
೨೫ ಕ್ಕೆ “ಎಂದೂ ಮುಳುಗದ ಸೂರ್ಯ ಕವನ ಸಂಕಲನ ಲೋಕಾರ್ಪಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ‘ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೪ ನೇ ಜಯಂತ್ಸೋವ’ದ ಪ್ರಯುಕ್ತ ಶಿಕ್ಷಕ ಬಿ.ತಿರುಪತಿ ಶಿವನಗುತ್ತಿ ಅವರು ರಚಿಸಿದ ‘ಎಂದೂ ಮುಳುಗದ ಸೂರ್ಯ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಹಾಗೂ ಬಾಲ ಪ್ರತಿಭೆ ಕುಮಾರಿ ಸಿಂಚನಾ ಶಿವನಗುತ್ತಿ ಅವರ ಹೊಸ ಚಿಗುರು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವು ಮೇ.೨೫ ರಂದು ಬೆಳಗ್ಗೆ ೧೧ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ( ರಿ) ಕೊಪ್ಪಳ, ಸಿಂಚನಾ ಜನಸೇನಾ ಟ್ರಸ್ಟ್(ರಿ) ಕೊಪ್ಪಳ, ಚಿನ್ಮಯಿ ಪ್ರಕಾಶನ ಕೊಪ್ಪಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುವರು.ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸುವರು.
ಗುಲ್ಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ಕವನ ಸಂಕಲನ ಬಿಡುಗಡೆ ಮಾಡುವರು.
ಸಮಾಜ ಸೇವಕರಾದ ಕೃಷ್ಣ.ಎಂ.ಇಟ್ಟಂಗಿ ಅವರು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು. ಮುಖ್ಯ ಶಿಕ್ಷಕರಾದ ಡಿ.ರಾಮಣ್ಣ ಆಲ್ಮರ್ಶಿಕೇರಿ ಅವರು ಪುಸ್ತಕ ಪರಿಚಯ ಮಾಡುವರು.ಅಂಬೇಡ್ಕರ್ ಎನ್ನುವ ಎಂದೂ ಮುಳುಗದ ಸೂರ್ಯ ಎನ್ನುವ ವಿಷಯದಡಿ ಹೋರಾಟಗಾರರು, ಚಲನಚಿತ್ರ ನಿರ್ದೇಶಕರಾಗಿರುವ ಅಭಿ ಒಕ್ಕಲಿಗ ಅವರು ವಿಶೇಷ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಛಲವಾದಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಜಿ.ಎಮ್.ಬೆಲ್ಲದ, ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಬೆಂಗಳೂರು ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಕನ್ನಡ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸೋಮಶೇಖರ ಬಣ್ಣದ ಮನಿ, ಹಿರಿಯ ಪತ್ರಕರ್ತರಾದ ಚಾಮರಾಜ ಸವಡಿ, ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಆರ್.ಕಾಂಬಳೆ, ಬೆರಗು ಪ್ರಕಾಶನದ ಪ್ರಕಾಶಕರು, ಸಂಘಟಕರಾದ ಡಿ.ಎಮ್.ಬಡಿಗೇರ್, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಶಂಕ್ರರಯ್ಯ, ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಲೆಕ್ಕಾಧಿಕಾರಿ ವೇಣುಗೋಪಾಲ, ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷರಾದ ಗುಡದಪ್ಪ ಹಡಪದ ಭಾಗವಹಿಸುವರು ಎಂದು ಲೇಖಕರಾದ ಬಿ.ತಿರುಪತಿ ಶಿವನಗುತ್ತಿ, ಚಿನ್ಮಯಿ ಪ್ರಕಾಶನದ ಪ್ರಕಾಶಕರಾದ ರಾಜೇಶ ಯಾವಗಲ್ ಉಪಸ್ಥಿತಿ ವಹಿಸುವರು ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