
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ
ಮಾರ್ಚ 29 ರಂದು ಮಹಿಳಾ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27 – ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು ಜಿಲ್ಲಾ ಮಹಿಳಾ ಘಟಕ, ಕೊಪ್ಪಳ ದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಾಳೆ ಮಾರ್ಚ 29 ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಿರ್ಲೋಸ್ಕರ್ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಕಮಲಾ ಗುಮಾಸ್ತೆ ಮಾಡಲಿದ್ದು. ಅ.ಕ.ಬ್ರಾ.ಮ ಜಿಲ್ಲಾ ಸಂಚಾಲಕರಾದ ಶ್ರೀಮತಿ ವೈಷ್ಣವಿ ಹುಲಿಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಜಿಲ್ಲಾ ಸಂಚಾಲಕರಾದ ಹನುಮಂತರಾವ್ ದೇಶಪಾಂಡೆ, ಜಿಲ್ಲಾ ಸಹ ಸಂಚಾಲಕರಾದ ಶ್ರೀಮತಿ ಮಧುರಾ ಕರಣಂ ಹಾಗೂ ತಾಲೂಕ ಸಂಚಾಲಕರಾದ ಶ್ರೀಮತಿ ಸೌಮ್ಯಗುಡಿ ಆಗಮಿಸಲಿದ್ದಾರೆ.
ವಿಶೇಷ ಉಪನ್ಯಾಸ : ಸಂಪನ್ಮೂಲ ವ್ಯಕ್ತಿ ಗುರುರಾಜ ಪಾಟೀಲ್ ಹುಬ್ಬಳ್ಳಿ ಇವರು ನೀಡಲಿದ್ದು ,ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಧಾ ಕುಲಕರ್ಣಿ, ಶ್ರೀಮತಿ ಸ್ನೇಹಲತಾ ಜೋಷಿ, ಶ್ರೀಮತಿ ವೈಷ್ಣವಿ ಹುಲಿಗಿ ಇತರರು ಆಗಮಿಸಲಿದ್ದು ಸರ್ವರು ಆಗಮಿಸಿ ಯಶಸ್ವಿ ಗೊಳಿಸುವಂತೆ ಪ್ರಕಟಣೆಯಲ್ಲಿ ಕೊರಿದ್ದಾರೆ.