
ಮೋದಿಯನ್ನು ಪ್ರಧಾನಿ ಮಾಡಲು ಒಬಿಸಿ ಕಾರ್ಯಕರ್ತರು ಶ್ರಮಿಸಿಬೇಕು : ಸಿದ್ದೇಶ್ ಊಳೂರು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,31- ನರೇಂದ್ರ ಮೋದಿ ಜೀಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಒ.ಬಿ.ಸಿ ಘಟಕದ ಕಾರ್ಯಕರ್ತರು ಶ್ರಮಿಸಬೇಕು ಎಂದು ಒ.ಬಿ.ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಊಳೂರು ಸಿದ್ದೇಶ್ ಕರೆ ನೀಡಿದರು.
ಅವರು ಜಿಲ್ಲೆಯ ಸಂಡೂರಿನಲ್ಲಿ ನಡೆದ ಬಿಜೆಪಿ ಒಬಿಸಿ ಮಂಡಲ ಸಭೆಯಲ್ಲಿ ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸವುದು ನಮ್ಮ ಆಧ್ಯ ಕರ್ತವ್ಯವಾಗಬೇಕು, ಆ ನಿಟ್ಟನಲ್ಲಿ ನಾವೆಲ್ಲರೂ ಸೇರಿ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಬಿ ಶ್ರೀರಾಮುಲರವನ್ನು ಭಾರಿ ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕಛೇರಿಯ ಪದಾಧಿಕಾರಿಗಳು ಜಿಲ್ಲಾ ಉಪಾಧ್ಯಕ್ಷ ಕಾಂಡ್ರಬಾಬು, ಕಾರ್ಯದರ್ಶಿ ಕೆ ಹೋನ್ನುರುಸ್ವಾಮಿ, ಖಜಾಂಚಿ ಮಾರುತಿ, ಮಂಡಲ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ಕಾರ್ಯದರ್ಶಿ ರಮೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.