
ಯರೇಹಂಚಿನಾಳ : ನೂತನ ಗ್ರಾಮದೇವತೆ ಮೂರ್ತಿ ಪ್ರತಿಷ್ಠಾಪನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಗ್ರಾಮದೇವತೆ ಪ್ರಾಣಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀ ಉಡೆಲಕ್ಷ್ಮೀದೇವಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಗ್ರಾಮದೇವತೆ ಮೂರ್ತಿಗೆ ಬೆಳಿಗ್ಗೆ ಪಂಚಾಮೃತದಿಂದ ಪೂಜೆ ಮುಗಿಸಿಕೊಂಡು ನಂತರ ಶ್ರೀ ಉಡೆ ಲಕ್ಷ್ಮಿದೇವಿ ದೇವಸ್ಥಾನ ದಿಂದ ಬೆಳಿಗ್ಗೆ 8ಗಂಟೆಯಿಂದ ಮಧ್ಯಾಹ್ನದವರೆಗೂ ಗ್ರಾಮದ ಪ್ರಮುಖ ಬೀದಿ ಭೀದಿಯಲ್ಲಿ ಭಂಡಾರ ಯರಚ್ಚುವ ಮೂಲಕ ಗ್ರಾಮದೇವತೆಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ನಂತರ ಈ ಗ್ರಾಮದೇವತೆ ಮೂರ್ತಿಯನ್ನು ಹಳೆ ಪ್ರೌಡ ಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು ಎಂದು ಸವಿತಾ ಉಮೇಶ ನಾಗರಡ್ಡಿ ಮಾತನಾಡಿ ತಿಳಿಸಿದರು.
ಈ ಗ್ರಾಮದೇವಿ ಜಾತ್ರೆ ಮಹೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಯಿಂದ ಬಂದಂತಹ ಭಕ್ತರಿಗೆ ಮಧ್ಯಾಹ್ನದಿಂದ ಸಂಜೆವರೆಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಯಿತು.
ಹೌದು ಮರುದಿನ ಬೆಳಿಗ್ಗೆ ಗ್ರಾಮದೇವಿ ಅಗ್ನಿ ಹೋಮ ವಿಧಿ ವಿಧಾನಗಳ ಪೂಜೆ ಸಲ್ಲಿಸಿ ಗ್ರಾಮದೇವತೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಗ್ರಾಮ ದೇವತಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಲಾಯಿತು ಎಂದು ಶಿವಣ ಯಾಳಿಗಿ ಇವರು ಮಾತನಾಡಿದರು.
ಜೋತೆಗೆ ಜಾತ್ರೆ ಅಂಗವಾಗಿ ರಾತ್ರಿ 8 ಗಂಟೆಗೆ ಮದ್ದು ಹಚ್ಚುವು ಕಾರ್ಯಕ್ರಮ ನಡೆಸಿ ಯರೇಹಂಚಿನಾಳ ಗ್ರಾಮದ ಭಕ್ತರಿಗೆ ಅಲ್ಲದೇ ಸುತ್ತಮುತ್ತಲಿನ ಭಕ್ತರಿಗೆ ಎರಡು ದಿನದವರಿಗೂ ಬೆಳಿಗ್ಗೆ ಉಪಿಟ್ಟು ಚಾ ಸಂಪಾಗಿ ನಡೆಸಿ ಮಧ್ಯಾಹ್ನದಿಂದ ಸಂಜೆವರೆಗೂ ದಿನಕ್ಕೊಂದು ಸಿಹಿ ಪ್ರಸಾದ ಸೇರಿದಂತೆ ಹಲವಾರು ಪ್ರಸಾದ ಎರಡು ದಿನ ನಡೆಸಿ ಮರುದಿನ ದಂದು ಕಡಕ್ ರೋಟಿ ಬದನೆಕಾಯಿ ಪಲ್ಲೆ ಮಡಕಿಕಾಳ ಪಲ್ಲೆ ಮೋಸರು ಚಟ್ನಿ ಹೋಳಿಗೆ ಬುಂದೆ ಮಾದಲಿ ಅನ್ನ ಸಾಂಬಾರು ಉಪ್ಪಿನಕಾಯಿ ಚಟ್ನಿ ಕಡ್ಲಿ ಚಟ್ನಿಯನ್ನು ಗ್ರಾಮದೇವತೆ ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಿದ ಗ್ರಾಮದ ಭಕ್ತರು ಗುರುಹಿರಿಯರು ಯುವಕರು ರೈತರು ಜಾತ್ರೆಗೆ ಬಂದಂತಹ ಅಕ್ಕ ತಂಗಿಯರು ಎಲ್ಲರೂ ಈ ಜಾತ್ರೆಯಲ್ಲಿ ಸಂಪನ್ಗೊಂಡರು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಮಾತನಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರು ಯುವಕರು ರೈತ ಬಾಂಧವರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.