
ಮಾ.1ರಂದು ಅಂಚೆ ವಿಭಾಗ ಕಚೇರಿ ಉದ್ಘಾಟನೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ಬಹುವರ್ಷದ ಬೇಡಿಕೆಯಾಗಿದ್ದ ಅಂಚೆ ವಿಭಾಗ ಕಚೇರಿ ಕೊಪ್ಪಳಕ್ಕೆ ಮಂಜೂರಾಗಿದೆ. ಮಾ.1ರಂದು ಸಾಹಿತ್ಯ ಭವನದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗದಗ ವಿಭಾಗ ಅಂಚೆ ಅಧೀಕ್ಷಕ ನಿಂಗನಗೌಡ ಭಂಗಿಗೌಡ್ರ ಹೇಳಿದರು.
1997ರಲ್ಲಿ ಕೊಪ್ಪಳ ಸ್ವತಂತ್ರ ಜಿಲ್ಲೆಯಾಗಿದ್ದು, 2003ರಿಂದ ಗದಗ ಅಂಚೆ ವಿಭಾಗಕ್ಕೆ ಒಳಪಟ್ಟಿದೆ. ಪ್ರತ್ಯೇಕ ವಿಭಾಗ ರಚಿಸಬೇಕೆಂದು ಆಗಿನಿಂದಲೂ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂತಿಮವಾಗಿ 2024 ಜನೆವರಿ 17ರಂದು ಕೇಂದ್ರ ಸರ್ಕಾರ ಕೊಪ್ಪಳಕ್ಕೆ ಅಂಚೆ ವಿಭಾಗ ಮಂಜೂರು ಮಾಡಿದೆ. ಬರುವ ಏಪ್ರೀಲ್ 1ರಿಂದ ಅಧಿಕೃತವಾಗಿ ಕಾರ್ಯಾರಂಭವಾಗಲಿದೆ. ಈಗಾಗಲೇ ಕೊಪ್ಪಳ ತೋಟಗಾರಿಕೆ ಇಲಾಖೆ ಆವರಣದಲ್ಲಿನ ಕಟ್ಟಡ ನೀಡಿದ್ದಾರೆ. ಮಾ.1ರಂದು ಉದ್ಘಾಟನಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಪ್ಪಳ ವಿಭಾಗದಲ್ಲಿ ಒಂದು ಪ್ರಧಾನ ಅಂಚೆ ಕಚೇರಿ, 34 ಉಪ ಮತ್ತು ಗ್ರಾಮೀಣ ಭಾಗದಲ್ಲಿ 185ಶಾಖಾ ಅಂಚೆ ಕಚೇರಿಗಳಿವೆ. ಮೂರು ಉಪ ವಿಭಾಗಗಳಿವೆ. ಸಂಸದ ಸಂಗಣ್ಣ ಕರಡಿ ಸೇರಿ, ಅನೇಕ ಹೋರಾಟಗಾರರು, ಇಲಾಖೆ ನೌಕರರು, ಮಾಧ್ಯಮದವರ ಸಹಕಾರದಿಂದ ವಿಭಾಗ ಕಚೇರಿ ಮಂಜೂರಾಗಿದೆ. ಮಾ.1ರ ಕಾರ್ಯಕ್ರಮದಲ್ಲಿ ಹುಲಿಗೆಮ್ಮ ದೇವಾಲಯದ ಅಂಚೆ ಚೀಟಿ ಬಿಡುಗಡೆ, ಸಾಧನೆ ಮಾಡಿದ ಇಲಾಖೆ ನೌಕರರಿಗೆ ಸನ್ಮಾನ ಇರಲಿದೆ. ಸಂಸದ ಸಂಗಣ್ಣ ಕರಡಿ, ಕರ್ನಾಟಕ ವೃತ್ತದ ಚ್ೀ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲುಮಾರ, ಅಂಚೆ ಸೇವೆ ನಿರ್ದೇಶಕಿ ವಿ.ತಾರಾ ಸೇರಿ ಅನೇಕ ಗಣ್ಯರು ಭಾಗಿಯಾಗುವರೆಂದರು.
ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಅಚೆ ಅಧಿಆರಿಗಳಾದ ಜಿ.ಎನ್.ಹಳ್ಳಿ, ಗವಿಸಿದ್ದಪ್ಪ ಹಳ್ಳಿ, ರವಿ ಕಾಂತನವರ, ಸಕ್ರಪ್ಪ, ಕಾರ್ತೀಕ ಇತರರಿದ್ದರು.