WhatsApp Image 2024-01-19 at 6.07.04 PM

ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಮೇಲುಗೈ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ ,19- ಶಾ ಗಿರಿಧಾರಿ ಲಾಲ್ ಜೀ ಶೇರಾಜಿ ಪಾಲರೇಚ ಮೆಮೋರಿಯಲ್ ಥಿಯೋಸಾಫಿಕಲ್ ಬಾಲಕಿಯರ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ ವಿಷಯದ ಕ್ವಿಜ್ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಹೊಸಪೇಟೆ ನಗರದ ಪ್ರೌಢಶಾಲೆಯ 15 ವಿದ್ಯಾರ್ಥಿಗಳ ತಂಡ ಕ್ವಿಜ್ ರಸಪ್ರಶ್ನೆಯಲ್ಲಿ ಭಾಗವಹಿಸಲು ಬಂದಿದ್ದು ಅದರಲ್ಲೇ 10 ತಂಡಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು,  ಈ ಕುರಿತು ರಸಪ್ರಶ್ನೆ ಕಾರ್ಯಕ್ರಮದ ಸಂಯೋಜಕರಾದ ನಿವೃತ್ತ ಹಿಂದಿ ಶಿಕ್ಷಕ ಮಾಲಿ ಓಂ ಪ್ರಕಾಶ್ ಮಾತನಾಡಿ ಹಿಂದಿ ಭಾಷೆಯಲ್ಲಿ ನಡೆಸುವ ಶೇ60% ರಸಪ್ರಶ್ನೆಗಳು ಹಿಂದಿ ಪುಸ್ತಕದ ಆಧಾರಿತ ರಸಪ್ರಶ್ನೆಗಳನ್ನು ಮಕ್ಕಳಿಗೆ ಕೇಳಲಾಗುವುದು. ಉಳಿದ ಶೇ40% ಇತರ ಸಾಮಾನ್ಯ ಜ್ಞಾನ ಆಧಾರಿತ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರಥಮ, ದ್ವಿತೀಯ, ತೃತೀಯ, ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಲಾಗುವುದು. ಜೊತೆಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಪ್ರತಿ ಶಾಲೆಯಿಂದ ನಾಲ್ಕು ಮಕ್ಕಳಂತೆ ಒಂದು ತಂಡ ಎಂದು ಭಾವಿಸಲಾಗುವುದು. 10 ತಂಡ ಹೊರತುಪಡಿಸಿ ಉಳಿದ ಎಲ್ಲಾ ತಂಡದ ಮಕ್ಕಳಿಗೆ ಕೆಲವು ವಸ್ತುಗಳನ್ನು ಬಹುಮಾನವಾಗಿ ಕೊಡಲಾಗುವುದು. ಈ ಕಾರ್ಯಕ್ರಮದಲ್ಲಿ ಬಹುತೇಕ ಹೆಣ್ಣು ಮಕ್ಕಳೇ ಹೆಚ್ಚಿನ ಹಿಂದಿ ರಸಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಅದು ನಮಗೆ ಖುಷಿ ಕೊಟ್ಟಿದೆ ಮುಂದಿನ ದಿನಗಳಲ್ಲಿ ಇಂತಹ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ಮಾಡುತ್ತೇವೆ ಎಂದು ಅವರು ಹೇಳಿದರು.
ಥಿಯೋಸಾಫಿಕಲ್ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಗದೀಶ್ ಪಿಎಂ ಮಾತನಾಡಿ ಮಕ್ಕಳಲ್ಲಿರುವ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಅವರಲ್ಲಿ ಇರುವಂತ ಕೌಶಲ್ಯವನ್ನು ಗುರುತಿಸಬೇಕು ಎನ್ನುವ ದೃಷ್ಟಿಯೇ ಕಾರ್ಯಕ್ರಮದ ಉದ್ದೇಶ ಆಗಿದೆ ಎಂದರು.ಎಸ್ ಎಸ್ ಎಲ್ ಸಿ ಪರೀಕ್ಷೆಯ ಪಠ್ಯಕ್ರಮಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಸುಮಾರು 5 ರಿಂದ 6 ಸುತ್ತುಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಅತ್ಯಂತ ಗೌರವ ಪೂರಕವಾದ ಪ್ರಶಸ್ತಿಗಳನ್ನು ನೀಡಲು ಸಂಸ್ಥೆ ನಿರ್ಧರಿಸಿದ್ದು ಮಕ್ಕಳ ವಿಭಿನ್ನವಾದ ಕಲೆ ಮತ್ತು ಜಾಣ್ಮೆಯನ್ನು ಗುರುತಿಸುವ ಕಾರ್ಯಕ್ರಮ ಇದಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!