29c6d239-9808-4f45-a934-f91b298e5de3

ಮನುಸ್ಮೃತಿ ಎಂಬ ಅಸಮಾನತೆಯ ಗ್ರಂಥದಿಂದಾಗಿ

ಶತ ಶತಮಾನಗಳಿಂದ ಶೋಷಣೆ : ಸೋಮಶೇಖರ್ ಬಣ್ಣದಮನೆ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ, (ವಿಜಯನಗರ )ಡಿ 25 – ಮನುಸ್ಮೃತಿ ಎಂಬ ಅಸಮಾನತೆಯ ಗ್ರಂಥದಿಂದಾಗಿ, ಈ ದೇಶದ ಮೂಲನಿವಾಸಿಗಳನ್ನ ಸ್ಪ್ರಷ್ಯ , ಅಸ್ಪ್ರುಷ್ಯ ಜಾತಿಗಳೆಂದು ವಿಂಗಡಿಸಿ ಶತ ಶತಮಾನಗಳಿಂದ ಶೋಷಣೆಮಾಡಿದ ಮತ್ತು ಇಂದಿಗೂ ಸಹ ಅಸಮಾನತೆಯ ಸಂವಿಧಾನವನ್ನ ಪೋಷಿಸಿ ಮತ್ತು ಜಾರಿಮಾಡಲು ಅವಣಿಸುತ್ತಿರುವ ಕೆಲವು ರಾಜಕೀಯ ಮನಸ್ಸುಗಳಿಗೆ ಧಿಕ್ಕಾರವಿರಲಿ ಎಂದರು.

ವಿಜಯನಗರ ಜಿಲ್ಲಾ ಬಾಬಾಸಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘದಿಂದ, ನಗರದ ಜೈ ಭೀಮ್ ವೃತ್ತದಲ್ಲಿ 96ನೇ ಮನುಸ್ಮೃತಿ ದಹನ ದಿನವನ್ನ ಆಚರಿಸಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್ ಬಣ್ಣದಮನೆ ಅವರು ಮಾತನಾಡಿದರು. ದೆಹಲಿಯ ಶಕ್ತಿ ಸೌದದಬಳಿ ಇರುವ ಜಂತರ ಮಂತರದಲ್ಲಿ ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕೆಲವು ಪುಟಗಳನ್ನ ಸುಟ್ಟು ಕೇಕೆ ಹಾಕಿ ಎಸ್ಸಿ, ಎಸ್ಟಿ ಮುರ್ದಾಬಾದ್ ಎಂದ ಘೊಷಣೆ ಕೂಗಿದವರು ಇಂದು ನಮ್ಮ ದೇಶವನ್ನ ಆಡಳಿತ ಮಾಡುತಿದ್ದಾರೆ. ಅಂತವರಿಂದ ನಾವು ನಮ್ಮ ದೇಶವನ್ನ ರಕ್ಷಣೆ ಮಾಡಬೇಕಿದೆ ಎಂದರು.

