
ರಂಗಭೂಮಿ ನಟ ವೀರಯ್ಯ ಹಿರೇಮಠ ಇನ್ನಿಲ್ಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03 – ಜಿಲ್ಲೆಯ ಕುಕನೂರು ತಾಲೂಕಿನ ಮಂಡಲಗಿರಿ ಗ್ರಾಮದ ರಂಗಭೂಮಿ ನಟ ವೀರಯ್ಯ ಹಿರೇಮಠ (72) ಅವರು ಶನಿವಾರ ಬೆಳಿಗ್ಗೆ ನಿಧಾನರಾಗಿದ್ದಾರೆ.
ಮೃತರು ಇಬ್ಬರು ಪುತ್ರಿಯರು ಇಬ್ಬರುಪುತ್ರರು. ಪತ್ನಿ ಸೇರಿದ್ನಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶ್ರೀ ವೀರಯ್ಯ ಹಿರೇಮಠ ಅವರು ರಂಗಭೂಮಿ ನಟರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. 1993 ರಲ್ಲಿ ಶ್ರೀ ಗುರು ತೊಂಟಾದರ್ಯ ನಾಟ್ಯ ಸಂಘವನ್ನು ಸ್ಥಾಪಿಸಿ. ನಾಡಿಗೆ ಕೊಡುಗೆ ನೀಡಿ ನೂರಾರು ಕಲಾವಿದರಿಗೆ ಬದುಕು ನೀಡಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ನಾಟಕ ಆಕಾಡೆಮಿ ಪ್ರಶಸ್ತಿ ನೀಡಿ ಗೌರಾವಿಸಿದೆ. ಮೃತರ ಅಂತ್ಯಕ್ರಿಯೆ ಇಂದು 3-5-2025 ರಂದು ಸಂಜೆ 6ಗಂಟೆಗೆ ಸ್ವಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