WhatsApp Image 2024-01-31 at 4.15.41 PM

ಮೈಲಾಪುರ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ

ಕರುನಾಡ ಬೆಳಗು ಸುದ್ದಿ

ಕಾರಟಗಿ: ಮೈಲಾಪುರ ಗ್ರಾಮದ ಸಂತೆ ಮಾರುಕಟ್ಟೆ ಆವರಣದಲ್ಲಿ ಇಂದು ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ಸೆಕ್ಟರ್ ಅಧಿಕಾರಿಗಳಾದ ಶ್ರೀಕಾಂತ್ ಟಿ. ಅವರು ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಗಟ್ಟೆ ಗೆ ತೆರಳಿ ಮತ ಚಲಾಯಿಸಿ, ಸಂವಿಧಾನಾತ್ಮಕವಾಗಿ ಮತ ಹಾಕುವುದು ನಮ್ಮ ಕರ್ತವ್ಯ, ಗ್ರಾಮದಲ್ಲಿನ ಎಲ್ಲರೂ ಮತದಾನದಿಂದ ಯಾರು ಹೊರಗುಳಿಯಬಾರದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಮತದಾನವಾಗಲು ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ನಂತರ ತಾಲೂಕು ಸ್ವೀಪ್ ಸಮಿತಿಯ ಸದಸ್ಯರಾದ ಮಹಮ್ಮದ್ ಅಜೀಜ್, ಸಂದೀಪ್ ಅವರು ಮತದಾನದ ಮಹತ್ವ ಕುರಿತು ಮಾಹಿತಿ ‌ನೀಡಿದರು.

ಉತ್ಸಾಹದಿಂದ ಮತ ಹಾಕಿದ ಹಿರಿಯ ನಾಗರಿಕರುತದನಂತರ ಗ್ರಾಮಸ್ಥರಿಗೆ ಇವಿಎಂ, ವಿವಿಪ್ಯಾಟ್ ಮೂಲಕ ಅಣಕು ಮತದಾನ ಮಾಡಿಸಲಾಯಿತು‌.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಐಇಸಿ ಸಂಯೋಜಕರಾದ ಸೋಮನಾಥ ‌ನಾಯಕ, ಗ್ರಾ.ಪಂ‌ ಕಾರ್ಯದರ್ಶಿಗಳು ಕೆ.ವೀರಣ್ಣ, ಸಿಬ್ಬಂದಿಗಳಾದ ನಾಗರತ್ನ, ಲಿಂಗರಾಜ್, ಲಕ್ಷ್ಮಣ್, ನಾಗರಾಜ್, ಬಸವರಾಜ್, ರೇಣುಕಮ್ಮ ಇದ್ದರು.

Leave a Reply

Your email address will not be published. Required fields are marked *

error: Content is protected !!