
ಶ್ರೀ ಧರಣಿ ಮಹಿಳಾ ಒಕ್ಕೂಟ ಉದ್ಗಾಟನೆ ಮಹಿಳೆಯರು ಸಬಲೀಕರಣ ಮತ್ತು ಸ್ವಾವಲಂಬಿ ಜೀವನ ನಡೆಸಬೇಕು : ಗೀತಾ ಓಲೇಕಾರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,21 ಶ್ರೀ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬಿ ಬದುಕು ನಿಮಿ೯ಸಿಕೂಳ್ಳಲು ಹಲವಾರು ಯೋಜನೆಯನ್ನು ನೀಡುತ್ತಿದ್ದಾರೆ ಎಲ್ಲರೂ ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಸಂಸ್ಥೆಯ ಸಮನ್ವಯ ಅಧಿಕಾರಿ ಗೀತಾ ಓಲೇಕಾರ ಹೇಳಿದರು.
ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಮಾತೃ ಶ್ರೀ ಡಾ.ಹೇಮಾವತಿ ವಿ ಹೆಗ್ಗಡೆ, ಅಮ್ಮನವರ ಮಾರ್ಗ ದರ್ಶನದಲ್ಲಿ ನಡೆಯು ತ್ತಿರುವ ಕಾರ್ಯಕ್ರಮವಾಗಿದ್ದು, ಮಹಿಳೆಯರಿಗಾಗಿಯೇ ಜಾರಿಗೆ ತರಲಾಗಿದೆ.
ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗು ವಂತಹ ಅನೇಕ ವಿಷಯಗಳ ಕುರಿತು ಮಾತನಾಡಿದರು ಗ್ರಾಮದ ಶ್ರೀಶರಣ ಬಸವೇಶ್ವರ ದೇವಸ್ಥಾನದಲ್ಲಿ ನೂತನ ವಾಗಿ ಜ್ಞಾನ ವಿಕಾಸ ಕೇಂದ್ರದ ಅಡಿಯಲ್ಲಿ ನೂತನ ವಾಗಿ ಶ್ರೀಧರಣಿ ಮಹಿಳಾ ಒಕ್ಕೂಟ ಉಧ್ಘಾಟಿಸಿ ಮಾತ ನಾಡಿದ ಅವರು ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಯವರ ಆಶಯ ದಂತೆ ಸ್ವಾಸ್ಥ್ಯ ಸಮಾಜದ ನಿರ್ಮಾಣ, ದುರ್ಬಲ ವರ್ಗದ ವರ ಆರ್ಥಿಕ ಸಬಲತೆ, ಸರ್ವರಿಗೂ ಆರೋಗ್ಯ ಭಾಗ್ಯ ದಂತ ಹ ವಿವಿಧ ಕಾರ್ಯಕ್ರಮಗಳನ್ನು ಗ್ರಾಮಾಭಿವೃದ್ದಿ ಯೋಜನೆ ಯ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಪತ್ರಕರ್ತ ಬಸವರಾಜ ಮುಂಡರಗಿ ಮಾತನಾಡಿ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯು ಮಹಿಳೆಯರಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದ್ದು ಮಹಿಳೆಯರು ಆಥಿ೯ಕವಾಗಿ ಸಬಲೀಕರಣಕ್ಕೆ ಮತ್ತು ಸ್ವಾವಲಂಭಿ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಉತ್ತಮರಾಗಿ ಬೆಳಯುವದರ ಜೊತೆಗೆ ತಮ್ಮ ತಮ್ಮ ಕುಟುಂಬಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನ ಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ತಾಲೂಕ ವಿಕ್ಷಣಾಧಿಕಾರಿ ಶ್ರೀದೇವಿ ಸಣ್ಣಕ್ಕಿ, ವಲಯ ಮೇಲ್ವಿ ಚಾರಕಿ ಚನ್ನಮ್ಮ ಗೌಡ್ರ, ಶ್ರೀಧರಣಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಾಹದೇವಿ ಬಡಿಗೇರ ಹಾಗೂ ಸೇವಾ ಪ್ರತಿನಿಧಿ ಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಇತರರು ಭಾಗವಹಿಸಿದ್ದರು.