
ಕಾಂಗ್ರೆಸ್ ಬಡವರ ಪಕ್ಷ
ಮೋದಿ ಅಧಿಕಾರ ದಾಹಕ್ಕೆ ಜನತೆಯಿಂದ ಉತ್ತರ – ತಿಮ್ಮಾಪೂರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 08- ದೇಶದ ಪ್ರಧಾನಿ ಮೋದಿ ಅಧಿಕಾರ ದೂರಪಯೋಗ ಪಡಿಸಿ ಕೊಂಡಿದ್ದು ಅವರ ಅಧಿಕಾರದ ದಾಹಕ್ಕೆ ಜನತೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಆರ.ಬಿ ತಿಮ್ಮಾಪೂರ ಹೇಳಿದರು.
ಅವರು ಕೊಪ್ಪಳದ ಶಿವಶಾಂತ ವೀರ ಕಲ್ಯಾಣ ಮಂಟಪದಲ್ಲಿ ಜರುಗಿದ . ಕೊಪ್ಪಳ ಲೋಕ ಸಭೆ ಚುನಾವಣಾ ಪೂರ್ವ ಭಾವಿಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿಂದುತ್ವ ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ನಾನು ಹಿಂದುವೇ . ದೇಶ ಆರ್ಥಿಕವಾಗಿ ಹಿಂದುಳಿಯುತ್ತದೆ ದೇಶವನ್ನು ಬಿಜೆಪಿ ಅದೋಗತಿಗೆ ತಳ್ಳುತ್ತದೆ. ಪ್ರಧಾನಿಗಳು ಅಧಿಕಾರದ ದುರಾಸೆ ಮಿತಿಮೀರಿದೆ.
ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ 5 ಯೋಜನೆಗಳನ್ನು ಜಾರಿಗೆ ತಂದಿದೆ. 10 ಕೆ.ಜಿ ಅಕ್ಕಿ. ಬಡವರನ್ನು ಕತ್ತಲಿನಿಂದ ದೂರ ಇಡಲು ಉಚಿತ ವಿದ್ಯುತ್. ಮನೆ ಯಜಮಾನನಿಗೆ 2000 ಹಣ. ಕಾಂಗ್ರೆಸ್ ಬಡವರ ಪರ ಪಕ್ಷ ಬಡವರು ಸಿದ್ದರಾಮಯ್ಯನ ಪರವಾಗಿದ್ದಾರೆ.
ಇಲ್ಲಿನ ಬೆಳವಣಿಗೆಗೆ ಮುಖ್ಯಮಂತ್ರಿ ಹಾಗೂ ಅಧ್ಯಕ್ಷರಿಗೆ ಸಂಪೂರ್ಣ ಮಾಹಿತಿ. ವೈಯಕ್ತಿಕ ಮಾಹಿತಿ ಪಡೆದು ಹೈಕಮಾಂಡಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯಕ್ಕೆ ಕಳಿಸಲಾಗುವುದು. ಕಾರ್ಯಕರ್ತರು ನಿಮ್ಮ ಅಭಿಪ್ರಾಯ, ಅಭ್ಯರ್ಥಿ ಯಾರಾದರೆ ಸೂಕ್ತ ಎಂದು ತಿಳಿಸಿ. ಅದೆಲ್ಲವನ್ನು ಹೈ ಕಮಾಂಡ್ ಗೆ ಕಳಿಸೋಣ. ಪಕ್ಷಯಾರಿಗೆ ಟಿಕೆಟ್ ಕೊಟ್ಟರು ಅವರ ಪರ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ಬಿಜೆಪಿ ಹತಾಶವಾಗಿದೆ. ನಮ್ಮ ಗೆಲುವು ನಿಶ್ಚಿತ. ಬರ ಅಧ್ಯಯನದ ನಾಟಕ ಶುರು ಮಾಡಿದ್ದಾರೆ. ಅದರಿಂದ ಏನೂ ಲಾಭ ಇಲ್ಲ. ಕೇಂದ್ರಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಲಿ.
ಬಿಜೆಪಿ ಚುನಾವಣೆ ನಡೆದು ಇಷ್ಟು ದಿನ ಆದರೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಇವರಿಗೆ ನಾಚಿಕೆ ಆಗಬೇಕು. ಚುಮಾವಣೆಯಲ್ಲಿ ಮೋದಿ ನಾಟಕ ಕಂಪನಿ ಬರಲಿದೆ. ಅವರ ಮುಖ ನೋಡಿ ಮತ ಹಾಕಬೇಕಂತೆ. ಇಲ್ಲಿನವ ಮುಖಕ್ಕೆ ಹುಳು ಬಿದ್ದಿದೆಯಾ? ಮೋದಿ ಸಾಧನೆ ಏನು? ಒಂದಾದರೂ ಹೇಳಲಿ.
ಕಾಂಗ್ರೆಸ್ ದೇಶ ಕಟ್ಟಿದೆ. ಬಿಜೆಪಿ ದೇಶದ ಮನಸ್ಸು ಗಳನ್ನ ಒಡೆಯುವ ಕೆಲಸ ಮಾಡುತ್ತದೆ.
ಕ್ಷೇತ್ರದ ಕಾರ್ಯಕರ್ತರು ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ. ಹಿಂದೆ ರಾಯರಡ್ಡಿ ಎಂಪಿ ಆದಾಗ ತಂದ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ. ಯಾವೊಂದು ಹೊಸ ಯೋಜನೆ ಬಂದಿಲ್ಲ. ನೀವೆಲ್ಲ ಕಾಂಗ್ರೆಸ್ ಪರ ಶಿಳ್ಳೆ, ಕೇಕೆ ಹಾಕಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ನಲ್ಲಿ ಬಯ್ಯಾಪುರ, ಹಿಟ್ನಾಳ್, ಬಾದರ್ಲಿ, ಶಿವರಾಮಗೌಡ, ಮಳೇಮಠ ಇತರರು ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಅವರವರ ಅಭಿಪ್ರಾಯ ತಿಳಿಸಿ. ಆದರೆ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ನಿಮ್ಮ ಒಲವಿರಲಿ. ನೀವು ಕೊಟ್ಟ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ತಿಮ್ಮಾಪುರ ಅವರೊಂದಿಗೆ ಕೊಪ್ಪಳದಿಂದ ಒಬ್ಬ ಸಂಸದನನ್ನು ಕಳಿಸುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಆಕಾಂಕ್ಷಿಗಳಾದ ಕೆ. ರಾಜಶೇಖರ ಹಿಟ್ನಾಳ. ಮಾಜಿ ಶಾಸಕ ಅಮೇರೆಗೌಡ ಪಾಟೀಲ್ ಭಯಾಪೂರ. ಬಸನಗೌಡ ಬಾದಲ್ರಿ. ಬಸವರಾಜ ಸ್ವಾಮಿ ಮಳಿಮಠ . ಮುಖಂಡರಾದ ಕೆ. ಬಸವರಾಜ ಹಿಟ್ನಾಳ . ಶಾಂತಣ್ಣ ಮುದುಗಲ್ಲ್. ಮಾಲತಿ ನಾಯಕ್. ಕಿಶೋರಿ ಭೂದನೂರ. ಅಮ್ಜದ ಪಟೇಲ್. ಎಸ್. ಬಿ .ನಾಗರಾಳ ಇತರರು ಇದ್ದರು.