
ಯುವಕರು ರಕ್ತದಾನ ಮಾಡಿ ಇನ್ನೂಂದು ಜೀವ ಉಳಿಸಬೇಕು :ಡಾ.ಶಿವನಗೌಡ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 3- ಯುವಕರು ತಮ್ಮ ಸ್ವಇಚ್ಛೆಯಿಂದ ಬಂದು ರಕ್ತ ದಾನ ಮಾಡಿ ಇನ್ನೂಂದು ಜೀವ ಉಳಿಸುವದಕ್ಕೆ ಕಾರಣಕತ೯ರಾಗಬೇಕು ಎಲ್ಲಾ ದಾನಕಿಂತ ರಕ್ತ ದಾನ ಶ್ರೇಷ್ಠ ದಾನವಾಗಿದೆ ಸಾಕಷ್ಟು ಯುವಕರು ದುಶ್ಚಟಗಳಿಗೆ ಬಲಿಯಾಗದೆ ಎಂದರು.
ಉತ್ತಮ ಭವಿಷ್ಯವಿರುವ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ರಕ್ತದಾನ ಮಾಡುವದರಿಂದ ಮಾನಸಿಕ ಒತ್ತಡ ಕಡಿಮೆ ದೇಹದಲ್ಲಿ ಹೂಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತ ದಾನ ಮಾಡುವದರಿಂದ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಡಾಕ್ಟರ್ ಶಿವನಗೌಡ ದಾನರೆಡ್ಡಿ ಹೇಳಿದರು.
ಪಟ್ಟಣದ ಜನನಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಯಲಬುರ್ಗಾ ಶ್ರೀ ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಮತ್ತು ನಸಿ೯ಂಗ್ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ಯಲಬುರ್ಗಾ ಘಟಕ ಇವರ ಸಹಯೋಗದೊಂದಿಗೆ ವೈದ್ಯರ ದಿನಾಚರಣೆ ನಿಮಿತ್ತ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಕರು ರಕ್ತ ದಾನ ಮಾಡುವದರಿಂದ ದೇಹಕ್ಕೆ ಯಾವುದೇ ಹಾನಿಯಿಲ್ಲ ರಕ್ತದಾನ ಆರೋಗ್ಯ ವೈದ್ದಿಯಾಗುತ್ತದೆ ಇತ್ತೀಚಿನ ದಿನಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಹೆಚ್ಚಾಗುತ್ತದೆ.
ಸದೃಢವಾದ ಯುವಕರ ರಕ್ತ ನೀಡುವುದರಿಂದ ತಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಇದರಿಂದ ನಿಮ್ಮ ದೇಹದಲ್ಲಿ ನವಚೈತನ್ಯ ಬರುತ್ತದೆ ಸಂತೋಷದಿಂದ ಜೀವನ ಸಾಗಿಸಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷರಾದ ರಂಗನಾಥ್ ವಲ್ಮಕೂಂಡಿ ಅಧ್ಯಕ್ಷತೆ ವಹಿಸಿ ನಂತರ ಅವರು ಮಾತನಾಡಿ ಪ್ರತಿಯೊಬ್ಬರೂ ವೈದ್ಯರನ್ನು ಗೌರವಿಸಬೇಕು ಒಂದು ದೇವರಿಗೆ ಕೈ ಮುಗಿಯತ್ತೇವೆ ಇನ್ನೊಬ್ಬ ದೇವರೆಂದರೆ ವೈದ್ಯರು ಎಂದರು.
ನಮ್ಮ ಭಾಗದಲ್ಲಿ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳು ಇದ್ದು ಆದರೆ ವೈದ್ಯಕೀಯ ಶಿಕ್ಷಣ ಇರಲಿಲ್ಲ ಇದರಿಂದ ನಮ್ಮ ವೈದ್ಯಕೀಯ ಶಿಕ್ಷಣ ಸಂಸ್ಥೆಯಿಂದ ಸಾಧ್ಯವಾದಷ್ಟು ಪ್ರಯತ್ನಿಸಿ ಇಲ್ಲಿಯೇ ಬಡವರು. ಪ್ರತಿಭಾವಂತರು ಹಾಗೂ ವೈದ್ಯಕೀಯ ಶಿಕ್ಷಣ ಆಸಕ್ತಿ ಇರುವಂತರಿಗೆ ಅನುಕೂಲ ಕಲ್ಪಿಸುವ ನಿಮಿತ್ಯ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ.ಹಾಗೂ ಪಾಲಕರ ಸಹಕಾರದಿಂದ ನಮ್ಮ ಸಂಸ್ಥೆಯು ಉತ್ತಮ ರೀತಿಯಲ್ಲಿ ಸಾಗುತ್ತಿರುವುದು ಸಂತೋಷದ ವಿಷಯ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಬ್ಯಾಸದ ಗಮನಹರಿಸಿ ತಮ್ಮ ತಂದೆ ತಾಯಿಗಳ ಆಸೆ ಕನಸು ನನಸು ಮಾಡಬೇಕು ಪ್ರತಿಯೊಬ್ಬ ತಂದೆ ತಾಯಿಗಳಿಗೆ ಮಕ್ಕಳು ಆಧಾರಸ್ತಂಭ ಹೀಗಾಗಿ ಹೆಚ್ಚು ಹೆಚ್ಚು ವಿದ್ಯಾಬ್ಯಾಸ ಮಾಡಿ ಇಂದಿನ ಸ್ಪಧಾ೯ತ್ಮಕ ಯುಗದಲ್ಲಿ ಎಷ್ಟು ಓದಿದರು ಕಡಿಮೆ ವಿದ್ಯಾಥಿ೯ಗಳು ತಮ್ಮ ಊರಿಗೆ ತಮ್ಮ ತಂದೆತಾಯಿಗಳಿಗೆ ಮತ್ತು ಜಿಲ್ಲೆಯಗೆ ಒಳ್ಳೆಯ ಕಿತಿ೯ ತರುವಂತರಾಗಬೇಕು ಎಂದು ಹೇಳಿದರು ಹಾಗೂ ಇಂದು ವೈದ್ಯರ ದಿನ ಆಗಿರುವುದರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಶಿವಕುಮಾರ ದಿವಟರ, ಡಾ.ಶೇಖರ್ ಬಜಂತ್ರಿ, ಡಾ.ಪ್ರಸಾದ್ ಮತ್ತು ಸರ್ಕಾರಿ ವಕೀಲರಾದ ಮಲ್ಲನಗೌಡ ಪೊಲೀಸ್ ಪಾಟೀಲ್, ನಿವೃತ್ತ ಪ್ರಾಂಶುಪಾಲರಾದ ಎಂ.ಎನ್. ಜನಾದ್ರಿ, ಇಂಜಿನಿಯರ್ ಗಂಗಾಧರ್ ಗಸಟ್ಟಿ, ವಕೀಲರಾದ ಪಿ ಆರ್ ಹಿರೇಮಠ, ಐಸಿಟಿಸಿ ಆಪ್ತ ಸಮಾಲೋಚಕರಾದ ಕಾಳಪ್ಪ ಬಡಿಗೇರ, ಶ್ರೀಕಾಂತ್, ಮಂಜುನಾಥ್ ನಾಯಕ, ದೇವಿಂದ್ರಪ್ಪ ಹಿಟ್ನಾಳ್, ಪ್ರಾಚಾರ್ಯ ಪ್ರಾಣೇಶ್ ವಲ್ಮ ಕೂಂಡಿ, ರಾಘವೇಂದ್ರ ಕುಷ್ಟಗಿ ಮತ್ತು ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.