WhatsApp Image 2024-04-25 at 5.18.07 PM

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮತದಾನ ಜಾಗೃತಿ 

ಕರುನಾಡ ಬೆಳಗು ಸುದ್ದಿ

ವಿಜಯನಗರ, 25- ನಗರದ ಊರಮ್ಮ ಬೈಲ್ ಏರಿಯಾದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವಿಜಯನಗರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಸಪೇಟೆ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ‘ ಸಿಂಧು ಅಂಗಡಿ’ ನೇತೃತ್ವದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ಸಿಂಧು ಅಂಗಡಿ ಮತದಾನ ನಿಮ್ಮ ಹಕ್ಕು ನಿಮ್ಮ ಹಕ್ಕನ್ನು ಚಲಾಯಿಸಬೇಕು ಎಂಬ ಜಾಗೃತಿಯನ್ನು ಕಿರು ನಾಟಕ ಹಾಗು ನೃತ್ಯಗಳ ಮೂಲಕ ತೋರಿಸಿದರು. ಈ ರೂಪಕ ದಲ್ಲಿ ಬುದ್ದಿ ಮಾಂದ್ಯ ವ್ಯಕ್ತಿಗಳು ಕೂಡಾ ಮತವನ್ನು ಇತರರ ಸಹಾಯದಿಂದ ಮತಗಟ್ಟೆಗೆ ತೆರಳಿ ಮತಚಲಾಯಿಸ ಬಹುದೆಂಬುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗೋಲಿ ಮತ್ತು ಹಾಡುಗಳ ಮೂಲಕ ಮತದಾನ ಜಾಗೃತಿಯ ಬಗ್ಗೆ ಅರಿವು ಮೂಡಿಸಲಾಯಿತು.

ಹಿರಿಯ ಮೇಲ್ವಿಚಾರಕರಾದ ಅಂಬುಜ ಮತ್ತು ಚಿತ್ತವಾಡ್ಗಿ -3 ವಲಯದ ಮೇಲ್ವಿಚಾರಕರಾದ ಸುಜಾತ ಮತ್ತು 21ನೇ ವಾರ್ಡಿನ ಮತದಾರರು ಈ ಕಾರ್ಯಕ್ರಮದಲ್ಲಿ ಚಿತ್ತವಾಡ್ಗಿ ಮೂರು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!