
ಮೌನ ಮಿಡಿದ ಮಾತು ಕೃತಿ ಲೋಕಾರ್ಪಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,24- ನಗರದ ವಿಮ್ಸ್ ವೈದ್ಯರ ಭವನದಲ್ಲಿ ವಿಮ್ಸ್ ಕನ್ನಡ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಡಾ. ಗೆದ್ದಿ ದಿವಾಕರ್ ಅವರ ಅಮ್ಮನ ಮಿಡಿದ ಮಾತು ಎಂಬ ಪ್ರಥಮ ಕವನ ಸಂಕಲನದ ಕುರಿತು ಲೋಕಾರ್ಪಣೆ ಮತ್ತು ಪತ್ರಕರ್ತ ಗಣೇಶ್ ಅಮೀನಗಡವರ ಏಕವ್ಯಕ್ತಿ ನಟನೆಯ ಕೌದಿ ನಾಟಕ ಪ್ರದರ್ಶನ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾಕ್ಟರ್ ನಿಷ್ಟಿ ರುದ್ರಪ್ಪ, ಕೃತಿ ಬಿಡುಗಡೆ ಮಾಡಿದರು ಡಾಕ್ಟರ್ ಗುಡಿ ಕೃತಿ ಕುರಿತು ಮಾತನಾಡಿದರು.
ವಿಮ್ಸ್ ನಿರ್ದೇಶಕ ಡಾಕ್ಟರ್ ಗಂಗಾಧರ್ ಗೌಡ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದರು.
ಡಾ. ಪರಸಪ್ಪ ಬಂದ್ರೆ ಕಳ್ಳಿ, ಡಾಕ್ಟರ್ ಕೆ ಶಿವಲಿಂಗಪ್ಪ ಹಂದಿಹಾಳು, ಕಾಸಪ್ಪ ಗ್ರಾಮೀಣ ಘಟಕದ ಅಧ್ಯಕ್ಷ ಏರು ಸ್ವಾಮಿ ವೇದಿಕೆಯಲ್ಲಿ ಇದ್ದರು.