ಇನ್ನು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಅಯೋದ್ಯಯಲ್ಲಿ ರಾಮ ಮಂದಿರ ಉದ್ಘಾಟನೆ ಮಾಡುತ್ತಿದ್ದರೆ ಆದರೆ ಆದಿವಾಸಿ ಜನಾಂಗದ ಮಹಿಳೆ ಅನ್ನುವ ಕಾರಣಕ್ಕೆ ಈ ದೇಶದ ರಾಷ್ಟ್ರಪತಿಗಳನ್ನೇ ಈ ಉದ್ಘಾಟನೆಗೆ ಕರೆಯುವುದಿಲ್ಲ ಎನ್ನುವುದಾದರೆ ಈ ದೇಶದಲ್ಲಿ ಆಡಳಿತ ಮಾಡುತ್ತಿರುವುದು ಯಾವ ಸಂವಿಧಾನ ಎಂದು ಪ್ರಶ್ನಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75.ವರ್ಷಗಳಾದರೂ ಸಹ ದೇಶದೆಲ್ಲೆಡೆ ಜಾತಿಯತೆ, ಅಸ್ಪ್ರುಷ್ಯತೆ, ದೇವದಾಸಿ ಪದ್ದತಿಗಳು ಇನ್ನೂ ಜೀವಂತವಾಗಿವೆ ಇದಕ್ಕೆ ಕಾರಣ ಯಾರು?, ಈ ಎಲ್ಲಾ ಅನಿಷ್ಟ ಪದ್ಧತಿಗಳು ನಿರ್ಮೂಲನೆ ಆಗದ ಹೊರೆತು ಬಬಾಸಹೇಬ್ ಅಂಬೇಡ್ಕರ್ ಅವರು ಕಂಡ ಕನಸು ಮತ್ತು ಅವರ ಸಂವಿಧಾನ ಪೂರ್ಣಪ್ರಮಾಣದಲ್ಲಿ ಜಾರಿಯಾಗುವುದಿಲ್ಲ ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾದ ಟಿ.ವಾಸುದೇವ್ ಅವರು ಮಾತನಾಡಿ , ಡಿಸೆಂಬರ್ 25, 1927 ರಂದು ಬಾಬಾಸಾಹೇಬ್ ಡಾ. ಬಿ. ಅರ್. ಅಂಬೇಡ್ಕರ್ ಅವರು ಮನುವಾದದ ಗ್ರಂಥವನ್ನ ಬಹಿರಂಗವಾಗಿ ಸುಟ್ಟು, ಈ ದೇಶದ ಜನರಿಗೆ ಸಮಾನತೆ ಸಾರುವ ಸಮ ಸಮಾಜದ ಬಹುಜನರ ಹಿತ ಕಾಯುವ ಸಂವಿಧಾನ ಉಳಿಸಿದರು, ಅಸಮಾನತೆಯ ಮನು ಸಂಸ್ಕೃತಿಯ ಸಂವಿಧಾನ ನಾಶ ಪಡಿಸುವ ದಿನವನ್ನ ಕ್ರಾಂತಿಕಾರಿ ದಿನವನ್ನು, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಮತ್ತು ದೇಶದಲ್ಲಿ ಎಲ್ಲಿಯವರೆಗೆ ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜಾರಿಯಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ನಾವು ಸುಭದ್ರವಾಗಿ ಇರುತ್ತೇವೆ ಅಗಾಗಿ ನಾವು ನಮ್ಮ ಸಂವಿಧಾನ ರಕ್ಷಣೆ ನಮ್ಮ ಜವಬ್ದಾರಿ ಎಂದರು.

ದಲಿತ ಹಕ್ಕುಗಳ ಹೊರಾಟ ಸಮಿತಿಯ ಜಿಲ್ಲಾ ಅದ್ಯಕ್ಷರಾದ ಎಂ. ಜಂಬಯ್ಯ ನಾಯಕ ಮಾತನಾಡಿ ವಾಸ್ತವದಲ್ಲಿ ಮನುವಾದ ಇನ್ನೂ ಜೀವಂತವಾಗಿದೆ. ಸಮ ಸಮಾಜದ ಕನಸು ಕಾಣುತ್ತಿರುವ ಪ್ರಜ್ಞಾವಂತ ಸಮಾಜ, ಮನುವಾದವನ್ನು ದಿಕ್ಕರಿಸಿ, ಬಾಬಾಸಾಹೇಬರ ಕನಸಿನ ಸಮ ಸಮಾಜದ ಕಡೆ ಹಾಗೂ ವಿಜ್ಞಾನದ ಕಡೆಗೆ ಸಾಗಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಲಿತಪರ ಮತ್ತು ಪ್ರಗತಿಪರ ಮುಖಂಡರುಗಳಾದ ಕಾರಿಗನೂರು ಯರಿಸ್ವಾಮಿ, ಜೆ. ಶಿವಕುಮಾರ್, ತಾಯಪ್ಪ ನಾಯಕ, ಮಹಾಬಲೇಶ್ವರ, ವರದಿಗಾರ ವಿರುಪಾಕ್ಷಿ, ತಮ್ಮಾನಳೆಪ್ಪ, ಬಿ ಮಾರೆಣ್ಣ, ಸ್ಲಂ ರಾಮಚಂದ್ರ, ಸಿ ರಮೇಶ್, ರಾಮ್ ಮೋಹನ್, ಬಿ ಹನುಮಂತಪ್ಪ, ಹೊಬಳೇಶ್, ವೈ ರಾಮಚಂದ್ರ ಬಾಬು, ಎಲ್. ಮಂಜುನಾಥ್, ಮಾಜಿ ನಗರಸಭೆ ಸದಸ್ಯರಾದ ಬಸವರಾಜ್, ಮಾರುತಿ ಕಾಂಬ್ಳೆ , ಜಯಣ್ಣ ಪಟ್ಟಿ, ಸಿ ಗೋವಿಂದ್ ರಾಜ್, ರಾಮಕೃಷ್ಣ, ಸಿ ವೆಂಕಟೇಶ್, ಅಂಜಿನಿ, ಇಸ್ಮಾಯಿಲ್, ಇಂತಿಯಾಜ್, ಸಿ ರಾಮಚಂದ್ರ, ಸಿ ರಮಾಲಿ, ಸಿ ಅಂಬರೀಶ್, ಎಲ್ಲಪ್ಪ , ಕೆ ಗಿರೀಶ್, ಖುದ್ದೂಸ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!