ರಸ್ತೆ ಅಪಘಾತ ಗೌಂಡಿ ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ಸಮಿಪದ ಭಾಗ್ಯನಗರ ಕ್ರಾಸನಲ್ಲಿ ಗೌಂಡಿ ಕೆಲಸ ಮುಗಿಸಿಕೊಂಡು ಮನೆಗೆ ಊಟಕ್ಕೆ ಹೊರಟಾಗ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯು ಭಾಗ್ಯನಗರದ ಶೇಖರಪ್ಪ ಹುಣಸಿಮರದ (58) ಎಂದು ತಿಳಿದು ಬಂದಿದೆ. ಬೈಕ್ ಡಿಕ್ಕಿಯಾಗಿ ಗಾಯಗೊಂಡು ಕಳೆದ ಎರಡು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬೈಕ್ ಚಾಲಕ ನವೀನಕುಮಾರ ತರಕಾರಿ ಎಂಬುವರು ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.