೮

             ಮಹಿಳೆಯರ ತಾಳಿ ತೆಗೆಸಿದ ಕಾಂಗ್ರೆಸ ಸಾರ್ಕಾರ
     ಮಹಿಳೆ ಭಾವನೆ ಜತೆ ಸರ್ಕಾರ ಆಟ ವಾಡುತ್ತಿದೆ :ಹೇಮಲತಾ

ಕರುನಾಡ ಬೆಳಗು ಸುದ್ದಿ

ಕೊಪ್ಪಳ. 08-  ಮಹಿಳೆಯರ ಮಾಂಗಲ್ಯ ಮತ್ತು ಉಂಗುರ ತೆಗೆಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡುವ ಮೂಲಕ ಮಹಿಳೆಯರ ಭಾವನೆಗಳ ಜೊತೆಗೆ ರಾಜ್ಯ  ಸರ್ಕಾರ ಆಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.

ಅವರು ಬುಧವಾರ ನಗರದ ಮೀಡಿಯಾ ಕ್ಲಬ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು.

ನಮ್ಮ ಸಂಪ್ರದಾಯದ ಪ್ರಕಾರ   ಗಂಡ ತೀರಿ ಹೋದಾಗ ಮತ್ತು ಆಸ್ಪತ್ರೆಗಳಲ್ಲಿ ಸ್ಕ್ಯಾನ್ ಮಾಡುವಾಗ ಮಾಂಗಲ್ಯವನ್ನು ತೆಗೆಯುತ್ತಾರೆ. ಬೇರೆ ಯಾವ ಸಂದರ್ಭದಲ್ಲಿಯೂ ತೆಗೆಯುವುದಿಲ್ಲ. ಆದರೆ ಪರೀಕ್ಷೆಗಳಲ್ಲಿ ತೆಗೆಸುವ ಮೂಲಕ ಸರ್ಕಾರ ಮತ್ತು ಅಧಿಕಾರಿಗಳು ಮಹಿಳೆಯರಿಗೆ ಅವಮಾನ ಮಾಡದೆ. ಮುಂದಿನ ದಿನಗಳಲ್ಲಿ ಯಾವ ಪರೀಕ್ಷೆಗಳಲ್ಲೂ ಮಹಿಳೆಯರ ಮಾಂಗಲ್ಯ ಮತ್ತು ಉಂಗುರಗಳನ್ನು ತೆಗೆಸಬಾರದುತೇಗೆಸಿದರೆ ಬಿಜೆಪಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ ಸರ್ಕಾರ   ಹಿಜಾಬ್ ಹಾಕಿಕೊಂಡು ಮತದಾನ ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಆದರೆ ಮಾಂಗಲ್ಯ ಹಾಕಿಕೊಂಡು ಹೋಗಲು ಅವಕಾಶ ನೀಡಿಲ್ಲ.‌ ಈ ಮೂಲಕ ಸರ್ಕಾರ ಒಂದು ಸಮುದಾಯದ ತುಷ್ಠೀಕರಣ ಮಾಡುತ್ತಿದೆ. ಮುಂಬರುವ ಪರೀಕ್ಷೆಗಳಲ್ಲಿ ಮಾಂಗಲ್ಯ ಮತ್ತು ಉಂಗುರ ತೆಗೆಸಬಾರದು. ಈ ನಿಗಮಗಳನ್ನು ತೆಗೆಯಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ  ನಗರ ಘಟಕದ ಅಧ್ಯಕ್ಷೆ ಗೀತಾ ಪಾಟೀಲ್, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಗರಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!