಲಾಯಿಸಿರುತ್ತಾರೆ. ಅಗತ್ಯ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೬ ಇಲಾಖೆಯ ೮೫೩ ಸಿಬ್ಬಂದಿ ಮತದಾರರಲ್ಲಿ ೪೩೧ ಮತದಾರರ ಮತ ಚಲಾಯಿಸಿರುತ್ತಾರೆ.

೦೮-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ನೋಂದಾಯಿತರಿದ್ದು, ಬೇರೆ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾದ ಮತದಾರರಲ್ಲಿ ೨,೭೫೨ ಮತದಾರರಿಗೆ ಅಂಚೆ ಮತ ಪತ್ರವನ್ನು ಒದಗಿಸಲಾಗಿರುತ್ತದೆ. ೦೮-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ನೋಂದಾಯಿತರಿದ್ದು, ಇದೇ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ೬,೭೨೧ ಮತದಾರರಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಲೋಕಸಭಾ ಸಾರ್ವತ್ರಿಕಚುನಾವಣೆಯ ಮಾದರಿ ನೀತಿ ಸಂಹಿತೆಅವಧಿಯಲ್ಲಿಜಪ್ತಿ ಮಾಡಲಾದ ಹಣ/ಸಾಮಗ್ರಿಗಳ ವಿವರ:ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ರೂ.೧,೦೨,೪೨,೫೦೦/- ಗಳ ಹಣವನ್ನು ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಂತರ ರೂ.೬೯,೦೦,೦೦೦/- ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಅಬಕಾರಿ ಇಲಾಖೆಯಿಂದ ರೂ.೨,೪೪,೯೧,೦೦೦/-ಗಳ ಮೌಲ್ಯದ ೬೦೭೪೨.೪೨ ಲೀ. ಗಳ ಮದ್ಯವನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ೧,೬೮,೦೦೦/- ಮೌಲ್ಯದ ೩೭೦.೯೮ ಲೀ. ಗಳ ಮದ್ಯವನ್ನು ಜಪ್ತಿ ಮಾಡಲಾಗಿದೆ. ಚುನಾವಣೆ ಸಂಬAಧ ಮಾದರಿ ನೀತಿ ಸಂಹಿತೆ ತಂಡಗಳಿAದ ೦೬ ಪ್ರಕರಣಗಳು ಮತ್ತು ಪೊಲೀಸ್ ಇಲಾಖೆಯಿಂದ ೪೪ ಪ್ರಕರಣಗಳು ದಾಖಲಾಗಿರುತ್ತವೆ ಎಂದು ಅವರು ತಿಳಿಸಿದರು.
ಮತ ಎಣಿಕೆ ಕೇಂದ್ರ ಮತ್ತು ಭದ್ರತಾ ಕೊಠಡಿಗಳ ನಿರ್ಮಾಣ:  ಮತ ಚಲಾವಣೆಗೊಂಡ ವಿದ್ಯುನ್ಮಾನ ಮತಯಂತ್ರಗಳು, ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ದಾಖಲೆಗಳು ಮತ್ತು ಚುನಾವಣೆ ಸಂಬAಧದ ದಾಖಲೆಗಳನ್ನು ಆಯಾ ವಿಧಾನಸಭಾ ಕ್ಷೇತ್ರವಾರು ಇರಿಸಲು ಭದ್ರತಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮೇ ೦೭ ರಂದು ಮತದಾನದ ನಂತರ ಡಿ-ಮಸ್ಟರಿಂಗ್ ಕೇಂದ್ರಗಳಿAದ ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಧಾನಸಭಾ ಕ್ಷೇತ್ರವಾರು ೦೯ ಭದ್ರತಾ ಕೊಠಡಿಯನ್ನು ಮತ್ತು ಮತ ಚಲಾವಣೆಗೊಂಡ ಅಂಚೆ ಮತಪತ್ರಗಳನ್ನು ಇರಿಸಲು ೦೧ ಭದ್ರತಾ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಜೂನ್ ೦೪ ರಂದು ಮತ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
        ಸ್ವೀಕೃತವಾದ ದೂರುಗಳ ವಿವರ:ಲೋಕಸಭಾ ಚುನಾವಣೆ ಸಂಬಧವಾಗಿ ೧೯೫೦ ಟೋಲ್‌ಫ್ರೀ ಜಿಲ್ಲಾ ಸಂಪರ್ಕ ಕೇಂದ್ರದ ಮೂಲಕ ೪೩೧ ಕರೆಗಳು ಸ್ವೀಕೃತವಾಗಿರುತ್ತವೆ. ಸಿ-ವಿಜಿಲ್ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತ ೧೨೪ ದೂರುಗಳು ಸ್ವೀಕೃತವಾಗಿರುತ್ತವೆ. ೧೯೫೦ ಮೂಲಕ ಮತದಾರರು ಯಾವುದೇ ರೀತಿಯ ದೂರು ಅಥವಾ ಮಾಹಿತಿ ಇದ್ದಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದು/ದೂರು ಸಲ್ಲಿಸಬಹುದು. ಸಿ-ವಿಜಿಲ್ ಆಪ್ ಮೂಲಕ ಮತದಾರರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬAದಲ್ಲಿ ದೂರುಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಸ್ವೀಪ್ ಸಮಿತಿ ಕೈಗೊಂಡ ಕಾರ್ಯಗಳು: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಡೆಯ ಅವರು ಮಾತನಾಡಿ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಶೇ.