
ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ನೀಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 19- ಜಿಲ್ಲೆಯಲ್ಲಿನ ಪ್ರಧಾನ ಬೆಳೆಗಳಲ್ಲಿ ಒಂದಾದ ಮೆಣಸಿನಕಾಯಿಗೆ ಉತ್ತಮ ಬೆಲೆ ನೀಡುವುದರ ಜೊತೆಗೆ, ಅವರಿಗೆ ಪ್ರೋತ್ಸಾಹಕ ಯೋಜನೆಗಳನ್ನು ಸರ್ಕಾರವನ್ನು ನೀಡಬೇಕೆಂದು ಒತ್ತಾಯಿಸಿದರು ಎಂದು ಐ ಕೆ ಎಂ ಎಸ್ ರೈತ ಸಂಘದ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ವಿವಿಧ ಗ್ರಾಮಗಳಿಗೆ ಸೇರಿದ ರೈತರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡುತ್ತಾ, ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯಲು ಸಾಕಷ್ಟು ಖರ್ಚು ಮಾಡಿದ್ದಾರೆ, ಬೀಜ ರಸಗೊಬ್ಬರ ಬೆಲೆ ಗಗನಕ್ಕೇರಿದ್ದರೂ ಸಹ ರೈತ ಕೈ ಸಾಲ ಮಾಡಿ ಬೆಲೆಯನ್ನು ಹಾಕಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕುಸಿದಿರುವುದು ರೈತರು ಅತ್ಯಂತ ಚಿಂತಾ ಕ್ರಾಂತ ಎಂದು ಹೇಳಿದರು.
ಇದರಿಂದ ಸಾಕಷ್ಟು ಮಂದಿ ಮೆಣಸಿನಕಾಯಿ ಬೆಲೆ ಸರ್ಕಾರಕ್ಕೆ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ ಎಂದಾದಲ್ಲಿ ಈ ಬೆಲೆಗೆ ಪ್ರೋತ್ಸಾಹ ಧಾರಣೆ ಮಾಡಬೇಕೆಂದು ಒತ್ತಾಯಿಸಿದರು, ರೈತರು ಕಷ್ಟಪಟ್ಟು ಬೆಳೆಸಿದ ಮೆಣಸಿನಕಾಯಿಗೆ ಬ್ಯಾಡಗಿ 25 ಸಾವಿರ ರೂಪಾಯಿಗಳು, ಅದೇ ರೀತಿ ಯಾಗಿ, ವಿವಿಧ ಕ್ವಿಂಟಲ್‌ಗೆ 55 ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ, ಜಿಲ್ಲಾ ಕಾರ್ಯದರ್ಶಿ ರ್ಯಾಲಿ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಬಸಣ್ಣ, ತಾಲೂಕು ಅಧ್ಯಕ್ಷ ಈರಣ್ಣ, ಕಾಸಿಂಸಾಬ್, ಕುರುಗೋಡು ವಿಭಾಗದ ಅಧ್ಯಕ್ಷ ಲಿಂಗಪ್ಪ ಕಾರ್ಯದರ್ಶಿ ಬಸವರಾಜ್ ಸದಸ್ಯರಾದ ರಮೇಶ್ ಮಲ್ಲಿಕಾರ್ಜುನ್ ಬಸವರಾಜ್ ರೈತರಾದ ರಾಯನಗೌಡ ಕೋಳೂರು ಪಂಪಾವತಿ ಕಾಳಿಂಗಪ್ಪ ರಾಮಪ್ಪ ಹಾಗೂ ಹಲವಾರು ರೈತರು ಭಾಗವಹಿಸಿದ್ದರು.