IMG-20240327-WA0000

ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’ ಕೃತಿ ಬಿಡುಗಡೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,ಮಾ-೨೮;- ಲಿಖಿತ್-ರೀನಾ ಪ್ರಕಾಶನ, ಕೊಪ್ಪಳ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’ ಎಂಬ ಚೊಚ್ಚಲ ಕವನ ಸಂಕಲನ ಮಾ,೨೯ರಂದು ಬೆ.೧೦ಕ್ಕೆ ನಗರದ ಕೃಷಿ ವಿಸ್ತರ್ಣಾ ಕೇಂದ್ರದಲ್ಲಿ ಲೋಕಾಪರ್ಣೆಗೊಳ್ಳಲಿದೆ.

ಈ ಕೃತಿಯನ್ನು ಪ್ರಾಧ್ಯಾಪಕರು ಹಾಗೂ ಲೇಖಕಿ ಡಾ.ಮುಮ್ತಾಜ್ ಬೇಗಂರವರು ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಬೆಳಗಾವಿಯ ಕವಿಗಳು ಹಾಗೂ ವಿರ್ಮಶಕರಾದ ನಾಗೇಶ ಜೆ. ನಾಯಕ್‌ರವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಹಿರಿಯ ಬರಹಗಾರರಾದ ಡಿ.ಎಂ.ಬಡಿಗೇರರವರು ಉದ್ಘಾಟಿಸಲಿದ್ದು. ಬಂಡಾಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರುರವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಎ.ಎಂ.ಮದರಿ, ಮಹಾಂತೇಶ ಮಲ್ಲನಗೌಡರ್, ಕೊಪ್ಪಳ ಜಿಲ್ಲಾ ಕಸಾಪದ ಅಧ್ಯಕ್ಷರಾದ ಶರಣೇಗೌಡ ಪೋಲಿಸ್ ಪಾಟೀಲ್, ಮಹಿಳಾ ಸಾಹಿತಿಗಳಾದ ಸಾವಿತ್ರಿ ಮುಜುಮದಾರ, ಅನಸೂಯ ಜಾಗೀರದಾರ್, ಅರುಣಾ ನರೇಂದ್ರರವರು ಉಪಸ್ಥಿತಿ ಇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಕಾಶನದ ವತಿಯಿಂದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಅಶೋಕ ಓಜಿನಹಳ್ಳಿ, ಶಿಲ್ಪಾ ಕೃಷ್ಣ ಚಿತ್ರಗಾರ, ಭೀಮರಾಶಿ ಹೂಗಾರ ಹಾಗೂ ಮಹೇಶ ಬಳ್ಳಾರಿಯವರಿಗೆ ವಿಶೇಷ ಸನ್ಮಾನ ಮಾಡಲಿದ್ದಾರೆ ಎಂದು ಪ್ರಕಾಶನದ ಪರವಾಗಿ ಉಮೇಶ ಕಾತರಕಿಯವರು ಪತ್ರಿಕಾ ಪ್ರಕಟಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!