
ರಥ ಸಪ್ತಮಿ
ಸೂರ್ಯ ದೇವನ ಜನ್ಮ ದಿನ- ಸಂಜೀವ ಮೂರ್ತಿ ದೇಶಪಾಂಡೆ
ರಥ ಸಪ್ತಮಿ/ ಮಾಘ ಸಪ್ತಮಿ/ ಅಚಲ ಸಪ್ತಮಿ
ದಿನಾಂಕ ೧೬-೦೨-೨೦೨೪ ರಥ ಸಪ್ತಮಿ ನಿಮಿತ್ತವಾಗಿ ಲೇಖನ.
ರಥ ಸಪ್ತಮಿಯನ್ನ ಹಿಂದೂ ಪುರಾಣಗಳಲ್ಲಿ ಸೂರ್ಯ ದೇವನ ಜನ ದಿನವೆಂದು ಆಚರಿಸುವ ನಂಬಿಕೆ ಇದೆ,
ಸೂರ್ಯ ಮಂತ್ರ
ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||
ಕೆಂಪು ಬಣ್ಣದ ದಾಸವಾಳ ಹೂವಿನಂತೆ ಕಂಗೊಳಿಸುವ, ಕಶ್ಯಪ ಋಷಿಯ ಮಗನಾದ, ಅತ್ಯಂತ ಪ್ರಕಾಶಮಾನನಾದ, ಕತ್ತಲನ್ನು ನಿವಾರಿಸುವ ಹಾಗೂ ಸರ್ವ ಪಾಪಗಳನ್ನು ನಾಶ ಮಾಡುವ ದಿವಾಕರನಿಗೆ (ಸೂರ್ಯದೇವನಿಗೆ) ನಮಸ್ಕಾರಗಳು.
ಸೂರ್ಯ, ಅಥವಾ ಸೂರ್ಯನನ್ನು ಜ್ಞಾನದ ಪ್ರಕಾಶ ಎಂದು ಕರೆಯಲಾಗುತ್ತದೆ. ಜೊತೆಗೆ, ಅವರು ತಪ್ಪು ಮಾಹಿತಿಯ ನಾಶಕ. ಈ ಗ್ರಹ ವ್ಯವಸ್ಥೆಯಲ್ಲಿ, ಸೂರ್ಯನು ಚೈತನ್ಯದ ಅಡಿಪಾಯವಾಗಿದೆ.
ಗುರುತ್ವಾಕರ್ಷಣೆಯ ಬಲದಿಂದ ಎಲ್ಲಾ ಗ್ರಹಗಳನ್ನು ಅವುಗಳ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಸೂರ್ಯ ಸ್ವಯಂ ಭರವಸೆ, ಜ್ಞಾನ, ಶಕ್ತಿ ಮತ್ತು ಸ್ವಯಂ ಗುರುತಿನ ಭಾವನೆಯನ್ನು ಪ್ರತಿನಿಧಿಸುತ್ತಾನೆ. ಅವನು ಆಕಾಶಕಾಯಗಳ ಸಾಮ್ರಾಜ್ಯದ ಅಧಿಪತಿ. ಅವನು ಏಳು ಕುದುರೆಗಳಿಂದ ಎಳೆಯಲ್ಪಟ್ಟ ಏಕ ಚರ್ಕದ ರಥವನ್ನು ಗರುಡನ ಸೋದರನಾದ ಕಾಲುಗಳಿಲ್ಲದ ಅರೂಣನನ್ನು ಸಾರಥಿ ( ಹಾಗಾಗೀಯೆ ಬೆಳಿಗ್ಗೆ ಸೂರ್ಯೊದಯ ಕ್ಕಿಂತ ಮುಂಚೆ ಅರೂಣೊದಯ) ಏರುತ್ತಾನೆ, ಪ್ರತಿಯೊಂದೂ ವಾರದ ಏಳು ದಿನಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ, ಮಳೆಬಿಲ್ಲಿನ ಏಳು ವರ್ಣಗಳು ಅಥವಾ ಅರಿವಿನ ಏಳು ರಾಜ್ಯಗಳನ್ನು ಪ್ರತಿನಿಧಿಸುತ್ತದೆ. ಮಧ್ಯದಲ್ಲಿ ಚುಕ್ಕೆ ಇರುವ ಉಂಗುರವು ಸೂರ್ಯನ ಲಾಂಛನವಾಗಿದೆ. ಚುಕ್ಕೆ ಸೃಷ್ಟಿಯ ಮೂಲವನ್ನು ಪ್ರತಿನಿಧಿಸುತ್ತದೆ, ಆದರೆ ವೃತ್ತವು ಅದರ ಅರಿತುಕೊಂಡ ಉಪಸ್ಥಿತಿಯನ್ನು ಪ್ರತಿನಿಧಿಸುತ್ತದೆ.
