
ಮಳೆಯಿಂದ ಸುಮಾರು 400ಎಕರೆ ಬಾಳೆ ಬೆಳೆ ನಾಶ ರೈತ ಕಂಗಾಲು, ಶಾಸಕ ಗವಿಯಪ್ಪ ಸ್ಥಳಕ್ಕೆ ಭೇಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 9- ರಾತ್ರಿ ಸುರಿದ ಗಾಳಿ ಸಮೇತ ಮಳೆಗೆ ಬುಕ್ಕಸಾಗರ, ವೆಂಕಟಾಪುರ, ಕಮಲಾಪುರ ಗ್ರಾಮಗಳ ವ್ಯಾಪ್ತಿಯ ರೈತರ ನೂರಾರು ಎಕರೆ ಬಾಳೆ ಬೆಳೆ ನಾಶವಾಗಿದ್ದು. ರೈತರಲ್ಲಿ ಆತಂಕ ಮನೆ ಮಾಡಿದೆ. ಬರಗಾಲದ ಈ ಸಂಧರ್ಭದಲ್ಲಿ ಬೆಳೆ ನಾಶವಾಗಿರುವುದು ರೈತರ ಬೆನ್ನಿಗೆ ಬರೆ ಎಳೆದಂತಾಗಿದೆ ಈ ಅವಘಡ ದಿಂದ ರೈತರು ಕಂಗಲಾಗಿ ಕಣ್ಣೀರಾಕುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪ ಅಧಿಕಾರಿ ಮತ್ತು ರೈತರೊಂದಿಗೆ ಹೊಲಗಳಿಗೆ ಭೇಟಿ ನಿಡಿ ಪರಿಶೀಲಿಸಿ ಸುಮಾರು 400 ಎಕರೆ ಬಾಳೆ ಬೆಳೆ ನಾಶವಾಗಿದ್ದು ಅಂದಾಜಿಸಲಾಗಿ ತಾಲೂಕು ಆಡಳಿತ ಗಮನಕ್ಕೆ ತಂದು ಸರ್ವೇ ಮಾಡಿಸಿ ಹಾನಿಯಾದವರಿಗೆ ಪರಿಹಾರಕ್ಕಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.