
ಮತದಾನ ಅಂಬೇಡ್ಕರ್ ನೀಡಿರುವ ಅಸ್ತ್ರ : ಈ ತುಕಾರಾಂ
ಕರುನಾಡ ಬೆಳಗು ಸುದ್ದಿ
ವಿಜಯನಗರ, 30- ನಗರದ ರೋಟರಿ ಕ್ಲಬ್ ನಲ್ಲಿ ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟ ಹಾಗೂ ವಿಜಯನಗರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಎನ್ನುವ ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಲೋಕಸಭಾ ಚುನಾವಣೆ ಅಭ್ಯರ್ಥಿ ಈ ತುಕರಾಂ ಮಾತನಾಡಿದರು.
ಎಸ್ಸಿ ಎಸ್ಟಿ ಒಬಿಸಿ ಗಳಿಗೆ ಸಂವಿಧಾನದ ಅಡಿಯಲ್ಲಿ ನೀಡಿರುವ ಬಹುದೊಡ್ಡ ಅಸ್ತ್ರವೆಂದರೆ ಮತದಾನ ಡಾ.ಅಂಬೇಡ್ಕರ್ ಅವರು ಒಂದು ಮತ, ಒಂದು ಮೌಲ್ಯ. ಎಂದು ಹೇಳಿದ್ದಾರೆ. ನಿಮ್ಮ ಅಮೂಲ್ಯವಾದ ಮತ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಪಕ್ಷಕ್ಕೆ ಹಾಕಬೇಡಿ ಇಲ್ಲೇ ಇರತಕ್ಕಂತ ನೀವೆಲ್ಲರೂ ಅತ್ಯಂತ ಬುದ್ಧಿಜೀವಿಗಳು ಹಾಗಾಗಿ ಭಾಷಣಕ್ಕಿಂತ ಸ್ಟಾರ್ಟರ್ಜಿ ವರ್ಕೌಟ್ ಮಾಡುವುದು ಅತಿ ಮುಖ್ಯ,ನಾನು ನಾಲ್ಕು ಬಾರಿ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಲು ಕಾರಣ ಬಾಲ್ಯದಿಂದಲೂ ನಾನು ಅನುಭವಿಸಿದ ಕಷ್ಟ ನಷ್ಟಗಳನ್ನು ಅರಿತು ಶಾಸಕನಾದಮೇಲೆ ಕೆಲಸ ಮಾಡಿದ್ದೇನೆ ಹಾಗಾಗಿ ಮತದಾರ ಪ್ರಭುಗಳು ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿ ಶಾಸನ ಸಭೆಗೆ ಕಳಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಅತಿ ಮುಖ್ಯವಾಗಿ ಶಿಕ್ಷಣ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ರಸ್ತೆ ಮತ್ತು ಚರಂಡಿಗಳಿಗೆ ಆದ್ಯತೆ ನೀಡಿದ್ದೇನೆ ಮತ್ತು ಯಾವುದಾದರೂ ಜನರಿಗೆ ಸಮಸ್ಯೆ ಬಂದಲ್ಲಿ ಅವರಿಗೆ ಕರೆದು ಬುದ್ಧಿ ಹೇಳಿ ಕಳಿಸುತ್ತೇನೆ ನನ್ನದು ಕಾಂಪ್ರಮೈಸ್ ಮೈಂಡ್, ನಾನು ಮಾತಾಡಬಾರದು ನನ್ನ ಕೆಲಸಗಳು ಮಾತಾಡಬೇಕು ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಉದ್ಯೋಗ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿದರು.
1991 ಸೆಕ್ಯುಲರ್ ಇದೆ ಈ ಸೆಕ್ಯುಲರ್ ಪ್ರಕಾರ ಉದ್ಯೋಗಗಳು ಈ ಎನ್ ಡಿ ನಮಗೆ ಕೊಡಬೇಕು ಅದಕ್ಕೋಸ್ಕರ ಎನ್ ಎಂಡಿಸಿಯನ್ನು ಕಾನೂನು ರೂಪದಲ್ಲಿ ಅಸೆಂಬ್ಲಿಯಲ್ಲಿ ರೈಸ್ ಮಾಡಿ ನಿಲ್ಲಿಸಿದ್ದೇನೆ. ನಾನು ಈ ಸಾರಿ ನಿಮ್ಮ ದಯೆಯಿಂದ ಪಾರ್ಲಿಮೆಂಟ್ ಸದಸ್ಯನಾದರೆ ಐದು ಸಾವಿರ ಕೋಟಿಯ ಪ್ಲಾಂಟನ್ನು ಕುಡಿತಿನಿ ಹತ್ತಿರ ಹಾಕಿ 1500 ಜನಕ್ಕೆ ಉದ್ಯೋಗಾವಕಾಶ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಎಂದು ಆಶ್ವಾಸನೆ ನೀಡಿದರು.
18 ಲಕ್ಷದ 85 ಸಾವಿರ ಜನ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಮತದಾರರಿದ್ದಾರೆ ನಾವೆಲ್ಲರೂ ಕೈಜೋಡಿಸಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಈ ನೆಲದ ಋಣ ತೀರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರಾದ ಸಿರಾಜ್ ಶೇಖ್, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆಯ ಅಧ್ಯಕ್ಷರಾದ ಮುಂಡರಗಿ ನಾಗರಾಜ, ಎ ಮಾನಯ್ಯ,ಕೆ ಎಸ್ ಎಲ್ ಸ್ವಾಮಿ,ಜಂಬಯ್ಯನಾಯಕ,ಕುರಿ ಶಿವಮೂರ್ತಿ, ಹಾಲಪ್ಪ, ಸೈಯದ್ ಮುಕ್ತಿಯರ್ ಪಾಷಾ,ಹೆಚ್ ಸೋಮಶೇಖರ, ಎಚ್ ಗೋಪಾಲಕೃಷ್ಣ, ನಿಂಬಗಲ್ ರಾಮಕೃಷ್ಣ, ಸ್ಲಂ ರಾಮಕೃಷ್ಣ, ಬಣ್ಣದ ಮನೆ ಸೋಮಶೇಖರ್, ವೆಂಕಟರಮಣ, ಮರಿದಾಸ, ಎರಿಸ್ವಾಮಿ, ಕೋಟಿಗನಾಳ ಮಲ್ಲಿಕಾರ್ಜುನ, ಕೊಟ್ಟಲು ವೀರೇಶ, ಹೆಚ್ ಆನಂದಇತರರು ಇದ್ದರು.