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನವಗ್ರಹಗಳಲ್ಲಿ ನಾನು ಸೂರ್ಯನು ಯೆಂದು ಹೇಳಿದ್ದಾನೆ,ಸೂರ್ಯನು ಛಾಯಾ/ ಸಂಜನಾ ದೇವಿಗಂಡನು, ಯಮ, ಶನಿ ದೇವನ ತಂದೆಯು, ಮಹಾಭಾರತದ ಕರ್ಣನ ತಂದೆಯು ಹೌದು.
ಸೂರ್ಯ ಚಂದ್ರರು ಭಗವಂತನ ೨ ಕಣ್ಣುಗಳು ; ಭರತಖಂಡದ ಬುಹುತೇಕ ರಾಜ ಮನೆತನಗಳು ಸೂರ್ಯ / ಚಂದ್ರ ವಂಶದ ಅರಸರು ಆಳಿದ್ದಾರೆ, ಪ್ರಭೂ ಶ್ರೀ ರಾಮನ ಅವತಾರ ಸೂರ್ಯವಂಶದಲ್ಲಿ ಆಗಿದೆ.
ಯೋಗ ಗಳಲ್ಲಿ ಸೂರ್ಯನಮಸ್ಕಾರಕ್ಕೆ ಬಹು ಪ್ರಾಮುಖ್ಯತೆ, ” ನಮಸ್ಕಾರ ಪ್ರೀಯ ಭಾನು” ಸೂರ್ಯನಿಗೆ ನಮಸ್ಕಾರ ಅತೀಪ್ರಯವಾದದ್ದು, ವೈಜ್ಞಾನಿಕ ವಾಗಿಯೂ ಬೆಳೆಗ್ಗಿನ ಸೂರ್ಯ ನಮಸ್ಕಾರ ಆರೋಗ್ಯ ಕ್ಕೆ ಒಳ್ಳೆಯದು, ಸಾಧಕರು ಪ್ರತಿದಿನ ಸೂರ್ಯನಿಗೆ ಸಂಧ್ಯಾವಂದನೆ ನಂತರ ಅರ್ಘ್ಯ ಕಡ್ಡಾಯವಾಗಿ ಕೊಡುತ್ತಾರೆ,
ಸೂರ್ಯದೇವನು ಪಾಪನಾಶಕ, ಏಳು ವಿಧದ ಪಾಪಗಳಿವೆ ಎಂಬುದು ಸಾಮಾನ್ಯ ನಂಬಿಕೆ. ಅವುಗಳಲ್ಲಿ ಒಂದನ್ನು ‘ತಿಳಿವಳಿಕೆಯಿಂದ ಮಾಡಿದ ಪಾಪಗಳು’ ಎಂದು ಕರೆಯಲಾಗುತ್ತದೆ, ಇದರಲ್ಲಿ ವ್ಯಕ್ತಿಯು ಪಾಪದ ಬಗ್ಗೆ ತಿಳಿದಿರುತ್ತಾನೆ ಅಥವಾ ಅವನು ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಾನೆ. ಇನ್ನೊಂದು ಪಾಪವನ್ನು ತಿಳಿಯದೆ ಮಾಡಲಾಗುತ್ತದೆ, ಅದರಲ್ಲಿ ವ್ಯಕ್ತಿಯು ತನ್ನ ಅರಿವಿಲ್ಲದೆ ಪಾಪವನ್ನು ಮಾಡುತ್ತಾನೆ. ಇನ್ನೊಂದು ರೀತಿಯ ಪಾಪವು ಮನಸ್ಸಿನಿಂದ ಉಂಟಾಗುತ್ತದೆ, ಇದರಲ್ಲಿ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಹೊಂದಿದ್ದಾನೆ.
