
ರವಿವಾರ 26 ರಂದು ಧೀಮಹಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೪- ನಗರದ ಕಿನ್ನಾಳ ರಸ್ತೆಯ ಸುಶೋಭಿತ ಸಂಕೀರ್ಣದಲ್ಲಿ ಧೀಮಹಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ ಹಾಗೂ ಗಣಪತಿ ಹಾಗೂ ಲಕ್ಮೀ ಕುಬೇರ ಪೂಜಾ ಕಾರ್ಯಕ್ರಮ ಇದೇ ರವಿವಾರ ನಂ, 26 ರಂದು ಬೆಳಿಗ್ಗೆ ೧೦ಕ್ಕೆ ಜರುಗಲಿದೆ.
ವೇದಿಕೆ ಕಾರ್ಯಕ್ರಮ ಉದ್ಗಾಟನೆಯನ್ನು ಬೆಂಗಳೂರಿನ ಹಿಂದೂ ಸೇವಾ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಮಿಲಿಂದ ಗೋಖಲೆ ಮಾಡಲಿದ್ದು.ಸಹಕಾರಿ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿತಿಗಳಾಗಿ ಬ್ರಾಹ್ಮಣ ಸಮಾಜದ ಮುಖಂಡರಾದ ಜಗನ್ನಾಥಚಾರ್ಯ ಹುನಗುಂದ, ಅಪ್ಪಣ್ಣ ಪದಕಿ,ಶ್ರೀಮತಿ ಮದುರಾ ಕರ್ಣಂ ಹಾಗೂ ಶ್ರೀ ಗವಿಸಿದ್ದೇಶ್ವರ ಬ್ಯಾಂಕ ಅಧ್ಯಕ್ಷ ರಾಜಶೇಖರ ಆಡುರು ಇತರರು ಆಗಮಿಸಲಿದ್ದಾರೆ.
ಆಡಲಿತ ಮಂಡಳಿ ಸದಸ್ಯರಾದ ರಾಮರವ್ ಪಟವಾರಿ, ಪ್ರಾಣೇಶಆಚಾರ ತುಪ್ಪಸಕ್ರಿ,ಗೋಪಾಲಕೃಷ್ಣ ಜೋಷಿ ,ಸುಶೀಲೇಂದ್ರ ದೇಶಪಾಂಡೆ, ರಾಘವೇಂದ್ರ ದೇಸಾಯಿ,ಬಸವರಾಜ ಬಿ ನಾಯಕ, ಶ್ರೀಮತಿ ಶಾರದಾ ಸಿ ದೇಶಪಾಂಡೆ,ಶ್ರೀಮತಿ ಪುಷ್ಪಾವತಿ ದೇಶಪಾಂಡೆ,ಅಮೀತ ಕಂಪ್ಲಿಕರ್, ಸುರೇಶ ಮಳಲಿ, ಸುಬ್ರಹ್ಮನ್ಯ ದೇಶಪಾಂಡೆ, ಭಾರತೀಶ ಜೋಷಿ, ಅಸಂಗೆಪ್ಪ ಹಿರೇವಡ್ರಕಲ್,ಯೋಗೀಶ ಎಸ್, ಹೊಸಪೇಟೆ ,ಶಕುಂತಲಾ ಪಾಟೀಲ್, ಸುರೇಖಾ ಕುಲಕರ್ಣಿ ಇತರರು ಆಗಮಿಸಲಿದ್ದಾರೆ.