
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಣೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,24- ಮಹಿಳೆ ಸಬಲವಾಗಲು ಸರ್ವರೂ ಕೈ ಜೋಡಿಸಿ ಎಂದು ಸರ್ಕಾರಿ ಆಸ್ಪತ್ರೆ ಮುಖ್ಯ ವೈಧ್ಯಾಧಿಕಾರಿ ಡಾ/ಈಶ್ವರ ಸವಡಿ ಹೇಳಿದರು.
ಅವರು ನಗರದ ಎಂಸಿಹೆಚ್ ಆಸ್ಪತ್ರೆಯಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಲಿಂಗ ಸಮಾನತೆ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾ ಗಿದೆ. ಗಂಡು ಮತ್ತು ಹೆಣ್ಣು ಮಕ್ಕಳ ತಾರತಮ್ಯ ಬೇಡ. ಸಮಾನರನ್ನಾಗಿ ಬೆಳೆಸಲು ಪಣ ತೊಡುವುದು ಮುಖ್ಯವಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ದೇಶದ ಜವಾಬ್ದಾರಿ ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ೪೦ ಜನ ಬಾಣಂತಿಯರಿಗೆ ಸಿಹಿ ತಿನಿಸಿ ನವಜಾತ ಶಿಶುಗಳಿಗೆ ಉಡುಪು ನೀಡುವ ಮೂಲಕ ಸರಳವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಶಿವಾನಂದ ನಾಯ್ಕರ್, ಮಲ್ಲಿಕಾರ್ಜುನ ಪಾಟೀಲ್, ಕಿರಣ,ವೆಂಕಟೇಶ, ಜ್ಯೋತಿ, ಲಕ್ಷ್ಮೀ, ಮೀನಾಕ್ಷಿ ಉಪಸ್ಥೀತರಿದ್ದರು.