‘ಪಾಪದಿಂದ’ ಎಂಬುದು ವ್ಯಕ್ತಿಯು ಕೆಟ್ಟ ಮಾತುಗಳನ್ನು ಹೇಳುವ ಇನ್ನೊಂದು ವಿಧವಾಗಿದೆ. ಆರನೆಯ ವಿಧವು ‘ದೇಹದ ಪಾಪಗಳಿಂದ’, ಇದರಲ್ಲಿ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಕೆಲವು ಕಷ್ಟಗಳನ್ನು ಮಾಡುವ ಮೂಲಕ ಪಾಪವನ್ನು ಮಾಡುತ್ತಾನೆ. ಕೆಲವೊಮ್ಮೆ ಕಳೆದ ಜನ್ಮದಲ್ಲಿ ಮಾಡಿದ ಪಾಪಕ್ಕೆ ವ್ಯಕ್ತಿಯು ಹೊಣೆಗಾರನಾಗುತ್ತಾನೆ, ಇದು ಏಳನೇ ರೀತಿಯ ಪಾಪವಾಗಿದೆ.
ಸೂರ್ಯನ ವಿವಿಧ ಹೇಸರುಗಳು
ಪ್ರಭಾಕರ,
ಮಾರ್ತಾಂಡ
ಖಗಾಯ
ಪುಷ್ನೇ ನಮಃ
ಹಿರಣ್ಯಗರ್ಭಾಯ
ಮಾರಿಚೇಯ
ಆದಿತ್ಯಾಯ
ರವಿ ಭಾಸ್ಕರ
ಸಾವಿತ್ರೇ
ಅರ್ಕಾಯ
ಭಾಸ್ಕರಾಯ ಹೀಗೆ ಅನೇಕ ಹೇಸರುಗಳಿವೆ.
ಶ್ರೀ ಯಾಜ್ಞವಲ್ಕ್ಯರು ಭಗವಾನ ಸೂರ್ಯದೇವನಿಂದ ಶುಕ್ಲ ಯಜುರ್ವೇದ ಪಡೆದರು,ಉತ್ತರಭಾರತದಲ್ಲಿ ಛಾಟ್ ಉತ್ಸವದ ಮೂಲಕ ಸೂರ್ಯನ ಆರಾಧನೆ ಮಾಡುತ್ತಾರೆ,
ನಮ್ಮ ಹಿರಿಯರು ದಾನ ಕೊಡುವಾಗ ದಾನಪತ್ರದಲ್ಲಿ ಸೂರ್ಯ ಚಂದ್ರರಿರುವ ತನಕ ಯೆಂದು ಬೆರಸುವುದು ವಾಡಿಕೆ ಯಾಗಿತ್ತು ದೇಶದ ಬಹುತೇಕ ಶಿಲಾಶಾಸನಗಳಲ್ಲಿ ಉಲ್ಲೇಖಗಳಿವೆ, ಶಿಲಾಶಾಸನಗಳಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳನ್ನು ಕೆತ್ತಲಾಗುತ್ತಿತ್ತು.
