2c136fae-be38-4577-97e1-318669006cc9

ಮರಿಯಮ್ಮನಹಳ್ಳಿಯ ಜಿಟಿಟಿಸಿಯಲ್ಲಿ ಪ್ರವೇಶ ಆರಂಭ

ಕರುನಾಡ  ಬೆಳಗು ಸುದ್ದಿ

ವಿಜಯನಗರ, 29- ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) 2024-25ನೇ ಸಾಲಿನ ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶಾತಿ ಪ್ರಕ್ರಿಯೆಯು ಆನ್‌ಲೈನ್ ಮೂಲಕ ಮೇ 11 ರಿಂದ ಜೂನ್ 03ರವರೆಗೆ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ hಣಣಠಿ://ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ಞeಚಿ ಮೂಲಕ ಸಹ ನಡೆಸಲಾಗುತ್ತದೆ.

ಎಐಸಿಟಿಇ ನವದೆಹಲಿಯಿಂದ ಅನುಮೋದಿತಗೊಂಡ ಕೋರ್ಸ್ ಆಗಿರುವ ಡಿಟಿಡಿಎಂ (ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್)ಗೆ ವಿದ್ಯಾರ್ಹತೆಯು 10ನೇ ತರಗತಿ ಪಾಸ್, ತರಬೇತಿ ಅವಧಿ 3+1 ವರ್ಷ ಮತ್ತು ಪಿಯುಸಿ ಸೈನ್ಸ್/ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ವರ್ಷಕ್ಕೆ ಪ್ರವೇಶ ಇರುತ್ತದೆ. ಇಂಟೇಕ್ 60 ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಾಖಲಾತಿ ಸಮೇತ ಕಾಲೇಜಿಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9740696498, 8105640142, 9845416198ಗೆ ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಉಪಕರನಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು 1996ರಲ್ಲಿ ಮರಿಯಮ್ಮನಹಳ್ಳಿಯಲ್ಲಿ 8.27 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!