WhatsApp Image 2024-05-26 at 6.08.00 PM

ಮನೆ ಮಗನಂತೆ ಸೇವೆ ಮಾಡಲೂ ಅವಕಾಶ ಮಾಡಿ ಕೊಡಿ : ಅಮರನಾಥ ಪಾಟೀಲ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- 371(ಜೆ) ಸಮರ್ಪಕ ಅನುಷ್ಠಾನ ಸೇರಿದಂತೆ ಕನ್ಯಾಣ ಕರ್ನಾಟಕ ಭಾಗದ ಅಮರ್ಗ ಸಮಸ್ಯಗಳಿಗೆ ಸ್ಫಂದಿಸಿ ಪದವೀಧರರ ಆಶೋತ್ತರಗಳಿಗೆ ಸ್ಪಂದಿಸಲು ಸ್ಪರ್ದಿಸಿದ್ದು ಗೆಲ್ಲಿಸಿ ಮನೆ ಮಗನಂತೆ ಸೇವೆ ಮಾಡಲೂ ಅವಕಾಶ ಮಾಡಿ ಕೊಡಿ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಹೇಳಿದರು.

ಅವರು ಕೊಪ್ಪಳದ ಬಿಜೆಪಿ ಕಚೆರಿಯಲ್ಲಿ ಜರುಗಿದ ಸುದ್ದಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದದರು.ಕಲ್ಯಾಣ ಕರ್ನಾಟಕ ಭಾಗದ ಕಾಲಿ ಹುದ್ದೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ವಿಧ್ಯವಂತ ಪದವೀಧರರು ಎರಡನೆ ಭಾರಿ ನನಗೆ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಭಾರಿ ಈಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯರ ಆಯ್ಕೆ ಯಾಗಿದ್ದರು ಅವರ ಹಾಗೂ ನನ್ನ ಕೆಲಸ ತುಲನೆ ಮಾಡಿ ಸೇವೆಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.

ಮಾಜಿ ಸಚಿವ ಎನ್ ಮಹೇಶ ಮಾತನಾಡಿ ಪದವೀಧರ ರಿಗೆ ಉದ್ಯೋಗ ಸಿಗಬೇಕು. ರಾಷ್ಟ್ರೀಯ ಶೀಕ್ಷಣನೀತಿ ಜಾರಿಯಿಂದ ಬರುವದಿನಗಳಲ್ಲಿ ಸ್ವಾವಲಂಬಿಯಾಗಲು ಸಾಧ್ಯ ಕಾಂಗ್ರೆಸ ಸರ್ಕಾರ ದುರುದ್ದೇಶದಿಂದ ಎನಿಪಿ ಜಾರಿಗೋಳಿಸಲಿಲ್ಲಾ ಎಂದು ಆರೋಪಿಸಿದರು.

ಪದವೀಧರರು ಸತ್ಯ ತಿಳಿಯಬೇಕು ಸರ್ಕಾರಿ ಉಧ್ಯೋಗ ಕೇವಲ ಶೇ2 ಮಾತ್ರ, ಸರ್ಕಾರಿ ಹುದ್ದೆ ಶೃಷ್ಠಿಯಾಗುತ್ತವೆ . ಖಾಸಗಿ ಉದ್ಯೋಗದಲ್ಲಿ ವಿಫಲ ಅವಕಾಶ ಗಳಿವೆ ಖಾಸಗಿ ಕ್ಷೇತ್ರದಲ್ಲಿ ಪ್ರತಿಚರ್ಷ ಶೇ, 12 ಉದ್ಯೋಗ ಸಷ್ಠಿಯಾಗುತ್ತವೆ ಖಾಸಗಿ ಕ್ಷೇತ್ರದಲ್ಲಿ ಉಧ್ಯೋಗ ಸಿಗಲು ಕಲ್ಯಾಣ ಕರ್ನಾಟಕ ಜನರಿಗೆ ಸಿಗುತ್ತಾ ಎನಿಪಿ ಜಾರಿಯಾದರೆ ಮಾತ್ರ ನಮ್ಮ ಮಕ್ಕಳಿಗೆ ನ್ಯಾಯ ಸಿಗಲಿದೆ ಎಂದರು.

ಪ್ರಧಾನ ಮಂತ್ರಿ ಮುದ್ರಾ ಸೇರಿದಂತೆ ವಿವಿದ ಯೋಜನೆಯಲ್ಲಿ ಕೋಟ್ಯಾಂತರ ಉದ್ಯೋಗ ಸೃಷ್ಟಿಯಾಗಿವೆ ಪ್ರಧಾನಿ ಮೋದಿಯವರ ಕನಸಿನಂತೆ ವಿಕಸಿತ ಭಾರತ 2047ಕ್ಕೆ ನೂರಕ್ಕೆ ನೂರರಷ್ಟು ಉದ್ಯೋಗ ಸಿಗಲಿದೆ ಎಂದರು .

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಬಸವರಾಜ ಕ್ಯಾವಟರ ,ಮುಖಂಡರಾದ. ಚಂದ್ರಶೇಖರ್ ಹಲಗೇರಿ, ಅಪ್ಪಣ್ಣ ಪದಜಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!