೮೧ ಕ್ಕೂ ಹೆಚ್ಚು ಮತದಾನ ಗುರಿಯನ್ನು ಹೊಂದಿದ್ದು, ಇದರ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಡಿಮೆ ಮತದಾನ ದಾಖಲಾದ ೬೧೦ ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಮತದಾರರ ಮತದಾನ ಪ್ರತಿಶತ ಹೆಚ್ಚಿಸಲು ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ಮಹಿಳಾ ಬಿ.ಇಡಿ ಕಾಲೇಜು ವಿದ್ಯಾರ್ಥಿನಿಯರಿಂದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಾಕ್‌ಥಾನ್ ಜಾಗೃತಿ ಕಾರ್ಯಕ್ರಮಗಳು, ವಿಶೇಷ ಚೇತನರಿಂದ ನೈತಿಕ ಹಾಗೂ ಕಡ್ಡಾಯ ಮತದಾನದ ಕುರಿತು ಬೈಕ್ ರ‍್ಯಾಲಿ ಮೂಲಕ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ೭ ರಿಂದ ೮ ಲಕ್ಷ ಮಹಿಳಾ ಮತದಾರರಿಗೆ, ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಯುವ ಮತದಾರರಿಗೆ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರಿಗೆ ನೈತಿಕ ಹಾಗೂ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಆಕರ್ಷಿಸಲು ೨೫ ಸಖಿ ಮತಗಟ್ಟೆ, ೦೫-ವಿಶೇಷ ಚೇತನ ಮತಗಟ್ಟೆ, ೦೫-ಯುವ ಮತದಾರರ ಮತಗಟ್ಟೆ, ೦೫-ಮಾದರಿ ಮತಗಟ್ಟೆ ಹೀಗೆ ೪೦ ಚಿತ್ತಾಕರ್ಷಕ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮತದಾನ ದಿನದಂದು ಭದ್ರತಾ ವ್ಯವಸ್ಥೆ:೮-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಮೇ ೦೭ ರಂದು ಮತದಾನ ನಡೆಯಲಿದ್ದು, ಶಾಂತಿಯುತ ಮತದಾನ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಹಾಗೂ ವ್ಯವಸ್ಥಿತ ಭದ್ರತಾ ಯೋಜನೆಗಳನ್ನು ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಜಿಲ್ಲೆಯ ೦೫ ವಿಧಾನ ಸಭಾ ಕ್ಷೇತ್ರಗಳ ೧೩೧೭ ಮತಗಟ್ಟೆಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಬ್ಬ ಡಿಎಸ್‌ಪಿ ಯಂತೆ ಜಿಲ್ಲೆಗೆ ೧೭ ಸಿಪಿಐ, ೫೫ ಪಿಎಸ್‌ಐ, ೬೭ ಎಎಸ್‌ಐ, ೧೩೮೭ ಪೇದೆ/ಮುಖ್ಯ ಪೇದೆ, ೭ ಫಾರೆಸ್ಟ್ ಗಾರ್ಡ್ ಹಾಗೂ ೭೫೦ ಹೋಮ್ ಗಾರ್ಡ್ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸೆಕ್ಟರ್ ಮೊಬೈಲ್ ಡ್ಯೂಟಿ ಅಧಿಕಾರಿಗಳನ್ನಾಗಿ ೯೧ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸೂಕ್ಷö್ಮ ಮತಗಟ್ಟೆಗಳಲ್ಲಿ ನಾಗಾಲ್ಯಾಂಡ್‌ನ ವಿಶೇಷ ಭದ್ರತಾ ಸಿಬ್ಬಂದಿ ಹಾಗೂ ಸಿಎಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆಯಿಂದ ೪೪ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ರೂ. ೧,೬೭,೫೮೫.೯೨/- ಮೌಲ್ಯದ ೩೭೦.೯೮ ಲೀ. ಮದ್ಯವನ್ನು ವಶ ಪಡಿಸಿಕೊಳ್ಳಲಾಗಿದೆ. ರೂ.೧,೦೬,೯೨,೫೦೦-/ ಗಳನ್ನು ಜಪ್ತಿ ಮಾಡಲಾಗಿದೆ. ರೂ.೧,೦೮,೬೦,೦೮೫.೯೨/- ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಚುನಾವಣಾ ಶಾಖೆಯ ನಾಗರಾಜ, ಶಿವು, ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!