
ರಾಜಶೇಖರ ಹಿಟ್ನಾಳ ಗೆಲುವುಗೆ ಮುಖ್ಯ ಮಂತ್ರಿ ಆಥಿ೯ಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಸಂತಸ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 4- ಕೊಪ್ಪಳ ಲೋಕಸಭಾ ಈ ಬಾರಿ ಕುತೂಹಲ ಕೆರಳಿಸಿದ್ದ ಹಿನ್ನಲಿಯಲ್ಲಿ 15 ವಷ೯ದ ನಂತರ ಕೊಪ್ಪಳ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಮಡಿಲಿಗೆ ನಮ್ಮ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವುಗೆ ಮುಖ್ಯ ಮಂತ್ರಿ ಆಥಿ೯ಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕತ೯ರು ರಾಜಶೇಖರ ಹಿಟ್ನಾಳ ವಿಜಯೋತ್ಸವದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಭರ್ಜರಿ ಜಯಗಳಿಸಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಸತತ ಹದಿನೈದು ವರ್ಷಗಳ ಕಾಲ ಹಿಡಿತ ಸಾಧಿಸಿದ್ದ ಬಿಜೆಪಿ ಈ ಬಾರಿ ಸೋಲು ಅನುಭವಿಸಿದೆ.
ಬಿಜೆಪಿಗೆ ಫಲ ನೀಡದ ಬದಲಾವಣೆ ತಂತ್ರ:ಕರಡಿ ಸಂಗಣ್ಣ, ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷ ಸೇರಿ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರು. ಕೊಪ್ಪಳದಲ್ಲಿ ಬಿಜೆಪಿ ಸೋಲು, ಕರಡಿ ಸಂಗಣ್ಣಗೆ ಟಿಕೆಟ್ ತಪ್ಪಿಸಲು ಕಾರಣವಾಗಿದ್ದ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ ಕ್ಷೇತ್ರಕ್ಕೆ ಅಷ್ಟಾಗಿ ಚಿರಪರಿಚಿತರಿದ ಡಾ. ಬಸವರಾಜ ಕ್ಯಾವಟರ್ ಟಿಕೆಟ್ ನೀಡಿದ್ದು, ಸಂಗಣ್ಣ ಕರಡಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದರಿಂದ, ಹೈಕಮಾಂಡ್ ನಾಯಕರ ಲೆಕ್ಕಾಚಾರ ತಲೆಕೆಳಗೆ ಮಾಡಿವೆ.
ಕೂಪ್ಪಳ ಲೋಕಸಭಾ ಚುನಾವಣೆಯಲ್ಲಿ 2008, 2013, 2019 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸತತ 3ಬಾರಿ ಗೆಲವು ಸಾಧಿಸಿದ್ದರು. ಈ ಬಾರಿ ಕೂಡ ಗೆಲುವಿನ ವಿಶ್ವಾಸದಲ್ಲಿಯೇ ಬಿಜೆಪಿ ನಾಯಕರು ಇದ್ದರು. ಆದರೆ ಯಾವಾಗ ಬಿಜೆಪಿ ಟಿಕೆಟ್ ಬದಲಾವಣೆಯಾಯ್ತೋ, ಆಗ ಕಾಂಗ್ರೆಸ್ ನಾಯಕರು ಸಂಗಣ್ಣ ಕರಡಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅವರು ಮತ್ತು ಪಕ್ಷದ ಮುಖಂಡರ ಕಾರ್ಯಕತ೯ರ ಒಗ್ಗಟ್ಟಾಗಿ ಪರಿಶ್ರಮದಿಂದ ನಮ್ಮ ರಾಜಶೇಖರ್ ಹಿಟ್ನಾಳ ಗೆಲುವು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರನಗೌಡ್ರ ಪೋ ಪಾಟೀಲ, ಪಕ್ಷದ ವಕ್ತಾರ ಡಾಕ್ಟರ್ ಶಿವನಗೌಡ್ರ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಸುಧೀರ್ ಕೂಲ೯ಹಳ್ಳಿ, ಅಂದಾನಗೌಡ ಪೋಲಿಸ್ ಪಾಟೀ,ಲ ಮಾಂತೇಶ ಗಾಣಗೇರ, ಪ.ಪಂ.ಸದಸ್ಯರಾದ ಹನುಮಂತ ಬಜಂತ್ರಿ, ರೇವಣಪ್ಪ ಹಿರೇಕುರಬರ, ಆನಂದ ಉಳ್ಳಾಗಡ್ಡಿ, ಎಚ್.ಎಸ್.ಕುರಿ, ಶಂಕರ್ ಉಳ್ಳಾಗಡ್ಡಿ, ರೈಮನಸಾಬ ನಾಯಕ ಮತ್ತು ಪಕ್ಷದ ಮುಖಂಡರು, ಕಾರ್ಯಕತ೯ರು, ಅಭಿಮಾನಿಗಳು ಭಾಗವಹಿಸಿದ್ದರು.