
ಡಾ/ಪುನೀತರಾಜಕುಮಾರ ಹುಟ್ಟು ಹಬ್ಬ ಅಚರಣೆ
ಅವರ ಸಾಧನೆ.ಸಮಾಜಸೇವೆ ಎಂದಿಗೂ ಮರಯಲು ಸಾಧ್ಯವಿಲ್ಲ
ತಾಪಂ. ಸದಸ್ಯ ಶರಣಪ್ಪ ಈಳಗೇರ ಅಭಿಮತ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 17 – ನಟ ಡಾ/ಪುನೀತರಾಜಕುಮಾರ ಅವರು ಮಾಡಿದ ಸಮಾಜ ಸೇವೆ ಧಾನ ಧರ್ಮ.ಪರೋಪಕಾರಗಳು.ನಾಡಿನ ಜನತೆ ಎಂದಿಗೂ ಮರಯಲು ಸಾಧ್ಯವಿಲ್ಲ.ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಈಳಗೇರ ಹೇಳಿದರು.
ಪಟ್ಟಣದ ಕನ್ನಡ ಕ್ರಿಯಾ ಸಮಿತಿ ಸಕ೯ಲ್ ಹತ್ತಿರ ಇರುವ ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ಯ ಅಪ್ಪು ಹುಡುಗರ ಸಂಘ ಯಲಬುರ್ಗಾ ಇವರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಅಪ್ಪು ಹುಟ್ಟಿದ, 6ತಿಂಗಳಲ್ಲಿ ತಮ್ಮ ತಂದೆಯ ಜೊತೆ ಕನ್ನಡ ಚಿತ್ರರಂಗದಲ್ಲಿ ಬಾಲ್ಯದಿಂದಲೇ ಕಲಾವಿದರಾಗಿ.
ಉತ್ತಮ ಅಭಿನಯದಿಂದ ರಾಷ್ಟ್ರ ಪ್ರಶಸ್ತಿ ವಿಜೇತ .ಮತ್ತು ಸಾಕಷ್ಟು ಪ್ರಶಸ್ತಿಗಳನ್ನು ಪಡೆದು ಕನ್ನಡ ಚಿತ್ರರಂಗದ ಉತ್ತಮ ನಾಯಕನಟರಾಗಿ.ಗಾಯಕರಾಗಿಚಿತ್ರಗಳಲ್ಲಿ ತಮ್ಮದೇ ಯಾದ ಅಮೋಘ ಡ್ಯಾನ್ಸ್ ಜನರಿಗೆ ಸಂದೇಶ ಕೊಡುವಂತೆ ಪಾತ್ರಗಳಲ್ಲಿ ಅಭಿನಯಿಸಿ ಆ ಪಾತ್ರಕ್ಕೆ ಜೀವ ತುಂಬುವಂತೆ ಅತ್ಯುತ್ತಮ ಕಲಾವಿದ ಅಪ್ಪು ಅವರು ಜೀವಿತಾವಧಿಯಲ್ಲಿ ಮಾಡಿದ ಸಾಧನೆ ಸಮಾಜಸೇವೆ ಪ್ರತಿಯೂಬ್ಬರಿಗೆ ಮಾರ್ಗ ದಶ೯ನವಾಗಿದೆ ಪುನೀತ್ ಅವರು ನಾಡಿನ ಜನರ ಮನಸ್ಸಿನಲ್ಲಿ ಅಜರಾಮರಾಗಿದ್ದಾರೆ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ Sanj ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಅನ್ನ ಸಂತರ್ಪಣೆ ನಿರಂತರ ನಡೆಯಿತು.ನಂತರ ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಪ್ಪ ಮೇಟಿ ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯಾದ ಇವರು ಪುನೀತ್ ರಾಜಕುಮಾರ್ ಪುತ್ಥಳಿ ನೋಡುವದಕ್ಕಾಗಿ ರೋಣದಿಂದ ಯಲಬುರ್ಗಾ ತಾಲೂಕಿನ ಪುನೀತ್ ರಾಜಕುಮಾರ್ ಪುತ್ಥಳಿ ಕಣ್ಣು ತುಂಬಾ ನೋಡಿ ನಂತರ ಅವರ ಸಕ೯ಲ್ ನ ಮುಂದೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ಟ ಮಾಡುವ ಮೂಲಕ ಆಚರಸಿ ಕೇಕ್ ಎಲ್ಲಾ ಅಭಿಮಾನಿಗಳಿಗೆ ಹಂಚಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ.ಈರಪ್ಪ ಕುಡಗುಂಟಿ ಡಾಕ್ಟರ್ ಶಿವನಗೌಡ ದಾನರಡ್ಡಿ ವೀರಣ್ಣ ಹುಬ್ಬಳ್ಳಿ. ಮಂಜುನಾಥ ಅಧಿಕಾರಿ. ಡಾಕ್ಟರ್ ಅನ್ನದಾನೇಶ ಗದ್ದಿ. ಮುಖಂಡರಾದ ಅಪ್ಪು ಹುಡುಗರ ಸಂಘದ ಅಧ್ಯಕ್ಷ .ಮತ್ತು ಉಪಾಧ್ಯಕ್ಷ ಮತ್ತು ಸವಿ ಸದಸ್ಯರು ಶಂಕರ ಟೆಂಗಿನಕಾಯಿ. ವಿಜಯ ಜಕ್ಕಲಿ.ಮತ್ತು ಅಭಿಮಾನಿಗಳು ಮತ್ತು ಇತರರು ಭಾಗವಹಿಸಿದರು.