ಓರಿಸ್ಸಾದ ಕೊನಾರ್ಕ ಸೂರ್ಯ ದೇವಾಲಯ ಸೂರ್ಯ ದೇವನ ಪ್ರಮುಖ ದೇವಾಲಯವಾಗಿದೆ ಅದು ವಿಜ್ಞಾನಕ್ಕು ಸವಾಲಾಗಿದೆ, ದುರುಳರ ಕೈಯಿಂದ ನಲುಗಿದ ದೇವಾಲಯ ಇಗ ಪೂರ್ನುಜ್ಜಿವನ ವಾಗುತ್ತಿದೆ,
ಕಾಶ್ಮೀರದ ಸೂರ್ಯ ದೇವಾಲಯವು ಪುನರ್ ನಿರ್ಮಾಣ ಬಯಸುತ್ತಿದೆ,ಭಾರತದ ಬಹುತೇಕ ಕಡೆ ಸೂರ್ಯನಿಗಾಗೆ ಮಿಸಲಾದ ದೇವಾಲಯಗಳಿವೆ, ನಮ್ಮ ಹಂಪೆಯಲ್ಲೂ ಸೂರ್ನಿಗೆ ಮಿಸಲಾದ ದೇವಸ್ಥಾನಗಳಿವೆ.
ಪುರಾತನ ದೇವಾಲಯಗಳಲ್ಲಿ ಸೂರ್ಯ ಚಂದ್ರ ಪರಿವಾರದ ಮೂರ್ತಿಗಳಿವೆ,ಶಣ್ಮತಗಳಲ್ಲಿ ಸೂರ್ಯೊಪಾಸನೆಯು ಒಂದು, ನಮ್ಮ ಪಂಚಾಂಗ ಸೂರ್ಯ / ಚಂದ್ರ ಆಧರಿತ (ಸಿದ್ದಾಂತ).
ಸೂರ್ಯನಿಂದಲೆ ಪ್ರಾಣಿಗಳಿಗೆ ಹಗಲು ರಾತ್ರಿ, ದೇವರಿಗೂ ಉತ್ತರಾಯಣ/ ದಕ್ಷಿಣಾಯಣ ಹಗಲು ರಾತ್ರಿ.ಒಟ್ಟಿನಲ್ಲಿ ಸೂರ್ಯನಿಲ್ಲದೆ ಧರ್ಮವಿಲ್ಲ, ನಿಸರ್ಗವಿಲ್ಲ ವಿಜ್ಞಾನವಿಲ್ಲ.
ಇಂದಿ ಆಧುನಿಯ ಯುಗದಲ್ಲಿ ಸೌರ್ಯ ವಿದ್ಯುತ್ ಉಪಯೋಗಿಸಲಾಗಿತ್ತಿದೆ ಭಾರತ ಮುಂಚೂಣಿಯಲ್ಲಿದೆ, ಜಗತ್ತಿನ ಜನರು ಬಟ್ಟೆಹಾಕಿಕೊಳ್ಳುದಕ್ಕಿಂತಲು ಮುಂಚೆಯಿಂದಲು ಭಾರದ ಸೂರ್ಯನ ಬಗೆಗೆ ಅಪಾರ ವಾದ ಜ್ಞಾನ ಹೊದಿತ್ತು, ಸಂತ ತುಳಸಿದಾಸರ ಪ್ರಸಿದ್ದ ಹನುಮಾನ ಚಾಲಿಸದಲ್ಲಿ ಸೂರ್ಯನ ದೂರವನ್ನು ನಿಖರವಾಗಿ ಹೇಳಲಾಗಿದೆ,ಉ
ನಮ್ಮ ಹೆಮ್ಮೆಯ ಇಸ್ರೊ ಇಗ ಸೂರ್ಯನ ಬಗೆಗ ಆದ್ಯಯನದಲ್ಲಿ ವಿಶ್ವದಲ್ಲೆ ಮುಂಚೂಣಿ ಸ್ಥಾನವನ್ನು ಪಡೆದಿರುವುದು ಭಾರತೀಯರಿಗೆ ಹೆಮ್ಮಯ ವಿಷಯ.
ಸಂಜೀವ ಮೂರ್ತಿ ದೇಶಪಾಂಡೆ
ಹವ್ಯಾಸಿ ಬರಹಗಾರ, ಕೊಪ್ಪಳ