
ಮೊಬೈಲ್ ಸಿಮ್ ಹ್ಯಾಕ್ ಮಾಡಿ ಖಾತೆಯಲ್ಲಿನ 90,696 ರೂ ಹಣ ವಂಚನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ನಗರದ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯಾ ನಿವಾಸಿ ತಿರುಮಲ ರಾಜಶೇಖರ್ ಅವರ ವೃತ್ತಿಯಲ್ಲಿ ವಕೀಲರು ಇವರ ಮೊಬೈಲ್ ಸಿಮ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆ ಗಳಲ್ಲಿ ಇದ್ದ 90,696ರೂ ವಂಚಿಸಿರುವ ಪ್ರಕರಣ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಬುಧವಾರ ದಾಖಲಾಗಿದೆ.
ಮೊಬೈಲ್ ನಲ್ಲಿದ್ದ ಸಿಮ್ ಕೆಲಸ ಮಾಡುತ್ತಿಲ್ಲವೆಂದು ತಿರುಮಲ ರಾಜಶೇಖರ್ ಅವರು ಮೊಬೈಲ್ ಕಂಪನಿಗೆ ಕೇಳಿದಾಗ ಹೊಸ ಸಿಮ್ ನೀಡಿದ್ದಾರೆ ಆದರೆ ಅದು ಸಹ ಕೆಲವು ಗಂಟೆಗಳು ನಂತರ ಆಕ್ಟಿವ್ ಆಗುತ್ತದೆ ಎಂದು ತಿಳಿಸಿದ್ದಾರೆ.
ಎರಡು ದಿನ ಕಳೆದರೂ ಸಿಮ್ ಚಾಲನೆ ಆಗಿಲ್ಲ ಆಗ ಕಂಪನಿ ಸಿಬ್ಬಂದಿಗೆ ವಿಚಾರಿಸಿದಾಗ ಬೇರೆ ಮೊಬೈಲ್ ನಲ್ಲಿ ಹಾಕಿ ನೋಡಲು ತಿಳಿಸಿದ್ದಾರೆ ಆಗಲು ಸಹ ಸಿಮ್ ಆನ್ ಆಗದ ಕಾರಣ ಅನುಮಾನ ಬಂದಿದೆ ಬ್ಯಾಂಕ್ ಗಳಲ್ಲಿನ ಖಾತೆಗಳ ಹಣ ಪರಿಶೀಲನೆ ಮಾಡಿದಾಗ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ಇಂಡಿಯನ್ ಬ್ಯಾಂಕಿನ ಖಾತೆಯಿಂದ 69000 ರೂ ಮತ್ತು ಸಿರುಗುಪ್ಪ ನಗರದ ಕೆನರಾ ಬ್ಯಾಂಕಿನ ಖಾತೆಯಿಂದ 21,696 ರೂ ದೋಚಿತಿರುವುದು ತಿಳಿದು ಬಂದಿದೆ .