
ಮಹರ್ಷಿ ವಾಲ್ಮೀಕಿ ಗ್ರಂಥವನ್ನು ಆರಾಧನೆ ಮಾಡಬೇಕು
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನಕುಮಾರ ಗುಳಗಣ್ಣನರ
ಕರುನಾಡ ಬೆಳಗು ಸುದ್ದಿ
ಕುಕನೂರ, 28- ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ರಾಮಾಯಣದ ಗ್ರಂಥವನ್ನು ಆರಾಧನೆ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀಕುಮಾರ ಗುಳಗಣ್ಣನರ ಹೇಳಿದರು.
ತಾಲೂಕಿನ ಇಟಗಿ ಗ್ರಾಮದಲ್ಲಿ ಶ್ರೀ ಮಹರ್ಷಿ ಕ್ಷೇಮಾಭಿವೃದ್ಧಿ ಸಂಘ ಇಟಗಿ ಅವರ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಪಕ್ಕದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಗ್ರಂಥವನ್ನು ಈ ಜಗತ್ತಿಗೆ ನೀಡುವುದರ ಮೂಲಕ ಆದರ್ಶವಾದ ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂಬ ವಿಷಯವನ್ನು ಬಹಳ ಅರ್ಥಪೂರ್ಣವಾಗಿ ಆ ಗ್ರಂಥದಲ್ಲಿ ಉಲ್ಲೇಖ ಮಾಡಿದ್ದಾನೆ. ನೂರಾರು ವರ್ಷ ಕಳೆದರೂ ಕೂಡ ಮಹರ್ಷಿ ವಾಲ್ಮೀಕಿಯವರ ನ ಇಂದಿಗೂ ಕೂಡ ನೆನೆಸಿಕೊಳ್ಳುತ್ತಿದ್ದೇವೆ. ಅವರು ಕೊಟ್ಟ ಗ್ರಂಥವನ್ನು ಇವಾಗಲೂ ಕೂಡ ಆರಾಧನೆ ಮಾಡುತ್ತಿದ್ದೇವೆ ಎಂದರೆ ಅದರಲ್ಲಿ ಇರುವ ಶಕ್ತಿ ಎಷ್ಟು ಎಂದು ನಾವು ಎಲ್ಲರೂ ತಿಳಿದುಕೊಳ್ಳಬೇಕು. ರಾಮಾಯಣವನ್ನು ನಾವು ನಮ್ಮ ಧಾರ್ಮಿಕ ಗ್ರಂಥವಾಗಿ ನಾವು ಅದನ್ನು ಆರಾಧನೆ ಮಾಡುವಂತ ಸ್ಥಳದಲ್ಲಿ ಇಟ್ಟು ಪೂಜೆ ಮಾಡುತ್ತೇವೆ. ರಾಮಣ್ಣನ ಇವತ್ತು ದೇವರು ಎಂದು ಕರೆಯುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ಮಹರ್ಷಿ ವಾಲ್ಮೀಕಿ ಎಂಬುವುದನ್ನು ನಾವು ತಿಳಿದುಕೊಳ್ಳಬೇಕಿದೆ. ಇಡೀ ಜಗತ್ತು ಇಡೀ ದೇಶ ಇವತ್ತು ರಾಮಣನ್ನು ದೇವರು ಎಂದು ಕರೆಯುತ್ತಾರೆ. ದೇವರು ಎಂದುಕೊಳ್ಳುವಷ್ಟು ಮಟ್ಟಕ್ಕೆ ಜೀವ ಕಳೆ ತುಂಬಿದವರು ಮಹರ್ಷಿ ವಾಲ್ಮೀಕಿ. ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಏಕೆಂದರೆ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸರ್ಕಾರಿ ಜಯಂತಿ ಮಾಡುವುದರ ಮೂಲಕ ಅದನ್ನು ರಜೆವನ್ನಾಗಿ ಮಾಡುವುದರ ಮೂಲಕ ಇಡೀ ಸಮಾಜಕ್ಕೆ ಗೌರವ ಕೊಡುವ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು .
ತದನಂತರ ದೇವಪ್ಪ ವಾಲ್ಮೀಕಿ ಉಪನ್ಯಾಸಕರು ಮಾತನಾಡಿ, ರಾಮಾಯಣ ಮಹಾ ಗ್ರಂಥ ಸಾವಿರಾರು ಇತಿಹಾಸವಿರುವ ಕಾವ್ಯ. ಗಂಡಸರು ಸ್ತ್ರೀಯರಿಗೆ ಗೌರವ ಕೊಡದಿದ್ದರೆ ಸರ್ವನಾಶವಾಗುತ್ತಾರೆ ತಂದೆ ತಾಯಿಗಳು ಮಕ್ಕಳಿಗೆ ಹಿರಿಯರಿಗೆ ಮತ್ತು ತಂದೆ ತಾಯಿಗಳಿಗೆ ಗೌರವ ಕೊಡುವ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.ಈ
ಸಂದರ್ಭದಲ್ಲಿ ಇಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರ್ಮಲ ದೊಡ್ಮನಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಕೆಳಗಿನಮನಿ, ಮಹೇಶ್ ದೊಡ್ಡಮನಿ, ಮುತ್ತಣ್ಣ ಕಳ್ಳಿಮನಿ, ಬಿ ಎಮ್ ಹಳ್ಳಿ , ಹನುಮಪ್ಪ ಸಂಗಟಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗೌರಮ್ಮ ಗಿರಡಿ, ಸಂಜೀವ ಸಂಗಟಿ, ಗ್ರಾಮದ ಗುರು ಹಿರಿಯರು ಅಂಗನವಾಡಿ ಕಾರ್ಯಕರ್ತರು ಇತರರಿದ್ದರು. ಕಾರ್ಯಕ್ರಮ ನಿರೂಪಣೆ ನಾಗರಾಜ ಉಮುಚಗಿ ಶಿಕ್ಷಕರು ಇವರು ಮಾಡಿದರು.