87a858ed-882f-4724-bd35-9ce1335009b3

ವಿಕಲಚೇತನರ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 8 –  ಪ್ರತಿಯೊಬ್ಬರಿಗೆ ಕಾನೂನು ಅರಿವು ಬಹಳ ಮುಖ್ಯ ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಬರುವ ವಿವಿಧ ಸೌಲಭ್ಯ ಮತ್ತು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಕನ್ನೂರ ಹೇಳಿದರು
ಅವರು    ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ತಾಲೂಕ ನ್ಯಾಯವಾದಿಗಳ ಸಂಘ ಯಲಬುರ್ಗಾ ವಿಕಲಚೇತನರ ಸಬಲಿಕರಣ ಇಲಾಖೆ, ಹಾಗೂ ತಾಲೂಕ ಆಡಳಿತ ತಾಲೂಕ ಪಂಚಾಯತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಪಟ್ಟಣ ಪಂಚಾಯತ್ ಪೋಲೀಸ್ ಇಲಾಖೆ ಅಭಿಯೋಜನಾ ಇಲಾಖೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲ ಚೇತನರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೇರವೂ ಕಾರ್ಯಕ್ರಮ ಜರುಗಿತು
ತಾಲೂಕ ಪಂಚಾಯತ ಸಭಾಂಗಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ವಿಜಯ ಕುಮಾರ ಕನ್ನೂರು ವಿಶ್ವ ವಿಕಲಚೇತನರ ದಿನಾಚರಣೆಯ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ.
ವಿಕಲಚೇತನರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಸಿಗುವಂತಾಗಲು ಪ್ರಾಧಿಕಾರದಿಂದ ಪ್ರಯತ್ನಿಸಲಾಗುವುದು. ವಿಕಲಚೇತನರು ಯಾವುದೇ ರೀತಿಯ ಕಾನೂನು ಸಮಸ್ಯೆಗಳಿದ್ದಲ್ಲಿ ಪ್ರಾಧಿಕಾರಕ್ಕೆ ಭೇಟಿ ನೀಡಬೇಕು ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ. ಸದುಪಯೋಗ ಪಡೆಯದು ಕೊಳ್ಳಬೇಕು 2011 ರ ಜನಗಣತಿ ಪ್ರಕಾರ 13 ಲಕ್ಷ ಜನ ವಿಕಲ ಚೇತನರು ಇದ್ದಾರೆ ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಶೇಖಡಾ 5 ಅನುದಾನ ಮಿಸಲಾಗಿರುತ್ತದೆ ಅದನ್ನುಸದ್ಭಳಕೆ ಮಾಡಿಕೊಳ್ಳಬೇಕು.ಯೋಜನೆಗಳ ಅರಿವೂ ಮೂಡಿಸಬೇಕು.ಯಾರು ಯುಡಿ .ಆಯ್.ಡಿ. ಕಾರ್ಡನ ಸೌಲಭ್ಯ ಯಾರು ಪಡೆದಿಲ್ಲವೋ ಅಂತವರು ಸೌಲಭ್ಯ ಪಡೆದು ಕೊಳ್ಳಬೇಕೆಂದರು.ವಿಕಲ ಚೇತನರು ರಾದಕೀಯವಾಗಿ ಶೇಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಯಾರು ದೃತಿಗೇಡಬಾರದು ಎಂದರು

ಈ ಸಮಾರಂಭದ ಅಧ್ಯಕ್ಷತೆಯನ್ನು ತಾ ಪಂ ಇಓ ಸಂತೋಷ ಬೀರದಾರ ಪಾಟೀಲ್,ತಹಶೀಲ್ದಾರ್ ಬಸವರಾಜ ತೆನ್ನಳ್ಳಿ.ವಕೀಲರ ಸಂಘದ ತಾಲೂಕ ಅಧ್ಯಕ್ಷ ಪ್ರಕಾಶ ಬೆಲೇರಿ. ಜೆಂಟಿ ಕಾರ್ಯದರ್ಶಿ,ಎ,ಎಂ,ಪಾಟೀಲಎಮ್,ಆರ್,ಡಬ್ಲೂ ಬಸವನಗೌಡ ಬನಪ್ಪ ಗೌಡ್ರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ, ವಿಕಲ ಚೇತನರ ಜಿಲ್ಲಾ ಕಾರ್ಯದರ್ಶಿ ಈರಪ್ಪ ಕರೆಕುರಿ, ಮುದಿಯಪ್ಪ ಮೇಟಿ.ವೀರಭದ್ರಪ್ಪ ನಿಡಗುಂದಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!