
ಯಲಬುರ್ಗಾದಿಂದ ಮೌಂಟ್ ಅಬುವಿಗೆ ಪ್ರವಾಸ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ— ಸ್ಥಳೀಯ ಈಶ್ವರಿ ವಿಶ್ವವಿದ್ಯಾಲಯ ಪರಿವಾರದವರು ಬ್ರ.ಕು. ಉಮಾ ಅಕ್ಕನವರ ನೇತ್ರತ್ವದಲ್ಲಿ ರಾಜಸ್ಥಾನದಲ್ಲಿರುವ ಈಶ್ವರಿ ವಿ.ವಿ. ದ ಕೇಂದ್ರ ಸ್ಥಳವಾದ ಮೌಂಟ್ ಅಬುವಿಗೆ ಬಾಬನ ಮಿಲನದಲ್ಲಿ ಪಾಲ್ಗೊಳ್ಳಲು ತೆರಳಿದರು.
ಸಿದ್ದಯ್ಯ ಕೊಣ್ಣೂರುˌ ಫಕೀರಪ್ಪ ಗಾಣಗೇರˌ ಶಾರದಾ ಕೊಣ್ಣೂರುˌ ಶಿವಮ್ಮ ಗಾಣಗೇರ ! ರೇಣುಕಾ ನಿಂಗೋಜಿˌ ಅಕ್ಕಮಹಾದೇವಿ ಪಾಟೀಲ ಸಹೊದರಿಯರುˌ ಯಲಬುರ್ಗಾದಿಂದ ಬಳ್ಳಾರಿ ಮಾರ್ಗವಾಗಿ ಕಾಶಿ ವಿಶ್ವನಾಥ ನ ದರ್ಶನ ಪಡೆದುಕೊಂಡು ಸೋಮನಾಥ ˌ ಮುರಡೇಶ್ವರ ಹಾಗೂ ಎಲ್ಲಾ ಶಿವಲಿಂಗಗಳ ದರ್ಶನ ಪಡೆದುಕೊಂಡು ಮೌಂಟ್ ಅಬುಗೆ ತೆರಳಿ ಬಾಬನ ಮಿಲನದಲ್ಲಿ ಪಾಲ್ಗೊಳ್ಳುವರು.
ಯಾತ್ರರ್ತಿಗಳಿಗೆ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿಯವರು ಸಿಹಿ ತಿನಿಸುವ ಮೂಲಕ ಯಲಬುರ್ಗಾ ಪಟ್ಟಣದಿಂದ ಬಿಳ್ಕೊಟ್ಟರು.