WhatsApp Image 2024-04-22 at 6.59.56 PM

ಬಳೂಟಗಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರಿಗೆ ಸ್ವೀಪ್‌ ಮತದಾನ ಜಾಗೃತಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡಲು ಸಂವಿಧಾನ ಕೊಟ್ಟ ಹಕ್ಕು ಆದರಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು ಈ ಬಾರಿ ಬಳೂಟಗಿ ಗ್ರಾಮದಲ್ಲಿ ಶೇ/100 ಕ್ಕೆ ನೂರರಷ್ಟು ಮತದಾನ ಹೆಚ್ಚಾಗಬೇಕು ಎಂದು ಬಳೂಟಗಿ ಗ್ರಾಮ ಪಂಚಾಯಿತಿ ಪಿಡಿಓ ಎಂ. ಡಿ. ಫಯಾಜ್ ಹೇಳಿದರು.

ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ, ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವೀಪ್ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಂತರ ತಾಲೂಕು ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಮಾತನಾಡಿ, 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಳೂಟಗಿ ಗ್ರಾಮದ ನರೇಗಾ ಕೂಲಿಕಾರರು ಮೇ 7 ರಂದು ನಡೆಯುವ ಮತದಾನದಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡಲು ಸಂವಿಧಾನ ಕೊಟ್ಟಿರುವ ಹಕ್ಕಾಗಿದೆ. ಅದನ್ನು ನಾವು ಚಲಾಯಿಸಬೇಕು. ಅದರಿಂದ ವಂಚಿತರಾಗಬಾರದು. ಎಲ್ಲರೂ ಮತದಾನ ಮಾಡಿ ಶೇಕಡಾ 100 ರಷ್ಟಾಗಬೇಕು ಎಂದರು.

ಗ್ರಾಮ ಪಂಚಾಯತಿ ಪಿಡಿಒರಾದ ಎಂ.ಡಿ.ಫಯಾಜ್ ಮಾತನಾಡಿ, 2024-25 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಸಾಮೂಹಿಕ ಕೆಲಸ ಆರಂಭಿಸಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಈ ಬಾರಿ ಎಲ್ಲರೂ 100 ಮಾನವ ದಿನಗಳ ಸದುಪಯೋಗ ಪಡೆಯಬೇಕು. ತಮಗೆ ಯೋಜನೆಯ ಬಗ್ಗೆ ಏನಾದರೂ ಸಮಸ್ಯೆಗಳು ಇದ್ದರೆ ನರೇಗಾ ಯೋಜನೆಯ ಏಕೀಕೃತ ಸಹಾಯವಾಣಿ 8277506000 ಗೆ ದೂರು ಅಥವಾ ಕೆಲಸದ ಬೇಡಿಕೆಗಾಗಿ ಕರೆ ಮಾಡಬಹುದು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತಿ ಡಿಇಒ ಮಹೇಶ ಮಾತನಾಡಿ, ನರೇಗಾದಡಿ ಎನ್ಎಂಆರ್ ತೆಗೆಸುವ ಮೊದಲು ತಮ್ಮ ಜಾಬ್ ಕಾರ್ಡ್ ಗೆ ಬ್ಯಾಂಕ್‌ಪಾಸ್ ಬುಕ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೆಕು. ಯಾವುದೇ ರೀತಿಯ ಸಮಸ್ಯೆ ಇದ್ದರೆ ಬ್ಯಾಂಕ್‌ಗೆ ಹೋಗಿ ಸರಿಪಡಿಸಿಕೊಳ್ಳಬೇಕು ಎಂದರು.

ಕಾಮಗಾರಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ಅಕುಶಲ ಕೂಲಿಕಾರರಿಂದ ಸ್ವೀಪ್ ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಈ ವೇಳೆ ಬಿಎಫ್ ಟಿ ಶರೀಫ್, ಕಾಯಕ ಮಿತ್ರರಾದ ವಿದ್ಯಾ ಗಾಣಿಗೇರ, ಕಾಯಕ ಬಂಧುಗಳು, ಅಕುಶಲ ಕೂಲಿಕಾರರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!