
ಮುನಿರಾಬಾದ
ನದಿಗೆ ಉರುಳಿ ಬಿದ್ದ ಲಾರಿ: ಚಾಲಕ ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ,08- ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ನದಿಯ ಬ್ರಿಡ್ಜ್ ಗೆ ಬುಧವಾರ ಲಾರಿ ಉರುಳಿ ಬಿದ್ದಿದ್ದು, ಚಾಲಕ ಮೃತ ಪಟ್ಟ ದಾರುಣ ಘಟನೆ ಜರುಗಿದೆ.
ಹೊಸಪೇಟೆ ಯಿಂದ ಬರುತ್ತಿದ್ದ ಮೈನ್ಸ್ ತುಂಬಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ರಕ್ಷಣಾ ಗೋಡೆಗೆ ಲಾರಿ ಡಿಕ್ಕಿ ಹೊಡೆದು ನದಿಗೆ ಉರುಳಿದೆ ಎಂದು ತಿಳಿದು ಬಂದಿದೆ.
ರಸ್ತೆ ಯಲ್ಲಿ ಲಾರಿ ಅತಿವೇಗವಾಗಿ ಬಂದಿದ್ದರಿಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಚಾಲಕ ಬಿಹಾರ್ ಮೂಲದವರು ಎಂದು ತಿಳಿದು ಬಂದಿದೆ.